ದಕ್ಷಿಣ ಕನ್ನಡ : ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ 50 ಜನ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜ.30

Share the Article

ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತವು ರಾಜ್ಯದ ಪದವಿಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸ್ಥಳೀಯ ಸಂಪನ್ಮೂಲ ವ್ಯಕ್ತಿಯಾಗಿ (LRC) ವೃತ್ತಿ ನಿರ್ವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿ ಆಧರಿಸಿ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ರಾಜ್ಯದ 29 ಜಿಲ್ಲೆಗಳಾದ ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಹಾಸನ, ಮಂಡ್ಯ, ಹಾವೇರಿ, ಕೊಪ್ಪಳ, ಚಿತ್ರದುರ್ಗ, ಬೆಳಗಾವಿ, ಕಲ್ಬುರ್ಗಿ, ಬೀದರ್, ವಿಜಯಪುರ, ಬಳ್ಳಾರಿ, ರಾಯಚೂರು, ಗದಗ, ಬಾಗಲಕೋಟಿ, ಧಾರವಾಡ, ಯಾದಗಿರಿ, ಉತ್ತರಕನ್ನಡ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ದಾವಣಗೆರೆ, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ವಿಜಯನಗರ ಜಿಲ್ಲೆಗಳಿಗೆ ರೈತರ ಸದಸ್ಯತ್ವ ನೋಂದಾವಣೆ ಮಾಡಲು (ಪ್ರತಿ ಜಿಲ್ಲೆಗೆ) 50 ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತಿದೆ.

ಹುದ್ದೆ : LRP ( ಸ್ಥಳೀಯ ಸಂಪನ್ಮೂಲ ವ್ಯಕ್ತಿ)
ವಯೋಮಿತಿ : 35 ವರ್ಷದ ಒಳಗೆ ( ರೈತರ ಮಕ್ಕಳಾದ ಯುವಕ/ಯುವತಿಯರಿಗೆ ಆದ್ಯತೆ
ವೇತನ : ರೂ.15,000

ಅಭ್ಯರ್ಥಿಯು ಪದವಿಧರರಾಗಿರಬೇಕು, ಆಧಾರ್ ಕಾರ್ಡ್ ಜೊತೆಗೆ ದ್ವಿಚಕ್ರ ವಾಹನ ಪರವಾನಗಿಯನ್ನು ಹೊಂದಿರಬೇಕು ಮತ್ತು 500 ರೂ. DD ಯೊಂದಿಗೆ ಬಯೋಡಾಟವನ್ನು ರಿಜಿಸ್ಟರ್‌ ಪೋಸ್ಟ್ ಮುಖಾಂತರ ಕೇಂದ್ರ ಕಚೇರಿ ಗೆ ಜನವರಿ 30, 2023 ಮುಂಚಿತವಾಗಿ ಕಳುಹಿಸಿ ಕೊಡಬೇಕು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ

Leave A Reply