Home Breaking Entertainment News Kannada ಬಿಗ್ ಬಾಸ್ ಜೋಡಿಯಾದ ಜಶ್ವಂತ್ – ನಂದು ಲವ್ ಬ್ರೇಕ್ ಅಪ್, ಏನಾಯ್ತು ‘ ನಿಮ್ದು...

ಬಿಗ್ ಬಾಸ್ ಜೋಡಿಯಾದ ಜಶ್ವಂತ್ – ನಂದು ಲವ್ ಬ್ರೇಕ್ ಅಪ್, ಏನಾಯ್ತು ‘ ನಿಮ್ದು ‘ ಲವ್ ಕಹಾನಿ ?!

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಸೀಸನ್ 9 ಮುಗಿದು ವಾರಗಳೇ ಮುಗಿತಾ ಬಂದರೂ ಕೂಡ ಇದರ ಹವಾ, ಏನೂ ಕಮ್ಮಿ ಆಗಿಲ್ಲ. ಇನ್ನೂ ಅಲ್ಲಿ ಜಗಳದಲ್ಲಿ ಉರಿದ ಮನೆ, ಬೆಚ್ಚಗಿನ ಪ್ರೀತಿ ಕಂಡುಕೊಂಡ ಜೀವಗಳು ಅಲ್ಲಿಂದ ಹೊರಬಂದ ಮೇಲೆಯಂತೂ ಫ್ರೀ ಬರ್ಡ್ಸ್ ಥರ ಆಗಿದ್ದಾರೆ. ಸರಳ ಹಿಂದಿನ ಪ್ರೀತಿ ಹೊರಗೆ ಕೂಡಾ ಕಂಟಿನ್ಯೂ ಆಗಿದೆ. ಇತ್ತ ವಿನ್ನರ್ ರೂಪೇಶ್ ಶೆಟ್ಟಿಗೆ ಹೋದಲ್ಲಿ ಬಂದಲ್ಲಿ ಸನ್ಮಾನ ಮತ್ತು ಸೆಲೆಬ್ರೇಶನ್ ಗಳು ನಡೀತಾನೇ ಇದೆ. ಇದರ ಬೆನ್ನಲ್ಲೇ ಓ ಟಿ ಟಿ ಪ್ಲಾಟ್ ಫಾರ್ಮ್ ನ ಕ್ಯೂಟ್ ಜೋಡಿಗಳಾದಂತಹ ನಂದು ಮತ್ತು ಜಶ್ವಂತ್ ಲವ್ ಬಗ್ಗೆ ಬಂದ ಒಂದು ಸುದ್ದಿ ವೈರಲ್ ಆಗ್ತಾ ಇದೆ.

ಹೌದು, ರೂಪೇಶ್ ಶೆಟ್ಟಿ ನಡೆದು ಬಂದಂತಹ ಹಾದಿಯಲ್ಲಿ ಓ ಟಿ ಟಿ ಬಿಗ್ ಬಾಸ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತೆ. ಇದರಲ್ಲಿ ಕ್ಯೂಟ್ ಕಪಲ್ ಆಗಿಯೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ನಂದು ಮತ್ತು ಜಶ್ವಂತ್. ಬಿಗ್ ಬಾಸ್ ಗಿಂತ ಮೊದಲು ರೌಡಿಸ್ ರಿಯಾಲಿಟಿ ಶೋ ನಲ್ಲಿ ಕೂಡ ಇವರಿಬ್ಬರೂ ಭಾಗವಹಿಸಿದ್ದರು. ಅಲ್ಲಿ ಕೂಡಾ ಅವರ ಕೆಮಿಸ್ಟ್ರಿ ಮಾತ್ರವಲ್ಲ, PCMB ( ಫಿಸಿಕ್ಸ್ ಕೆಮಿಸ್ಟ್ರಿ ಮ್ಯಾಥೆಮ್ಯಾಟಿಕ್ಸ್ ಮತ್ತು ಬಯಾಲಜಿ) ವರ್ಕೌಟ್ ಸಕತ್ತಾಗೆ ಆಗಿತ್ತು !!!

ಹೀಗಾಗಿಯೇ ಬಿಗ್ ಬಾಸ್ ನಲ್ಲಿ ಯಾವುದೇ ಟಾಸ್ಕ್ ಗಳನ್ನ ಕೊಟ್ರು ಕೂಡ ಈ ಜೋಡಿ ಸಕ್ಕತ್ ಈಸಿಯಾಗಿ ಮಾಡಿ ಮುಗಿಸ್ತಾ ಇದ್ರು. ಮೊನ್ನೆಯ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ರೂಪಾ ಶೆಟ್ಟಿ, ಜಶ್ವಂತ್ ಮತ್ತು ನಂದು ಕ್ಲೋಸ್ ಫ್ರೆಂಡ್ಸ್ ಆಗಿದ್ರು.

ಹೋಗ್ತಾ ಹೋಗ್ತಾ ನಂದು ಜೊತೆ ಬಿಟ್ಟು ಸಾನಿಯಾ ಜೊತೆ ಜಶ್ವಂತ್ ಸರ್ಕಲ್ ಸುತ್ತಲು ಶುರು ಮಾಡಿದ. ಸಾನಿಯಾಗೆ ಕೊಂಚ ಕೊಂಚವೇ ಕ್ಲೋಸ್ ಆಗ್ತಾ ಇದ್ದ. ಇದಂತೂ ನಂದೂಗೆ ತಡೆದುಕೊಳ್ಳೋಕೆ ಆಗ್ತಾನೆ ಇರಲಿಲ್ಲ. ಆಕೆ ಕುಳಿತಲ್ಲಿ ಉರಿದು ಕೊಳ್ತಾ ಇದ್ಲು. ಹಾಗೆಯೇ ಸಾನಿಯಾ ಜೊತೆ ಕೂಡ ಜಶ್ವಂತ್ ತನ್ನ ಲವ್ ಬಗ್ಗೆ ಕೇವಲವಾಗಿ ಮಾತನಾಡಿದ್ದ. ಮನೆಯಿಂದ ಮೊದಲು ಹೊರಬಂದ ನಂದಿನಿ ಬಹುಶಹ ಇವುಗಳನ್ನೆಲ್ಲ ಗಮನಿಸಿರಬಹುದು. ಹಾಗಾಗಿ ಮನೆಯಿಂದ ಹೊರ ಬಂದ ನಂತರ ದೊಡ್ಡ ಸುದ್ದಿ ಬಂದಿದೆ.

ಇದೀಗ ಇವರಿಬ್ಬರ ಲವ್ ಗೆ ಪೂರ್ಣವಿರಾಮ ಇಡಲಾಗಿದೆ ಅಂತ ಸುದ್ದಿಗಳು ಹರಿದಾಡ್ತಾ ಇದೆ. ಯಾಕಂದ್ರೆ ಇವರಿಬ್ಬರೂ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾದ ಮೇಲೆ ಎಲ್ಲೂ ಕೂಡ ಒಟ್ಟಿಗೆ ಕಾಣಿಸಿಲ್ಲ. ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಕೂಡ ಯಾವುದೇ ಸದ್ದು ಎದ್ದಿಲ್ಲ. ಇಷ್ಟೇ ಯಾಕೆ ಮೊನ್ನೆ ತಾನೆ ನಂದಿನಿಯ ಹುಟ್ಟು ಹಬ್ಬಕ್ಕೆ ಜಶ್ವಂತ್ ವಿಶ್ ಕೂಡ ಮಾಡಿಲ್ವಂತೆ. ರೂಪೇಶ್ ಶೆಟ್ಟಿ ನಂದಿನಿಗೆ ವಿಶ್ ಮಾಡಿರುವ ಫೋಟೋ ಮತ್ತು ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಇದರಲ್ಲಿಯು ಯಶ್ವಂತ್ ತಲೆ ಕೂಡಾ ಇಣುಕಿ ಹಾಕಿದ್ದು ಕಾಣೋದಿಲ್ಲ.

ಒಟ್ಟಿನಲ್ಲಿ ಈ ಕ್ಯೂಟ್ ಪೇರ್ ಬ್ರೇಕಪ್ ಆಗಿದೆ ಅಂತ ಸುದ್ದಿಗಳು ಸಖತ್ ಎಲ್ಲಾ ಕಡೆ ವೈರಲ್ ಆಗ್ತಾ ಇದೆ. ಇದು ಕೇವಲ ಗಾಸಿಪ್ ಆಗಿರಲಿಕ್ಕಿಲ್ಲ. ಆದ್ರೆ ಇದು ಸುಳ್ಳಾಗಲಿ ಅಂತ ಬಯಸೋಣ ಅಲ್ವಾ?