ಮುಂಜಾನೆ ಮತ್ತೆ ಸಂಭವಿಸಿದ ಭೂಕಂಪ | ಭಯಭೀತರಾದ ಜನ
ಸ್ವಲ್ಪ ಸಮಯದವರೆಗೆ ಕಡಿಮೆ ಪ್ರಕರಣ ಕಂಡು ಬಂದಿದ್ದ ಭೂಕಂಪದ ತೀವ್ರತೆ ಈಗ ಮತ್ತೆ ಉದ್ಭವಿಸಿದೆ. ಹೌದು, ಇಂದು ಮುಂಜಾನೆ ಮತ್ತೆ ಭೂಕಂಪ ಸಂಭವಿಸಿದ್ದು, ಜನ ಭಯಭೀತರಾಗಿರುವ ಘಟನೆ ನಡೆದಿದೆ.
ಉತ್ತರಾಖಂಡದ ಉತ್ತರಕಾಶಿಯಲ್ಲಿ ಸೋಮವಾರ(ಇಂದು) ಮುಂಜಾನೆ 3.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ(NCS) ತಿಳಿಸಿದೆ.
NCS ಪ್ರಕಾರ, ಭೂಕಂಪವು ಉತ್ತರಾಖಂಡದ ಉತ್ತರಕಾಶಿಯ 24km ESE ನ ಮಧ್ಯರಾತ್ರಿ 1:50 ರ ಸುಮಾರಿಗೆ ಭೂಮಿಯಿಂದ 5 ಕಿ.ಮೀ. ಆಳದಲ್ಲಿ ಸಂಭವಿಸಿದೆ ಎಂದು ಮಾಹಿತಿ ನೀಡಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ. ಇದಕ್ಕೂ ಮುನ್ನ ನವೆಂಬರ್ 6 ರಂದು ಉತ್ತರಾಖಂಡದ ತೆಹ್ರಿಯಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿತ್ತು.