Digital India Sale: ರಿಲಯನ್ಸ್​ ಡಿಜಿಟಲ್ ಇಂಡಿಯಾ ಸೇಲ್​ ನಲ್ಲಿ ಈ ಡಿವೈಸ್​ಗಳ ಮೇಲೆ ಬಂಪರ್ ಆಫರ್​!

ಈಗಾಗಲೇ ಫ್ಲಿಪ್​ಕಾರ್ಟ್ ಅಮೆಜಾನ್ ವಿಶೇಷ ಆಫರ್​ ಸೇಲ್​ ಅನ್ನು ಆರಂಭಿಸಿರುವುದು ನಮಗೆ ಗೊತ್ತಿರುವ ವಿಚಾರ. ಇದೀಗ ರಿಲಯನ್ಸ್​ ಡಿಜಿಟಲ್​ ಗ್ರಾಹಕರನ್ನು ಅಪ್​ಗ್ರೇಡ್​ ಮಾಡುವ ನಿಟ್ಟಿನಲ್ಲಿ ರಿಲಯನ್ಸ್​ ಕಂಪೆನಿ ಹೊಸ ಸೇಲ್ ಅನ್ನು ಆರಂಭಿಸಿದೆ.

ರಿಲಯನ್ಸ್​ ಡಿಜಿಟಲ್​ ಇಂಡಿಯಾ ಈ ಸೇಲ್​ನಲ್ಲಿ ಹಲವಾರು ಎಲೆಕ್ಟ್ರಾನಿಕ್ಸ್​ ಸಾಧನಗಳ ಮೇಲೆ ಅದ್ಭುತ ಕೊಡುಗೆಗಳು, ಆಫರ್​ಗಳು ಲಭ್ಯವಿದೆ. ಇದು ಈ ಬಾರಿಯ ರಿಲಯನ್ಸ್​ ಕಂಪೆನಿಯಿಂದ ಪ್ರಾರಂಭವಾದ ಹೊಸ ಸೇಲ್ ಆಗಿದ್ದು, ಹೊಸ ಹೊಸ ಡಿವೈಸ್​ಗಳನ್ನು ಖರೀದಿ ಮಾಡುವ ಪ್ಲ್ಯಾನ್​ನಲ್ಲಿದ್ದವರಿಗೆ ಇದು ಉತ್ತಮ ಸಮಯವಾಗಿದೆ. ಇದಲ್ಲದೆ ಟಿವಿಗಳು, ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ಗಳು, ರೆಫ್ರಿಜರೇಟರ್‌ ಗಳು, ಆಡಿಯೋ ಡಿವೈಸ್‌ ಗಳು ಹಾಗೂ ಇತರೆ ಮೇಲೆ ಆಕರ್ಷಕ ಕೊಡುಗೆಗಳು ಇದರಲ್ಲಿ ಲಭ್ಯವಿದೆ.

ರಿಲಯನ್ಸ್​ ಡಿಜಿಟಲ್ ಇಂಡಿಯಾ ಸೇಲ್​ನಲ್ಲಿ ಹಲವಾರು ಎಲೆಕ್ಟ್ರಾನಿಕ್ಸ್​ ಸಾಧನಗಳು, ಗ್ಯಾಜೆಟ್ಸ್​ಗಳ ಮೇಲೆ ವಿಶೇಷ ಆಫರ್​ ಲಭ್ಯ ಇದ್ದು, ಅವುಗಳ ಮಾಹಿತಿ ಇಲ್ಲಿದೆ.

ಸ್ಮಾರ್ಟ್​​ವಾಚ್​ಗಳ ಮೇಲೆ ಆಫರ್ಸ್​:

  • ರಿಲಯನ್ಸ್​ ಡಿಜಿಟಲ್ ಇಂಡಿಯಾ ಸೇಲ್​ನಲ್ಲಿ ಕೇವಲ 5,990 ರೂ. ಗಳಿಂದ ಪ್ರಾರಂಭವಾಗುವ ಸ್ಯಾಮ್‌ಸಂಗ್‌ ಸ್ಮಾರ್ಟ್ ವಾಚ್‌ಗಳನ್ನು ಖರೀದಿಸಬಹುದು. ಅಲ್ಲದೇ ಆ್ಯಪಲ್ ವಾಚ್ ಸೀರಿಸ್​ 8 ಅನ್ನು ಖರೀದಿಸುವ ಮೂಲಕ 4,999 ರೂ. ಮೌಲ್ಯದ ನಿಯೋಪ್ಯಾಕ್ 3 ಇನ್ 1 ವೈರ್‌ಲೆಸ್‌ ಚಾರ್ಜರ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ.

ಸ್ಮಾರ್ಟ್​​​ಟಿವಿ ಮತ್ತು ಸ್ಮಾರ್ಟ್​​ಫೋನ್​ಗಳು:

  • ಸ್ಯಾಮ್‌ಸಂಗ್‌ ನಿಯೋ ಕ್ಯೂಎಲ್‍ಇಡಿ ರೇಂಜ್ ಟಿವಿಯನ್ನು ಆರಂಭಿಕ ಬೆಲೆ 99,990 ರೂ. ರಲ್ಲಿ ಈ ಸೇಲ್​ನಲ್ಲಿ ಖರೀದಿ ಮಾಡಬಹುದಾಗಿದೆ ಮತ್ತು 23990 ರೂ. ಮೌಲ್ಯದ ಸ್ಯಾಮ್‍ಸಂಗ್ ಗ್ಯಾಲಕ್ಸಿ ಎ23 ಮೊಬೈಲ್ ಅನ್ನು 20% ವರೆಗೆ ಕ್ಯಾಶ್‌ಬ್ಯಾಕ್‌ ಜೊತೆಗೆ ಉಚಿತವಾಗಿ ಪಡೆಯಬಹುದಾಗಿದೆ.
  • ಇನ್ನು ಟಿಸಿಎಲ್ 65 ಇಂಚಿನ ಯುಹೆಚ್‌ಡಿ ಗೂಗಲ್ ಟಿವಿಯನ್ನು ಕ್ಯಾಶ್‌ಬ್ಯಾಕ್‌ ನಂತರ 44,990 ರೂ. ರಲ್ಲಿ 2 ವರ್ಷ ವ್ಯಾರಂಟಿ ಜೊತೆಗೆ ಖರೀದಿ ಮಾಡಬಹುದಾಗಿದೆ. ಆಯ್ದ ಎಲ್‍ಇಡಿ ಟಿವಿಯ ಜೊತೆಗೆ 3999 ರೂ. ಕಡಿಮೆ ಬೆಲೆಯಲ್ಲಿ 9,990 ರೂ. ಮೌಲ್ಯದ ಮಲ್ಟಿಚಾನೆಲ್ ಸೌಂಡ್‌ಬಾರ್‌ ಅನ್ನು ಪಡೆಯಿರಿ. ಜೊತೆಗೆ ಕ್ಯಾಶ್‌ಬ್ಯಾಕ್‌ ಕೊಡುಗೆಗಳು ಸಹ ಲಭ್ಯವಿದೆ.
  • ಸ್ಮಾರ್ಟ್​​ಫೋನ್​ಗಳ ಮೇಲೆ ಅದ್ಭುತ ಆಫರ್ಸ್​ಗಳು ಲಭ್ಯವಿದ್ದು, ಸ್ಯಾಮ್​ಸಂಗ್​ ಫ್ಲಿಪ್​ 3 ಸ್ಮಾರ್ಟ್​​ಫೋನ್ ಅನ್ನು ಕೇವಲ 49,999 ರೂ.ಗೆ ಖರೀದಿಸಿ. ಹಾಗೆಯೇ ಐಫೋನ್​ 13 ಸ್ಮಾರ್ಟ್​​ಫೋನ್​ ಅನ್ನು 59,900 ರೂ.ಗಳ ರಿಯಾಯಿತಿ ದರದಲ್ಲಿ ಖರೀದಿಸಿ. ಈ ಆಫರ್ ಸೇಲ್​ ಇದೇ ಜನವರಿ 26 ರವರೆಗೆ ಮಾತ್ರ ಲಭ್ಯವಿರುತ್ತದೆ.

ಲ್ಯಾಪ್​ಟಾಪ್​ ಆಫರ್ಸ್​:

  • ಉತ್ತಮ ಕಾರ್ಯಕ್ಷಮತೆಯ ಲ್ಯಾಪ್​ಟಾಪ್​ಗಳ ಮೇಲೆ ಈ ಸೇಲ್​ನಲ್ಲಿ ಉತ್ತಮ ಆಫರ್ಸ್​ಗಳು ಲಭ್ಯವಿದೆ. ಎಲ್ಲ ಗೇಮರ್​​ ಗಳಿಗಾಗಿ, ರಿಲಯನ್ಸ್ ಡಿಜಿಟಲ್ 49,999ರೂ. ನಿಂದ ಪ್ರಾರಂಭವಾಗುವ ಗೇಮಿಂಗ್ ಲ್ಯಾಪ್‌ಟಾಪ್‌ ಗಳನ್ನು ನೀಡುತ್ತದೆ. ನಿಮ್ಮ ಇಷ್ಟದ ಲ್ಯಾಪ್‌ಟಾಪ್‌ ಮತ್ತು 7,500ರೂ. ಮೌಲ್ಯದ ಟ್ರಾಲಿ ಬ್ಯಾಗ್ ಅನ್ನು ಕೇವಲ 99 ರೂಪಾಯಿನಲ್ಲಿ ಪಡೆಯಬಹುದಾಗಿದೆ.

ಆಡಿಯೋ ಡಿವೈಸ್​ಗಳಿಗೆ ಆಫರ್​:

  • ಫ್ರಾಸ್ಟ್-ಫ್ರೀ ರೆಫ್ರಿಜರೇಟರ್​ಗಳಲ್ಲಿ ಉತ್ತಮ ಡೀಲ್​ಗಳು ಲಭ್ಯವಿದೆ. 584 ಲೀಟರ್ ರೆಫ್ರಿಜರೇಟರ್ ಅನ್ನು ಕೇವಲ 53,990 ರೂ. ಗಳಿಗೆ ಖರೀದಿಸಬಹುದು. ಆ್ಯಪಲ್ ಏರ್‌ಪಾಡ್‌ ಪ್ರೋ 1 ನೇ ಜನರೇಶನ್ ಅನ್ನು ಖರೀದಿಸಿ ಮತ್ತು 4,999 ರೂ. ಮೌಲ್ಯದ ನಿಯೋಪ್ಯಾಕ್ 3 ಇನ್ 1 ವೈರ್‌ಲೆಸ್‌ ಚಾರ್ಜರ್ ಅನ್ನು ಉಚಿತವಾಗಿ ಪಡೆಯಿರಿ. ಹಾಗೆಯೇ 45% ರಿಯಾಯಿತಿಯಲ್ಲಿ 1,21,900 ರೂ. ಮೌಲ್ಯದ ಡಾಲ್ಬಿ ಅಟ್ಮಾಸ್ 9.1.4 ಸಿಎಚ್ ಸೌಂಡ್‌ಬಾರ್‌ ಖರೀದಿ ಮಾಡುವುದರೊಂದಿಗೆ ಸಿನಿಮಾ ತರಹದ ಸೌಂಡ್​ ಫೀಚರ್​ ಅನ್ನು ಹೊಂದಿದ ಆಡಿಯೋ ಅನುಭವವನ್ನು ಪಡೆಯಬಹುದಾಗಿದೆ.

ಹೌದು ಈ ಮೇಲಿನಂತೆ ರಿಲಯನ್ಸ್​ ಡಿಜಿಟಲ್​ ಇಂಡಿಯಾ ಈ ಸೇಲ್​ನಲ್ಲಿ ಹಲವಾರು ಎಲೆಕ್ಟ್ರಾನಿಕ್ಸ್​ ಸಾಧನಗಳ ಮೇಲೆ ಅದ್ಭುತ ಕೊಡುಗೆಗಳು, ಆಫರ್​ಗಳು ಲಭ್ಯವಿದೆ.

Leave A Reply

Your email address will not be published.