ತೆರಿಗೆ ಪಾವತಿದಾರರಿಗೆ ಹೊಸವರ್ಷದಂದು ಭರ್ಜರಿ ಸಿಹಿ ಸುದ್ದಿ

ತೆರಿಗೆ ಪಾವತಿದಾರರಿಗೆ ಹೊಸ ವರ್ಷದ ಮೊದಲ ದಿನವೇ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಈ ಮಾಹಿತಿ ತೆರಿಗೆ ಪಾವತಿದಾರರಿಗೆ ಉಪಯುಕ್ತವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ವರ್ಷದಂದು ಜನರಿಗೆ ಈ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ. ಅದೇನೆಂದರೆ, ಇನ್ಮುಂದೆ ನೀವು ಕೇವಲ ಶೇ.5 ರಷ್ಟು ತೆರಿಗೆ ಮಾತ್ರ ಪಾವತಿಸಬೇಕಾಗಲಿದೆ. ದೇಶದೆಲ್ಲೆಡೆ ಬಜೆಟ್ ಮಂಡನೆಗಾಗಿ ಭರದ ಸಿದ್ಧತೆಗಳು ನಡೆಯುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗದಿಂದ ಹಿಡಿದು ಉದ್ಯೋಗಸ್ಥರವರೆಗೆ ಎಲ್ಲರೂ ಈ ಬಾರಿ ದೊಡ್ಡ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದಾರೆ.

2.5 ಲಕ್ಷದಿಂದ 5 ಲಕ್ಷದವರೆಗೆ ಆದಾಯ ಹೊಂದಿರುವ ಜನರು ಕೇವಲ ಶೇ.5 ರಷ್ಟು ತೆರಿಗೆಯನ್ನು ಪಾವತಿಸಬೇಕಾಗಲಿದೆ. ಈ ಜನರು ಇದಕ್ಕಿಂತ ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಮತ್ತೊಂದೆಡೆ, ನಿಮ್ಮ ಆದಾಯವು 2.5 ಲಕ್ಷಕ್ಕಿಂತ ಕಡಿಮೆಯಿದ್ದರೆ, ನೀವು ಒಂದು ರೂಪಾಯಿ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇನ್ನು ಮುಂದೆ ಅನೇಕ ಜನರು ಕೇವಲ ಶೇ.5 ರಷ್ಟು ತೆರಿಗೆಯನ್ನು ಮಾತ್ರ ಪಾವತಿಸಬೇಕಾಗಲಿದೆ ಎಂದು ಹೇಳಿದ್ದಾರೆ. ನೀವು ಹೊಸ ತೆರಿಗೆ ಪದ್ಧತಿ ಅಥವಾ ಹಳೆಯ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಂಡರೂ ನೀವು ಭಾರೀ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

Leave A Reply

Your email address will not be published.