Home Entertainment Avatar 2 Update | ಗಲ್ಲಾ ಪೆಟ್ಟಿಗೆ ಚಿಂದಿ ಚಿಂದಿ, ಅವತಾರ್ 2 ಮೊದಲ ದಿನದ...

Avatar 2 Update | ಗಲ್ಲಾ ಪೆಟ್ಟಿಗೆ ಚಿಂದಿ ಚಿಂದಿ, ಅವತಾರ್ 2 ಮೊದಲ ದಿನದ ಗಳಿಕೆ ಬರೋಬ್ಬರಿ 41 ಕೋಟಿ !

Hindu neighbor gifts plot of land

Hindu neighbour gifts land to Muslim journalist

ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟಿಸಿದ್ದ ಅವತಾರ್ 2 ಚಿತ್ರ ಒಳ್ಳೆಯ ವೇಗ ಪಡೆದುಕೊಂಡಿದೆ. ಟೈಟಾನಿಕ್ ಚಿತ್ರದ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನ ಅವತಾರ್ ಬಿಡುಗಡೆಯಾದ 13 ವರ್ಷಗಳ ನಂತರ, ಅದರ ಮುಂದುವರಿದ ಭಾಗ, ಅವತಾರ್: ದಿ ವೇ ಆಫ್ ವಾಟರ್ ಶುಕ್ರವಾರ, ಡಿಸೆಂಬರ್ ನಿಂಡ್ ಥಿಯೇಟರ್‌ಗಳಲ್ಲಿ ನಾಗಾಲೋಟದಿಂದ ಓಡುತ್ತಿದೆ. ಆರಂಭದ ದಿನದಲ್ಲಿಯೇ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದೆ ಈ ಚಿತ್ರ.

ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ವರದಿ ಮಾಡಿದಂತೆ, ಅವತಾರ್ 2 ಭಾರತದಲ್ಲಿ ತನ್ನ ಆರಂಭಿಕ ದಿನದಂದು 41 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ, ಅವತಾರ್: ದಿ ವೇ ಆಫ್ ವಾಟರ್ ಸೈಡರ್ ಮ್ಯಾನ್, ಅವೆಂಜರ್ಸ್ ಇನ್ನಿನಿಟಿ ವಾರ್ ಮತ್ತು ಡಾಕ್ಟರ್ ಸ್ಟಾಂಜರ್ ಅನ್ನು ಹಿಂದಿಕ್ಕಿ ಭಾರತದಲ್ಲಿ ಎರಡನೇ ಅತಿ ಹೆಚ್ಚು ಹಾಲಿವುಡ್ ಓಪನರ್ ಆಗಿದೆ.

ಸ್ಪೆಡರ್ ಮ್ಯಾನ್ ಮೊದಲ ದಿನವೇ 32.67 ಕೋಟಿ ಗಳಿಸಿದ್ದರೆ, ಅವೆಂಜರ್ಸ್ ಇನ್ನಿನಿಟಿ ವಾರ್ ಮತ್ತು ಡಾಕ್ಟರ್ ಸ್ಟೇಂಜ್ ಕ್ರಮವಾಗಿ 31.30 ಕೋಟಿ ಮತ್ತು 27.50 ಕೋಟಿ ಗಳಿಸಿದ್ದವು.

ಸಾಲು ಸಾಲು ಹಿಟ್ ಚಿತ್ರಗಳ ನಿರ್ದೇಶಕ ಕ್ಯಾಮರೂನ್ ನಿರ್ದೇಶಿತ 1987ರ ಟೈಟಾನಿಕ್ ನಂತರ ಬಂದ ಟರ್ಮಿನೇಟರ್, 2009 ರ ಅವತಾರ್ ನಂತರ ಈಗ ಈ ಚಿತ್ರಮಾಂತ್ರಿಕನ ನಿರ್ದೇಶನದಲ್ಲಿ ಅವತಾರ್: ದಿ ವೇ ಆಫ್ ವಾಟರ್ ಥಿಯೇಟರ್‌ಗಳಲ್ಲಿ 16 ರಂದು ಬಿಡುಗಡೆ ಆಗಿತ್ತು. ಅವತಾರ್: ದಿ ವೇ ಆಫ್ ವಾಟರ್ ಸ್ಯಾಮ್ ವರ್ಥಿಂಗ್ಟನ್, ಜೊ ಸಲ್ದಾನಾ, ಸಿಗೌರ್ನಿ ವೀವರ್, ಕೇಟ್ ವಿನ್ಸೆಟ್ ಮತ್ತು ಸ್ಟೀಫನ್ ಲ್ಯಾಂಗ್ ಇತರರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.