ಎಂ.ಎಸ್ಸಿ ತೇರ್ಗಡೆ ಹೊಂದಿರುವವರಿಗೆ ಹಾರ್ಟಿಕಲ್ಚರ್‌ ಸಂಸ್ಥೆಯಲ್ಲಿ ಉದ್ಯೋಗ | ಮಾಸಿಕ ರೂ.35,000 ಸಂಬಳ

IIHR Recruitment 2023: ಇಂಡಿಯನ್ ಇನ್​​ಸ್ಟಿಟ್ಯೂಟ್ ಆಫ್​ ಹಾರ್ಟಿಕಲ್ಚರ್ ರಿಸರ್ಚ್ (Indian Institute of Horticultural Research) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಅರ್ಜಿ ಹಾಕಲು ಡಿಸೆಂಬರ್ 20, 2022 ಕೊನೆಯ ದಿನವಾಗಿದೆ.

ಸಂಸ್ಥೆ : ಇಂಡಿಯನ್ ಇನ್​​ಸ್ಟಿಟ್ಯೂಟ್ ಆಫ್​ ಹಾರ್ಟಿಕಲ್ಚರ್ ರಿಸರ್ಚ್
ಹುದ್ದೆ : ಯಂಗ್​ ಪ್ರೊಫೆಶನಲ್, SRF, JRF
ಒಟ್ಟು ಹುದ್ದೆ : 8
ವೇತನ ತಿಂಗಳಿಗೆ : 25,000-35,000
ಉದ್ಯೋಗದ ಸ್ಥಳ :ಬೆಂಗಳೂರು

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 20/12/2022
ಸಂದರ್ಶನ ನಡೆಯುವ ದಿನ: 02/01/2023

ಹುದ್ದೆಯ ಮಾಹಿತಿ:
ಯಂಗ್ ಪ್ರೊಫೆಶನಲ್-I- 3
ಯಂಗ್ ಪ್ರೊಫೆಶನಲ್- II- 2
ಸೀನಿಯರ್ ರಿಸರ್ಚ್​ ಫೆಲೋ(SRF)-2
ಜೂನಿಯರ್ ರಿಸರ್ಚ್​ ಫೆಲೋ(JRF) -1

ವಿದ್ಯಾರ್ಹತೆ:
ಯಂಗ್ ಪ್ರೊಫೆಶನಲ್-I- ಬಿಎಸ್ಸಿ
ಯಂಗ್ ಪ್ರೊಫೆಶನಲ್- II- ಸ್ನಾತಕೋತ್ತರ ಪದವಿ, ಎಂಎಸ್ಸಿ
ಸೀನಿಯರ್ ರಿಸರ್ಚ್​ ಫೆಲೋ(SRF)-ಸ್ನಾತಕೋತ್ತರ ಪದವಿ, ಎಂಎಸ್ಸಿ
ಜೂನಿಯರ್ ರಿಸರ್ಚ್​ ಫೆಲೋ(JRF) -ಎಂಎಸ್ಸಿ

ವಯೋಮಿತಿ:
ಯಂಗ್ ಪ್ರೊಫೆಶನಲ್-I- 21ರಿಂದ 45 ವರ್ಷ
ಯಂಗ್ ಪ್ರೊಫೆಶನಲ್- II- 21 ರಿಂದ 45 ವರ್ಷ
ಸೀನಿಯರ್ ರಿಸರ್ಚ್​ ಫೆಲೋ(SRF)- 35 ವರ್ಷ
ಜೂನಿಯರ್ ರಿಸರ್ಚ್​ ಫೆಲೋ(JRF) – 30 ವರ್ಷ

ವಯೋಮಿತಿ ಸಡಿಲಿಕೆ:
ಮಹಿಳಾ ಅಭ್ಯರ್ಥಿಗಳು- SRF & JRF ಹುದ್ದೆಗಳಿಗೆ 5 ವರ್ಷ ಸಡಿಲಿಕೆ ನೀಡಲಾಗಿದೆ.

ವೇತನ:
ಯಂಗ್ ಪ್ರೊಫೆಶನಲ್-I- ಮಾಸಿಕ ₹ 25,000
ಯಂಗ್ ಪ್ರೊಫೆಶನಲ್- II- ಮಾಸಿಕ ₹ 25,000
ಸೀನಿಯರ್ ರಿಸರ್ಚ್​ ಫೆಲೋ(SRF)-ಮಾಸಿಕ ₹ 35,000
ಜೂನಿಯರ್ ರಿಸರ್ಚ್​ ಫೆಲೋ(JRF) -ಮಾಸಿಕ ₹ 31,000

ಆಯ್ಕೆ ಪ್ರಕ್ರಿಯೆ:
ಸ್ಕ್ರೀನಿಂಗ್
ಶಾರ್ಟ್​ಲಿಸ್ಟಿಂಗ್
ವೈಯಕ್ತಿಕ ಸಂದರ್ಶನ

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. ಸಂಬಂಧಪಟ್ಟ ಪ್ರಧಾನ ವಿಜ್ಞಾನಿ/ಪ್ರಧಾನ ತನಿಖಾಧಿಕಾರಿ/ಆಡ್-ಹಾಕ್ ಯೋಜನೆಗಳು/ಯೋಜನೆಗಳ ಸಹ-ಪ್ರಧಾನ ತನಿಖಾಧಿಕಾರಿ, IIHR, ಹೆಸರಘಟ್ಟ ಲೇಕ್ ಪೋಸ್ಟ್ , ಬೆಂಗಳೂರು – 560089, ಕರ್ನಾಟಕ

ಸಂದರ್ಶನ ನಡೆಯುವ ಸ್ಥಳ : IIHR, ಹೆಸರಘಟ್ಟ ಲೇಕ್ ಪೋಸ್ಟ್ , ಬೆಂಗಳೂರು – 560089
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 080-23086100 ಗೆ ಕರೆ ಮಾಡಬಹುದು.

Leave A Reply

Your email address will not be published.