KSAT Recruitment 2023: 10th ಪಾಸಾದವರಿಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಉದ್ಯೋಗ, ತಿಂಗಳಿಗೆ 58,000 ಸಂಬಳ

Share the Article

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (Karnataka State Administrative Tribunal) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ. ರಾಜ್ಯ ಸರಕಾರಿ ನೌಕರಿ ಹುಡುಕುವವರಿಗೆ ಇದೊಂದು ಸುವರ್ಣವಕಾಶ. ಇದೇ ಜನವರಿ 31, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್​/ಪೋಸ್ಟ್(Post)​ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 31, 2023

ಸಂಸ್ಥೆ : ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ
ಹುದ್ದೆ : ಸ್ಟೆನೋಗ್ರಾಫರ್
ಒಟ್ಟು ಹುದ್ದೆ : 8
ವಿದ್ಯಾರ್ಹತೆ : 10ನೇ ತರಗತಿ ಪಾಸ್
ವೇತನ ಮಾಸಿಕ : ₹ 30,350-58,250
ಉದ್ಯೋಗದ ಸ್ಥಳ : ಬೆಂಗಳೂರು, ಬೆಳಗಾವಿ, ಕಲಬುರಗಿ

ಹುದ್ದೆಗಳ ವಿವರ : ಸ್ಟೆನೋಗ್ರಾಫರ್ (RPC)- 7
ಸ್ಟೆನೋಗ್ರಾಫರ್ (LC)- 1

ವಿದ್ಯಾರ್ಹತೆ : ಈ ಹುದ್ದೆಗೆ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.

ವಯೋಮಿತಿ: ಸ್ಟೆನೋಗ್ರಾಫರ್ (RPC)- 18 ರಿಂದ 35 ವರ್ಷ
ಸ್ಟೆನೋಗ್ರಾಫರ್ (LC)- 18 ರಿಂದ 40 ವರ್ಷ

ವಯೋಮಿತಿ : SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ
PH/ವಿಧವಾ ಅಭ್ಯರ್ಥಿಗಳು- 10 ವರ್ಷ

ಅರ್ಜಿ ಶುಲ್ಕ: ಸ್ಟೆನೋಗ್ರಾಫರ್ (RPC) ಹುದ್ದೆಗಳಿಗೆ:
SC/ST, ಪ್ರವರ್ಗ-1 & PH ಅಭ್ಯರ್ಥಿಗಳಿಗೆ- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ- 150 ರೂ.
ಪಾವತಿಸುವ ಬಗೆ- ಡಿಮ್ಯಾಂಡ್​ ಡ್ರಾಫ್ಟ್​

ವೇತನ: ಸ್ಟೆನೋಗ್ರಾಫರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 30,350-58,250 ರೂ. ವೇತನ ಕೊಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ , ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ : ರಿಜಿಸ್ಟ್ರಾರ್
KSAT, 7ನೇ ಮಹಡಿ,
ಕಂದಾಯ ಭವನ
ಕೆ.ಜಿ. ರಸ್ತೆ
ಬೆಂಗಳೂರು-560009

Leave A Reply