ಈ ಟೆಲಿಕಾಂ ಕಂಪನಿ ಕೇವಲ 225ರೂ.ನಲ್ಲಿ ಕೊಡುತ್ತಿದೆ ಲೈಫ್‌ ಟೈಮ್‌ ವ್ಯಾಲಿಡಿಟಿ |ಒಮ್ಮೆ ರೀಚಾರ್ಜ್‌ ಮಾಡಿ ಆಮೇಲೆ ಟೆನ್ಶನೇ ಇಲ್ಲ

ಇದೀಗ ಟೆಲಿಕಾಂ ಕಂಪನಿಯೊಂದು ಲೈಫ್​ಟೈಮ್​ ರೀಚಾರ್ಜ್​ ಪ್ಲಾನ್ ಅನ್ನು ಕೇವಲ 225 ರೂಪಾಯಿಗೆ ಲಭ್ಯವಾಗುವಂತೆ ಮಾಡಿದೆ. ಟೆಲಿಕಾಂ ಮಾರುಕಟ್ಟೆಯಲ್ಲಿ ಹಲವಾರು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿವೆ. ಈ ಟೆಲಿಕಾಂ ಕಂಪನಿಗಳು ನಿರಂತರವಾಗಿ ತಮ್ಮ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ, ವಿವಿಧ ರೀತಿಯ ರೀಚಾರ್ಜ್​ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತಿವೆ.

ಇತ್ತೀಚಿನ ದಿನಗಳಲ್ಲಿ ಜಿಯೋ ಮಾತ್ರವಲ್ಲದೆ, ಏರ್​ಟೆಲ್​, ವಿಐ, ಬಿಎಸ್​​ಎನ್​ಎಲ್​, MTN LO ಕೂಡ ತಮ್ಮ ಬಳಕೆದಾರರಿಗೆ ಆಫರ್ ನೀಡುತ್ತಿವೆ. ಸದ್ಯ MTN LO ತಮ್ಮ ಗ್ರಾಹಕರಿಗೆ ಬಂಪರ್ ರೀಚಾರ್ಜ್ ಆಫರ್ ಅನ್ನು ನೀಡಿದೆ.

ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL) ಗ್ರಾಹಕರನ್ನು ಆಕರ್ಷಿಸಲು ಇದೀಗ ರೀಚಾರ್ಜ್ ಆಫರ್ ಅನ್ನು ಬಿಡುಗಡೆ ಮಾಡಿದೆ. ಈ ಆಫರ್ ನಲ್ಲಿ ಗ್ರಾಹಕರು ಕೇವಲ ರೂ. 225 ರ ರೀಚಾರ್ಜ್‌ನೊಂದಿಗೆ ಲೈಫ್​ಟೈಮ್​ ವ್ಯಾಲಿಡಿಟಿಯನ್ನು ಪಡೆಯಬಹುದು ಎನ್ನಲಾಗಿದೆ. ಹಾಗೇ ಈ ಹಣವನ್ನು ಒಂದು ಬಾರಿ ಮಾತ್ರ ರೀಚಾರ್ಜ್​ ಮಾಡಬೇಕು.

ಇನ್ನೂ MTNL ನ ಈ ಯೋಜನೆ, ಸಿಮ್ ಮತ್ತು ರೀಚಾರ್ಜ್​ ಪ್ಲಾನ್​ನ ವ್ಯಾಲಿಡಿಯನ್ನು ಲೈಫ್​ಟೈಮ್​ ಆಗಿ ನೀಡುತ್ತದೆ. ಹಾಗೇ ಕರೆ ಮಾಡಲು ಬಳಕೆದಾರರಿಗೆ 100 ನಿಮಿಷಗಳ ಕಾಲ ಉಚಿತ ಅವಧಿಯನ್ನು ಕೂಡ ನೀಡಲಾಗುತ್ತದೆಯಂತೆ. ಇನ್ನೂ ಹೋಮ್ ನೆಟ್‌ವರ್ಕ್‌ ಕರೆಗಳಿಗೆ, ರೂ. 0.02 ದರ ಕಟ್​ ಆಗುತ್ತದೆ ಎನ್ನಲಾಗಿದೆ. ಎಸ್​ಟಿಡಿ ಕರೆಗಳ ದರ ಹಾಗೆಯೇ ಇದ್ದು, ವಿಡಿಯೋ ಕರೆಗೆ ನಿಮಿಷಕ್ಕೆ 0.60 ರೂಪಾಯಿ ಹಣ ಕಟ್​ ಆಗುತ್ತದೆ.

ಹಾಗೇ ಉಳಿದು ಬೇರೆ ನೆಟ್‌ವರ್ಕ್‌ ಕರೆಗಳಿಗೆ ರೂ. 0.90 ಪೈಸೆಯಷ್ಟು ಹಣ ಕಟ್​ ಆಗಲಿದ್ದು, ಸ್ಥಳೀಯ ಎಸ್​ಎಮ್​ಎಸ್ ವೆಚ್ಚ 0.50 ಪೈಸೆ. ಹಾಗೂ ರಾಷ್ಟ್ರೀಯ ಎಸ್​ಎಮ್​ಎಸ್ ವೆಚ್ಚ ರೂ. 1.50 ಆಗಿದೆ. ಇನ್ನೂ ಅಂತಾರಾಷ್ಟ್ರೀಯ ಎಸ್​ಎಮ್​ಎಸ್ ಬೆಲೆ ರೂ. 4 ರಿಂದ 5 ರೂಪಾಯಿ ಆಗಿರುತ್ತದೆ. ಪ್ರತಿ ಎಮ್​ಬಗೆ 3 ಪೈಸೆ ಡೇಟಾ ಆಗಿದೆ.

Leave A Reply

Your email address will not be published.