Industry News | ಉದ್ಯೋಗಿಗಳನ್ನು ನಿಯಮದಂತೆ ಮಾತ್ರ ವಜಾಗೊಳಿಸಬೇಕು, ಇಲ್ಲದಿದ್ದರೆ ಕಾನೂನು ಬಾಹಿರ- ಕೇಂದ್ರ ಕಾರ್ಮಿಕ ಸಚಿವ !

Share the Article

ಇತ್ತೀಚೆಗೆ ಹಲವಾರು ಸಂಸ್ಥೆಗಳಲ್ಲಿ, ಐಟಿ ಸೇರಿದಂತೆ ಕಂಪನಿಗಳಲ್ಲಿ ಕೆಲಸಗಾರರನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿರುವ ವರದಿಗಳ ನಡುವೆ,’ ಯಾವುದೇ ಹಿಂಬಡ್ತಿ ಮತ್ತು ವಜಾಗೊಳಿಸುವಿಕೆಯನ್ನು ಕೈಗಾರಿಕಾ ವಿವಾದಗಳ ಕಾಯ್ದೆಯ ನಿಬಂಧನೆಗಳ ಪ್ರಕಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಅದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ ‘ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಗುರುವಾರ ಹೇಳಿದ್ದಾರೆ.

‘ಉದ್ಯಮಗಳಲ್ಲಿ ಅಥವಾ ಕೈಗಾರಿಕೆಗಳಲ್ಲಿ ಕೆಲಸಗಾರರ ವಜಾಗೊಳಿಸುವಿಕೆ ಮತ್ತು ಹಿಂಬಡ್ತಿಗೆ ಸಂಬಂಧಿಸಿದ ವಿಷಯಗಳು ಕೈಗಾರಿಕಾ ವಿವಾದಗಳ ಕಾಯ್ದೆ1947 (ಐಡಿ ಆಕ್ಟ್) ನಿಬಂಧನೆಗಳ ಮೂಲಕ ನಿರ್ವಹಿಸಲ್ಪಡುತ್ತವೆ. ಇಲ್ಲಿ ಕೆಲಸದಿಂದ ವಜಾಗೊಳಿಸುವಿಕೆಯ ವಿವಿಧ ಅಂಶಗಳನ್ನು ಮತ್ತು ಕಾರ್ಮಿಕರ ಹಿಂಬಡ್ತಿಗೆ ಪೂರ್ವಭಾವಿ ಷರತ್ತುಗಳನ್ನು ಹಾಕಿ ನಿಯಂತ್ರಿಸುತ್ತದೆ ‘ ಎಂದು ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಯಾದವ್ ಉತ್ತರಿಸಿದ್ದಾರೆ.

ಇಂಡಸ್ಟ್ರಿಯಲ್ ಡಿಸ್ಪ್ಯೂಟ್ ಕಾಯ್ದೆ ಪ್ರಕಾರ 100 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳು ಕೆಲಸಗಾರರನ್ನು ತೆಗೆಯುವ, ಅಥವಾ ವಜಾಗೊಳಿಸುವ ಮುನ್ನ ಸಂಬಂಧಿಸಿದ ಸರ್ಕಾರದ ಅನುಮತಿಯನ್ನು ಕೇಳಬೇಕು. ಒಂದು ವೇಳೆ ಹೇಳದೆ ಕೇಳದೆ ಕೈಗಾರಿಕಾ ವಿವಾದ ಕಾಯ್ದೆ ನಿಬಂಧನೆಗಳ ಅನುಸಾರ ವಜಾಗೊಳಿಸದಿದ್ದರೆ ಅದನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಕಾಯ್ದೆಯ ವಿನಾಯಿತಿಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲಸಗಾರರ ಹಿತಾಸಕ್ತಿ ಕಾಪಾಡಲು, ಅವರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬಹುದು ಎಂದು ಅವರು ಹೇಳಿದರು.

Leave A Reply