PMKFPO Yojana: ರೈತ ಬಾಂಧವರಿಗೆ ಉಡುಗೊರೆ ನೀಡಿದ PM ಮೋದಿ! ನಿಮ್ಮ ಖಾತೆಗೆ ಸೇರಲಿವೆ 15 ಲಕ್ಷ ರೂ.

PM Kisan FPO Yojana 2022: ರೈತರೇ ನಿಮಗೊಂದು ಬಹುದೊಡ್ಡ ಉಡುಗೊರೆಯೊಂದನ್ನು ಕೇಂದ್ರ ಸರಕಾರ ನೀಡಿದೆ. ಹೌದು, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಖುಷಿಯ ಸುದ್ದಿಯೊಂದು ಪ್ರಕಟವಾಗಿದೆ. ಕೇಂದ್ರದ ಮೋದಿ ಸರ್ಕಾರ ರೈತರ ಆದಾಯ ಹೆಚ್ಚಿಸಲು ಈ ಬಾರಿ ದೊಡ್ಡ ಹೆಜ್ಜೆ ಇಟ್ಟಿದೆ. ವಾಸ್ತವದಲ್ಲಿ, ಈ ಹಿಂದೆ ಕಿಸಾನ್ ಯೋಜನೆಯಡಿ 6,000 ರೂ.ಗಳನ್ನು ನೀಡುತ್ತಿದ್ದ ಸರ್ಕಾರವು ಈಗ ಹೊಸ ಕೃಷಿ
ಉದ್ಯಮವನ್ನು ಪ್ರಾರಂಭಿಸಲು ರೈತರಿಗೆ 15 ಲಕ್ಷ ರೂ.ಗಳ ವರೆಗೆ ಧನಸಹಾಯ ಒದಗಿಸಲಿದೆ.

ಲಾಗಿನ್ ಮಾಡುವ ವಿಧಾನ ಇಲ್ಲಿದೆ

  • ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್‌ಸೈಟ್‌ನಲ್ಲಿ FPO ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಈಗ ಲಾಗಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಈಗ ಲಾಗಿನ್ ಫಾರ್ಮ್ ತೆರೆಯುತ್ತದೆ. ಅದರಲ್ಲಿ ಬಳಕೆದಾರ ಹೆಸರು ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
  • ರೀತಿ ನೀವು ಲಾಗಿನ್ ಆಗಬಹುದು

ಇದರ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಇಲ್ಲಿ ನೀಡಲಾಗಿದೆ :

  • ಇದಕ್ಕಾಗಿ ನೀವು ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  • ನಂತರ FPO ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಇದರ ನಂತರ ‘ನೋಂದಣಿ’ ಆಯ್ಕೆಗೆ ಹೋಗಿ.
  • ನೋಂದಣಿ ಫಾರ್ಮ್ ನಲ್ಲಿ ಕೇಳಿದ ಮಾಹಿತಿಯನ್ನು ಭರ್ತಿ ಮಾಡಿ.
  • ಈಗ ನಿಮ್ಮ ಖಾತೆಯ ಪಾಸ್‌ಬುಕ್ ಅಥವಾ ರದ್ದುಪಡಿಸಿದ ಚೆಕ್ ಮತ್ತು ಐಡಿ ಪ್ರೂಫ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಅದನ್ನು ಅಪ್‌ಲೋಡ್ ಮಾಡಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ಕಿಸಿ.

ಪಿಎಂ ಕಿಸಾನ್ ಎಫ್‌ಪಿಒ ಯೋಜನೆಯಡಿ, ರೈತರಿಗೆ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ.
ಈ ಮೂಲಕ ರೈತ ಬಾಂಧವರು ಸುಲಭವಾಗಿ ತಮ್ಮ ಹೊಸ ಉದ್ಯಮ ಆರಂಭಿಸ ಬಹುದು. ಈ ಯೋಜನೆಯಡಿ ಸರ್ಕಾರ ರೈತ ಉತ್ಪಾದಕ ಸಂಸ್ಥೆಗೆ 15 ಲಕ್ಷ ರೂ.ಧನಸಹಾಯ ಒದಗಿಸುತ್ತದೆ. ಇದರ ಲಾಭ ಪಡೆಯಲು 11 ರೈತರು ಸೇರಿ ಸಂಸ್ಥೆ ಅಥವಾ ಉದ್ಯಮ ರಚಿಸಬೇಕು. ತನ್ಮೂಲಕ ಕೃಷಿಗೆ ಸಂಬಂಧಿಸಿದ ಉಪಕರಣಗಳು ಅಥವಾ ರಸಗೊಬ್ಬರಗಳು, ಬೀಜಗಳು ಅಥವಾ ಔಷಧಿಗಳನ್ನು ಖರೀದಿಸಲು ಅನುಕೂಲವಾಗುತ್ತದೆ.

Leave A Reply

Your email address will not be published.