ಕಾಂತಾರದ ಲೀಲಾಳಿಗೆ ಬಾಲಿವುಡ್‌ ಸಿನಿಮಾ ಶೂಟಿಂಗ್‌ನಲ್ಲಿ ಸಿಕ್ತು ಭರ್ಜರಿ ಉಡುಗೊರೆ | ಏನದು ?

ಕಾಂತಾರ ಸಿನಿಮಾದಲ್ಲಿ ನಟಿಸಿದ ಹಲವಾರು ನಟ, ನಟಿಯರ ಭವಿಷ್ಯ ಬದಲಾಗಿದೆ. ಈ ಒಂದು ಸಿನಿಮಾ ಹಲವು ಪ್ರತಿಭೆಗಳ ಅನಾವರಣಗೊಳ್ಳಲು ಅವಕಾಶ ಸಿಗಲು ಸಹಕಾರಿಯಾಗಿದೆ ಎಂದೇ ಹೇಳಬಹುದು. ಓರ್ವ ಸ್ಟಾರ್‌ ಆಗಲು ಒಂದು ಸಿನಿಮಾ ಸಾಕು ಎಂದು ಹೇಳುತ್ತಾರೆ. ಹಾಗೆನೇ ಕಾಂತಾರ ಸಿನಿಮಾ ಹಲವರನ್ನು ಸ್ಟಾರ್‌ ಮಾಡಿದೆ. ಈ ಸಿನಿಮಾದ ನಿರ್ದೇಶಕ ರಿಷಬ್‌ ಶೆಟ್ಟಿಗೆ ಕೂಡಾ ಬಾಲಿವುಡ್‌ನ ದೊಡ್ಡ ಸಂಸ್ಥೆಗಳಿಂದ ಭರ್ಜರಿ ಆಫರ್‌ ಬಂದರೂ ರಿಷಬ್‌ ಶೆಟ್ಟಿ ಅದ್ಯಾವುದನ್ನೂ ಒಪ್ಪಿಕೊಂಡಿಲ್ಲ. ಹಾಗೆನೇ ಈ ಸಿನಿಮಾದ ನಾಯಕಿ ಸಪ್ತಮಿ ಗೌಡ, ತನ್ನ ಸ್ನಿಗ್ಧ ಚೆಲುವಿನಿಂದಲೇ ಎಲ್ಲರ ಮನಸೂರೆಗೊಂಡ ನಟಿಗೆ ಕೂಡಾ ಬರಪೂರ ಅವಕಾಶ ಸಿಗುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಅವಕಾಶಗಳು ಅರಸಿ ಬಂದಿದೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಬೇರೆ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ನಟಿ ಬಾಲಿವುಡ್‌ನಿಂದ ಬಂದ ಆಫರ್‌ಗೂ ಒಕೆ ಅಂದಿದ್ದಾರೆ.

 

“ದಿ ಕಾಶ್ಮೀರ್ ಫೈಲ್ಸ್” ಸಿನಿಮಾ ನಿರ್ದೇಶನ ಮಾಡಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದು, ಇಂದು ಸಪ್ತಮಿ ಗೌಡ ಅವರು, ವಿವೇಕ್ ಅವರೊಟ್ಟಿಗೆ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸುತ್ತಿರುವ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಶೂಟಿಂಗ್ ಸೆಟ್‌ನಲ್ಲಿ ನಡೆದ ಅವಘಡದಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯ ಪತ್ನಿ, ನಟಿ ಪಲ್ಲವಿ ಜೋಷಿಗೆ ಅಪಘಾತವಾಗಿ ಗಾಯಗೊಂಡ ಕಾರಣ ಚಿತ್ರೀಕರಣವನ್ನು ತಡೆ ಹಿಡಿಯಲಾಗಿತ್ತು. ಇದೀಗ ವಿವೇಕ್ ಅಗ್ನಿಹೋತ್ರಿಯೊಟ್ಟಿಗೆ ಸಪ್ತಮಿ ಗೌಡರ ಸೆಲ್ಫಿ ತೆಗೆಸಿಕೊಂಡು ಹಂಚಿಕೊಂಡಿದ್ದು, ಸಿನಿಮಾದ ಶೂಟಿಂಗ್ ಮತ್ತೆ ಪ್ರಾರಂಭವಾದಂತಿದೆ.

ನಮ್ಮ ಕಾಂತಾರ ಚೆಲುವೆಗೆ ಬಾಲುವುಡ್‌ ಭರ್ಜರಿ ಸ್ವಾಗತ ನೀಡಿದೆ. ಶೂಟಿಂಗ್‌ ಬಂದ ಸಂದರ್ಭದಲ್ಲಿ ಸಪ್ತಮಿ ಅವರಿಗೆ ನಟರಾಜನ ವಿಗ್ರಹ ನೀಡಲಾಗಿದೆ. ಈ ಅದ್ಭುತ ಕ್ಷಣವನ್ನು ಸಪ್ತಮಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ದಿ ವ್ಯಾಕ್ಸಿನ್ ವಾರ್’ ಸಿನಿಮಾವು ಕೋವಿಡ್ ಸಮಯದಲ್ಲಿ ವ್ಯಾಕ್ಸಿನ್ ಸುತ್ತ ನಡೆದ ರಾಜಕೀಯ ಕುರಿತಾದ ಕತೆಯನ್ನು ಹೊಂದಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿಯವರೇ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.ಇತ್ತೀಚೆಗಷ್ಟೆ ಶೂಟಿಂಗ್ ಸೆಟ್‌ನಲ್ಲಿ ನಡೆದ ಅವಘಡದಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯ ಪತ್ನಿ, ನಟಿ ಪಲ್ಲವಿ ಜೋಷಿಗೆ ಅಪಘಾತವಾಗಿ ಗಾಯಗೊಂಡ ಕಾರಣ ಚಿತ್ರೀಕರಣವನ್ನು ತಡೆ ಹಿಡಿಯಲಾಗಿತ್ತು. ಈಗ ಚಿತ್ರೀಕರಣ ಪ್ರಾರಂಭವಾಗಿದ್ದು, ಸಪ್ತಮಿ ಗೌಡ ಒಳ್ಳೆಯ ಅವಕಾಶ ನೀಡಿದಂತಾಗಿದೆ ಎಂದೇ ಹೇಳಬಹುದು.

Leave A Reply

Your email address will not be published.