ಕಡಿಮೆ ಎತ್ತರ ಇರುವ ಪುರುಷರಿಗೆ ʼಸೆಕ್ಸ್‌ʼ ಆಸಕ್ತಿ ಹೆಚ್ಚು | ಈ ಬಗ್ಗೆ ಅಧ್ಯಯನ ಬಿಚ್ಚಿಟ್ಟಿದೆ ಕುತೂಹಲದ ಮಾಹಿತಿ

ಮನುಷ್ಯನ ಜೀವನದಲ್ಲಿ ಲೈಂಗಿಕ ಕ್ರಿಯೆ ಅನ್ನೋದು ಸಹಜ ಕ್ರಿಯೆ ಆಗಿದೆ. ಮನುಷ್ಯ ಸಂಘ ಜೀವಿಯಾಗಿರಲು ಇಷ್ಟ ಪಡುವ ಕಾರಣ ಲೈಂಗಿಕತೆಗೆ ಹೆಚ್ಚು ಪ್ರಾಶಸ್ತ್ಯ ಇದೆ. ಸಹಜವಾಗಿ ಮದುವೆಯ ನಂತರ ಗಂಡ ಹೆಂಡತಿಯ ಜೊತೆಗಿನ ಸಂಬಂಧವು ಉತ್ತಮವಾಗಿರಬೇಕು ಮತ್ತು ವೈವಾಹಿಕ ಜೀವನದಲ್ಲಿ ಯಾವತ್ತೂ ‘ ಅದರ ‘ ಸಂತೋಷ ಕಡಿಮೆಯಾಗಬಾರದು ಎಂದು ಇಬ್ಬರೂ ಬಯಸುತ್ತಾರೆ. ಆದರೆ ಹೆಚ್ಚಿನ ಮಹಿಳೆಯರು ಕುಳ್ಳಗೆ ಇರುವ ಪುರುಷರನ್ನು ಇಷ್ಟ ಪಡುವುದಿಲ್ಲ. ಹುಡುಗಿಯರು ಹೆಚ್ಚು ಎತ್ತರದ ಪುರುಷರನ್ನು ಬಯಸುತ್ತಾರೆ. ಅದಲ್ಲದೆ ಮಹಿಳೆಯರು ಹೆಚ್ಚಾಗಿ ಎತ್ತರ ಇರುವ ಪುರುಷರಿಗೆ ಬೇಗ ಮರುಳಾಗುತ್ತಾರೆ. ಆದರೆ ಗೆಳತಿಯರೇ, ನಿಮಗೊಂದು ವಿಚಾರ ಗೊತ್ತಾ ? ನೀವು ಸೆಕ್ಸ್ ಅನ್ನು ಬಾಯ್ಚಪ್ಪರಿಸಿ ಸವಿಯುವ ಮನಸ್ಸುಳ್ಳವರಾದರೆ ಎತ್ತರದ ಪುರುಷರ ಆಸೆ ಬಿಡಿ, ಕುಳ್ಳಗಿನ ಹುಡುಗರ ಕೈ ಹಿಡೀರಿ. ಈ ಕುಳ್ ಹೈಕ್ಳು ದೇಹದ ಆಕಾರದಲ್ಲಿ ಮಾತ್ರ ಕುಳ್ಳಗೆ. ಅದರ ವಿಚಾರಕ್ಕೆ ಬಂದ್ರೆ, ಅವರು ಹುಡುಗಿಯರನ್ನು ಕುಳಿತುಕೊಳ್ಳಲು ಕೂಡಾ ಬಿಡದಂತೆ ರಸಿಕತನ ತೋರಿಸುತ್ತಾರಂತೆ. ಹೀಗಂತ ನಾವು ಹೇಳುತ್ತಿಲ್ಲ, ಒಂದು ದೊಡ್ಡ ಅಧ್ಯಯನವು ಈ ಕುಳ್ಳಗೆ ಇರೋ ಹುಡುಗರ ‘ ಉದ್ದನೆಯ ‘ ಸಾಮರ್ಥ್ಯವನ್ನು ಪತ್ತೆ ಮಾಡಿದೆ.

ಈ ವಿಷಯ ಕುರಿತಂತೆ ‘ದಿ ಜರ್ನಲ್ ಆಫ್ ಸೆಕ್ಷುಯಲ್ ಮೆಡಿಸಿನ್’ ನ ಅಧ್ಯಯನವು ಸಣ್ಣ ಪುರುಷರಿಗೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ಮಾಹಿತಿಯನ್ನು ಬಹಿರಂಗಪಡಿಸಿದೆ.

ಹೌದು, ಅಧ್ಯಯನ ಪ್ರಕಾರ ಕಡಿಮೆ ಎತ್ತರವಿರುವ ಪುರುಷರು ಹೆಚ್ಚು ಲೈಂಗಿಕವಾಗಿ ಸಕ್ರಿಯರಾಗಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 531 ಪುರುಷರ ಮೇಲೆ ನಡೆಸಿದ ಈ ಅಧ್ಯಯನವನ್ನು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸಂಶೋಧಕರು ಮಾಡಿದ್ದಾರೆ.

ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿಯ ವಿವರ ಇಲ್ಲಿದೆ ನೋಡಿ :

  • 175 ಸೆಂಟಿಮೀಟರ್‌ಗಿಂತ ಕಡಿಮೆ ಎತ್ತರವಿರುವ ಪುರುಷರು, ಅಂದರೆ 5’9″ ಕ್ಕಿಂತ ಕಡಿಮೆ ಇರುವವರು ಉತ್ತಮ ಲೈಂಗಿಕ ಬಯಕೆಯನ್ನು ಹೊಂದಿದ್ದರು ಎಂದು ಸ್ಪಷ್ಟವಾಗಿ ತಿಳಿಸಿದೆ.
  • ಕಡಿಮೆ ಎತ್ತರವನ್ನು ಹೊಂದಿರುವ ಪುರುಷರು ಹೆಚ್ಚು ಲೈಂಗಿಕವಾಗಿ ಸಕ್ರಿಯರಾಗುತ್ತಾರೆ, ಅವರು ತಮ್ಮ ಸಂಗಾತಿಯನ್ನು ವಿಚ್ಛೇದನ ಮಾಡುವ ಸಾಧ್ಯತೆ 32 ಪ್ರತಿಶತ ಕಡಿಮೆ.
  • ಎತ್ತರದ ಪುರುಷರಿಗಿಂತ ಚಿಕ್ಕ ಪುರುಷರು ಹೆಚ್ಚು ಮನೆಕೆಲಸಗಳನ್ನು ಮಾಡುತ್ತಾರೆ ಮತ್ತು ಹೆಚ್ಚು ಹಣವನ್ನು ಗಳಿಸುತ್ತಾರೆ ಎಂದು ತಿಳಿದು ಬಂದಿದೆ.
  • ಎತ್ತರದ ಪುರುಷರು ತಮ್ಮ ನೋಟದ ಬಗ್ಗೆ ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತಾರೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಅವರು ಮನೆಗೆಲಸವನ್ನು ತಮ್ಮದೆಂದು ಪರಿಗಣಿಸುವುದಿಲ್ಲ.
  • ಕಡಿಮೆ ಎತ್ತರವಿರುವ ಪುರುಷರು ತಮ್ಮನ್ನು ತಾವು ಸಾಬೀತುಪಡಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಈ ಕಾರಣದಿಂದಾಗಿ ಅವರು ಮನೆಯಲ್ಲಿ ಮತ್ತು ಕಚೇರಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ.

ಈಗಾಗಲೇ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಮೇಲ್ವಿಚಾರಣೆಯಲ್ಲಿ ಈ ಅಧ್ಯಯನವನ್ನು ಮಾಡಲಾಗಿದ್ದು ಪ್ರೇಮ ಜೀವನಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಮಹಿಳೆಯರು ಕಡಿಮೆ ಎತ್ತರದ ಪುರುಷರನ್ನು ಇಷ್ಟಪಡುವುದಿಲ್ಲ ಎಂಬುದಾಗಿದೆ.

ಆದರೆ ಅಧ್ಯಯನ ಪ್ರಕಾರ ಕುಳ್ಳಗೆ ಇರುವ ಪುರುಷರು ಹೆಚ್ಚಿನ ಲೈಂಗಿಕ ಆಸಕ್ತಿ ಹೊಂದಿದ್ದು, ಉತ್ತಮ ಅಭಿಲಾಷೆಗಳನ್ನು ಹೊಂದಿದದವರು ಆಗಿರುತ್ತಾರೆ ಎಂಬುದು ತಿಳಿದು ಬಂದಿದೆ. ಈ ಅಧ್ಯಯನದ ನಂತ್ರ ಕುಳ್ಳಗಿನ ಹುಡುಗರ ಡಿಮಾಂಡ್ ಏರಲಿದೆ. ಸೆಕ್ಸ್ ಅನ್ನು ಇಷ್ಟಪಡುವ ಹುಡುಗಿಯರು ಇನ್ಮುಂದೆ ತಮ್ಮ ಅನುರೂಪ ಹುಡುಗನನ್ನು ಹುಡುಕುವ ಸಂಬಂಧ ಹಾಕುವ ಕಂಡೀಷನ್ ಗಳಲ್ಲಿ, ‘ ಹುಡುಗ ಕುಳ್ಳಗೆ ಇರಬೇಕು ‘ ಎಂದು ಇದ್ದಾರೂ ಆಶ್ಚರ್ಯ ಪಡಬೇಕಿಲ್ಲ.

Leave A Reply

Your email address will not be published.