ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ | ಮಾಸಿಕ ರೂ.25,000 ಸಂಬಳ
NIV Recruitment 2023: ರಾಷ್ಟ್ರೀಯ ವೈರಾಲಜಿ ಸಂಸ್ಥೆ(National Institute of Virology)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರಕಾರದ ಹುದ್ದೆ ಬಯಸುವವರು ಈ ಅವಕಾಶ ನಿಮ್ಮದಾಗಿಸಿಕೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಂದ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಜನವರಿ 06, 2023ರಂದು ಸಂದರ್ಶನ(Walk-in-Interview) ನಡೆಯಲಿದೆ.
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 14/12/2022
ಸಂದರ್ಶನ ನಡೆಯುವ ದಿನಾಂಕ: 06/01/2023
ಹುದ್ದೆಯ ಮಾಹಿತಿ ಇಲ್ಲಿದೆ
ಸಂಸ್ಥೆ : ರಾಷ್ಟ್ರೀಯ ವೈರಾಲಜಿ ಸಂಸ್ಥೆ
ಹುದ್ದೆ : ಡೇಟಾ ಎಂಟ್ರಿ ಆಪರೇಟರ್, ಪ್ರಾಜೆಕ್ಟ್ ಟೆಕ್ನಿಷಿಯನ್
ಒಟ್ಟು ಹುದ್ದೆ : 7
ವೇತನ ಮಾಸಿಕ ₹ 18,000-24,500
ಉದ್ಯೋಗದ ಸ್ಥಳ : ಬೆಂಗಳೂರು
ಹುದ್ದೆಯಗಳ ವಿವರ : ಪ್ರಾಜೆಕ್ಟ್ ಟೆಕ್ನಿಷಿಯನ್-C (ಲ್ಯಾಬ್)-5, ಡೇಟಾ ಎಂಟ್ರಿ ಆಪರೇಟರ್ (DEO)-1, ಪ್ರಾಜೆಕ್ಟ್ ಟೆಕ್ನಿಷಿಯನ್-III- 1
ವಿದ್ಯಾರ್ಹತೆ :
ಪ್ರಾಜೆಕ್ಟ್ ಟೆಕ್ನಿಷಿಯನ್-C (ಲ್ಯಾಬ್)- ಪಿಯುಸಿ, ಬಿಎಸ್ಸಿ
ಡೇಟಾ ಎಂಟ್ರಿ ಆಪರೇಟರ್ (DEO)- ಪಿಯುಸಿ
ಪ್ರಾಜೆಕ್ಟ್ ಟೆಕ್ನಿಷಿಯನ್-III- ಪಿಯುಸಿ, ಡಿಪ್ಲೋಮಾ, DMLT, ಬಿಎಸ್ಸಿ ತೇರ್ಗಡೆಹೊಂದಿರುವವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ: ಪ್ರಾಜೆಕ್ಟ್ ಟೆಕ್ನಿಷಿಯನ್-C (ಲ್ಯಾಬ್)-30 ವರ್ಷ
ಡೇಟಾ ಎಂಟ್ರಿ ಆಪರೇಟರ್ (DEO)- 28 ವರ್ಷ
ಪ್ರಾಜೆಕ್ಟ್ ಟೆಕ್ನಿಷಿಯನ್-III- 30 ವರ್ಷ
ವೇತನ: ಪ್ರಾಜೆಕ್ಟ್ ಟೆಕ್ನಿಷಿಯನ್-C (ಲ್ಯಾಬ್)-ಮಾಸಿಕ ₹ 24,500
ಡೇಟಾ ಎಂಟ್ರಿ ಆಪರೇಟರ್ (DEO)-ಮಾಸಿಕ ₹ 24,500
ಪ್ರಾಜೆಕ್ಟ್ ಟೆಕ್ನಿಷಿಯನ್-III- ಮಾಸಿಕ 18,000
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸ್ಕಿಲ್ ಟೆಸ್ಟ್, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನ ನಡೆಯುವ ಸ್ಥಳ: ICMR-ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಆ್ಯಂಡ್ ರಿಸರ್ಚ್
ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಟ್ರಂಪೆಟ್ ಬಸ್ ಸ್ಟಾಪ್ ಹತ್ತಿರ
ಪೂಜಾನಹಳ್ಳಿ ರಸ್ತೆ
ಕನ್ನಮಂಗಲ ಪೋಸ್ಟ್
ದೇವನಹಳ್ಳಿ TK
ಬೆಂಗಳೂರು-562110
ಕರ್ನಾಟಕ