ದಿನಕ್ಕೆ ರೂ.2 ಹೂಡಿಕೆ ಮಾಡಿ 36,000 ಪಿಂಚಣಿ ನಿಮ್ಮದಾಗಿಸಿಕೊಳ್ಳಿ | ಸರಕಾರದ ಹೊಸ ಯೋಜನೆ
ಕಾರ್ಮಿಕ ಮತ್ತು ದುಡಿಯುವ ವರ್ಗಗಳಿಗೆ ಹೊಸ ಪಿಂಚಣಿ ಯೋಜನೆಯನ್ನು ರೂಪಿಸಲಾಗಿದೆ. ಸದ್ಯ ಕೇಂದ್ರ ಸರ್ಕಾರವು ಪ್ರಸ್ತುತ ದುಡಿಯುವ ವರ್ಗಕ್ಕಾಗಿ ಹಲವಾರು ಯೋಜನೆಗಳನ್ನು ಹೊಂದಿದೆ. ಕಾರ್ಮಿಕರ ಆರ್ಥಿಕ ಸ್ಥಿತಿ ಉತ್ತಮಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ಧೇಶವಾಗಿದೆ. ಈ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆ ಕೂಡಾ ಒಂದಾಗಿದೆ.
ಹೌದು ನೀವು ಪ್ರತಿದಿನ ಬರೀ 2 ರೂಪಾಯಿ ಹೂಡಿಕೆ ಮಾಡುವ ಮೂಲಕ ವಾರ್ಷಿಕವಾಗಿ 36 ಸಾವಿರ ರೂಪಾಯಿ ಪಿಂಚಣಿಯನ್ನು ಪಡೆಯುವ ಯೋಜನೆಯನ್ನು ಸರ್ಕಾರ ಹೊಂದಿದೆ.
ಪ್ರಸ್ತುತ ನೀವು ಪ್ರತಿ ದಿನ ಬರೀ ಎರಡು ರೂಪಾಯಿ ಹೂಡಿಕೆ ಮಾಡುವ ಮೂಲಕ ಈ ಯೋಜನೆಯಡಿಯಲ್ಲಿ ಕಾರ್ಮಿಕರು ವಾರ್ಷಿಕವಾಗಿ 36 ಸಾವಿರ ರೂಪಾಯಿ ಪಿಂಚಣಿಯನ್ನು ಪಡೆಯುವ ಅವಕಾಶವಿದೆ.
ಈ ಪಿಂಚಣಿ ಯೋಜನೆ ಪಡೆಯಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್ ಹಾಗೂ
- ಬ್ಯಾಂಕ್ ಖಾತೆ ಇರಬೇಕಾಗುತ್ತದೆ.
ಇವೆರಡು ಇದ್ದರೆ ಮಾತ್ರ ನೀವು ಈ ಯೋಜನೆಯ ರಿಜಿಸ್ಟ್ರೇಷನ್ ಮಾಡಲು ಸಾಧ್ಯವಾಗುತ್ತದೆ.
ಸದ್ಯ ನೀವು ಮಾಸಿಕವಾಗಿ ಕನಿಷ್ಠ 55 ರೂಪಾಯಿ ಹೂಡಿಕೆ ಮಾಡಲೇಬೇಕು. ನಿಮಗೆ 60 ವರ್ಷವಾದಾಗ ಪಿಂಚಣಿ ಆರಂಭವಾಗುತ್ತದೆ.ನೀವು ಪ್ರತಿ ದಿನ 2 ರೂಪಾಯಿಯಂತೆ ಮಾಸಿಕ 60 ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ ಮಾಸಿಕ 3000 ರೂಪಾಯಿಯಂತೆ ವಾರ್ಷಿಕವಾಗಿ 36 ಸಾವಿರ ರೂಪಾಯಿ ಪಿಂಚಣಿ ಲಭ್ಯವಾಗುತ್ತದೆ.
ನೀವು ಈ ಯೋಜನೆಗೆ 18 ವರ್ಷದಲ್ಲಿ ಹೂಡಿಕೆ ಆರಂಭಿಸಿದರೆ, ಪ್ರತಿ ತಿಂಗಳು 55 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ವಾರ್ಷಿಕವಾಗಿ 36 ಸಾವಿರ ಪಿಂಚಣಿ ಪಡೆಯಬಹುದು. ನಿಮಗೆ 40 ವರ್ಷವಾಗಿದ್ದರೆ ಮಾಸಿಕವಾಗಿ 200 ರೂಪಾಯಿ ಅಥವಾ ಪ್ರತಿದಿನ 6.50 ರೂಪಾಯಿ ಹೂಡಿಕೆ ಮಾಡಿ 36 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು. ಆದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾದರೆ ನೀವು ಮಾಸಿಕ 15 ಸಾವಿರ ಆದಾಯವನ್ನು ಹೊಂದಿರಬೇಕಾಗುತ್ತದೆ.
ಈ ಯೋಜನೆಯನ್ನು ಬೀದಿಬದಿ ವ್ಯಾಪಾರಸ್ಥರು, ಆಟೋ ಡ್ರೈವರ್‌ಗಳು, ಕಟ್ಟಡ ಕಾರ್ಮಿಕರು,ಇತರ ಕಾರ್ಮಿಕರಿಗಾಗಿ ಸರ್ಕಾರವು ಈ ಯೋಜನೆಯನ್ನು ಆರಂಭ ಮಾಡಿದೆ. ಅಸಂಘಟಿತ ವರ್ಗದ ಕಾರ್ಮಿಕರು ನಿವೃತ್ತಿ ಬಳಿಕ ಆರ್ಥಿಕ ಸುರಕ್ಷತೆ ಹೊಂದಿರಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಯನ್ನು ಆರಂಭ ಮಾಡಿದೆ. ಈ ಯೋಜನೆಯು 18 ವರ್ಷದಿಂದ 40 ವರ್ಷದವರಿಗಾಗಿದೆ. ಈ ವಯೋಮಿತಿಯಲ್ಲಿ ಮಾತ್ರ ಹೂಡಿಕೆ ಮಾಡಬಹುದು ಎಂದು ಮಾಹಿತಿ ತಿಳಿಸಲಾಗಿದೆ.