ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ : ಪ್ರಿಯಕರ ಬಿಚ್ಚಿಟ್ಟ ಅಸಲಿ ಕಾರಣ, ನಟಿಯ ತಾಯಿ ಹೇಳಿದ್ದೇನು ಗೊತ್ತೇ?

Share the Article

ತನ್ನ 20ರ ಹರೆಯದಲ್ಲೇ ಸಾವು ಕಂಡ ನಟಿ ತುನಿಶಾ ಶರ್ಮಾ. ಈಕೆಯ ಸಾವು ನಿಜಕ್ಕೂ ಆಘಾತಕಾರಿ ಬೆಳವಣಿಗೆ ಎಂದೇ ಹೇಳಬಹುದು. ಬಾಳಿ ಬದುಕಿ, ಎಲ್ಲರಂತೆ ಚೆನ್ನಾಗಿ ಇರಬೇಕಾಗಿದ್ದ ಉದಯೋನ್ಮುಖ ನಟಿಯೋರ್ವಳ ಸಾವಿನ ನಿರ್ಧಾರ ನಿಜಕ್ಕೂ ಆಘಾತಕಾರಿ. ಈ ಪ್ರಕರಣ ಈಗ ದಿನೇ ದಿನೇ ಬಹಳ ಕುತೂಹಲಕಾರಿ ಅಂಶಗಳಿಂದ ಸುದ್ದಿಯಾಗುತ್ತಿದೆ. ಈ ಪ್ರಕರಣದಲ್ಲಿ ಬಂಧಿತನಾಗಿರುವ ತುನಿಶಾ ಶರ್ಮಾ ಪ್ರಿಯಕರ ಶಿಜಾನ್‌ ಮೊಹಮ್ಮದ್‌ ಖಾನ್‌ ಪೊಲೀಸರಿಗೆ ಕೆಲವೊಂದು ಮಾಹಿತಿ ನೀಡಿದ್ದಾನೆ. ಅವನು ಹೇಳಿರುವ ಪ್ರಕಾರಾ, ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್‌ ಕೊಲೆ ಪ್ರಕರಣವೇ ನಾನು ತುನಿಶಾಳಿಂದ ಅಂತರ ಕಾಪಾಡುವಂತೆ ಮಾಡಿತ್ತು ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ.

“ಶ್ರದ್ಧಾ ಕೊಲೆ ಕೇಸ್ ನನ್ನನ್ನು ತುಂಬಾ ವಿಚಲಿತನನ್ನಾಗಿ ಮಾಡಿತು. ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕಕ್ಕೀಡು ಮಾಡಿದವು. ನನ್ನ ವಯಸ್ಸು ಹಾಗೂ ನನ್ನ ಧರ್ಮದ ಕಾರಣದಿಂದಾಗಿ ತುನಿಶಾ ಜತೆಗಿನ ಸಂಬಂಧಕ್ಕೆ ಇತಿಶ್ರೀ ಹಾಡಿದೆ ಎಂದು ತಿಳಿಸಿದ್ದಾನೆ” ಎಂದು ಮೂಲಗಳು ತಿಳಿಸಿವೆ.

ಆದರೆ ಇತ್ತ ಕಡೆ ಹೆತ್ತು ಹೊತ್ತು ಸಾಕಿದ ತಾಯಿ ಮಾತ್ರ, “ನನ್ನ ಮಗಳಿಗೆ ಮೋಸ ಮಾಡಿದ” ಎಂದು ನಟಿಯ ತಾಯಿ ವನಿತಾ ಶರ್ಮಾ ಅವರು ನಟ ಶಿಜಾನ್‌ ಖಾನ್‌ ವಿರುದ್ಧ ಆರೋಪ ಮಾಡುತ್ತಿದ್ದಾರೆ. “ಶಿಜಾನ್ ಖಾನ್ ನನ್ನ ಮಗಳ ಜೀವನದಲ್ಲಿ ಬಂದ. ಮದುವೆಯಾಗುವುದಾಗಿ ಭರವಸೆ ನೀಡಿದ. ಆದರೆ, ಕೊನೆಗೆ ಮೋಸ ಮಾಡಿಬಿಟ್ಟ. ಇದರಿಂದಾಗಿ ನನ್ನ ಮಗಳನ್ನು ಕಳೆದುಕೊಳ್ಳಬೇಕಾಯಿತು” ಎಂದಿದ್ದಾರೆ.

ಡಿಸೆಂಬರ್ 24ರಂದು ಮುಂಬೈನ ವಸಾಯಿಯಲ್ಲಿ ಶೂಟಿಂಗ್ ಮಾಡುತ್ತಿರುವಾಗ ಸೆಟ್‌ನ ಕೋಣೆಯಲ್ಲಿಯೇ ತುನಿಶಾ ಶರ್ಮಾ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಿಜಾನ್ ಖಾನ್‌ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Leave A Reply