Home Karnataka State Politics Updates Election Latest Update | ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ, ಗುಜರಾತಿನಲ್ಲಿ ಗೆಲುವಿನತ್ತ ನಾಗಾಲೋಟ...

Election Latest Update | ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ, ಗುಜರಾತಿನಲ್ಲಿ ಗೆಲುವಿನತ್ತ ನಾಗಾಲೋಟ ಎಬ್ಬಿಸುತ್ತಿರುವ ಬಿಜೆಪಿ !

Hindu neighbor gifts plot of land

Hindu neighbour gifts land to Muslim journalist

ನವದೆಹಲಿ: ದೇಶದ ಗಮನ ಸೆಳೆದಿರುವ ಆಳುವ ಪಕ್ಷ ಬಿಜೆಪಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಬಹು ಪ್ರಾಮುಖ್ಯವೆನಿಸ್ಸುವ ಗುಜರಾತ್​ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳ ಚುನಾವಣಾ ಫಲಿತಾಂಶ ಗುರುವಾರ ಹೊರಬೀಳಲಿದ್ದು, ಎರಡೂ ರಾಜ್ಯಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಪ್ರಕ್ರಿಯೆ ಆರಂಭವಾಗಿದೆ.

ಇದೀಗ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು ಹಿಮಾಚಲ ಪ್ರದೇಶ ಬಿಜೆಪಿ ಕೈತಪ್ಪಿದೆ ಎನ್ನುವ ಸೂಚನೆ ಸಿಕ್ಕಿದೆ. ಗುಜರಾತಿನಲ್ಲಿ ಊಹಿಸಿದಂತೆ ಬಿಜೆಪಿ ತೀವ್ರ ಮುನ್ನಡೆ ಕಾಯ್ದುಕೊಂಡಿದೆ.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ 34 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಬಿಜೆಪಿಗಿಂತ ಮುಂದಿದೆ. ಇತ್ತೀಚಿನ ವರದಿಗಳು ಬಂದಾಗ ಬಿಜೆಪಿ 30 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇತರರು ನಾಲ್ಕು ಸ್ಥಾನಗಳಲ್ಲಿ ಮುಂದಿದ್ದಾರೆ.

ಅತ್ತ ಗುಜರಾತಿನಲ್ಲಿ ಬಿಜೆಪಿ ನಾಗಾಲೋಟ ಹಾಕುತ್ತಿದೆ. ಬಿಜೆಪಿಯು 147 ಸಾಲಗಳಲ್ಲಿ ಮುಂದಿದ್ದು ಭಾರೀ ಪ್ರಮಾಣದ ಮುನ್ನಡೆ ಸಾಧಿಸಿದೆ. ಅಲ್ಲಿ ಕಾಂಗ್ರೆಸ್ 22 ಸ್ಥಾನಗಳಲ್ಲೂ ಎಏಪಿ 9 ಸ್ಥಾನಗಳಲ್ಲಿ ಮತ್ತು ಇತರರು 4 ಸ್ಥಾನಗಳಲ್ಲಿ ಮುಂದಿದ್ದಾರೆ.

ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ 2 ರಾಜ್ಯಗಳಲ್ಲಿ ಗೆಲುವು ಸಾಧಿಸಿ ಹೊಸ ದಾಖಲೆಗಳ ನಿರ್ಮಿಸುವ ಹುಮ್ಮಸ್ಸಿನಲ್ಲಿದೆ.

ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಪಕ್ಷವು ಸತತ 7 ಬಾರಿ ಗೆಲುವು ಸಾಧಿಸಿ, 1977 ರಿಂದ 2011ರವರಗೆ 34 ವರ್ಷಗಳ ಕಾಲ ಅಧಿಕಾರ ಸೂತ್ರ ಹಿಡಿದಿತ್ತು, ಬಿಜೆಪಿ 2022ರ ಚುನಾವಣೆಯನ್ನು ಗೆದ್ದರೆ ಈ ದಾಖಲೆಯನ್ನು ಸರಿಗಟ್ಟಿ ಅತೀ ಹೆಚ್ಚು ಅವಧಿಯವರಗೆ ರಾಜ್ಯವೊಂದರಲ್ಲಿ ಅಧಿಕಾರ ನಡೆಸಿದ 2ನೇ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ, ಸಮೀಕ್ಷೆಗಳು ಈ ಬಾರಿ ಬಿಜೆಪಿ 117-151 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ.

ಇನ್ನೊಂದೆಡೆ ಹಿಮಾಚಲ ಪ್ರದೇಶದಲ್ಲಿ 1985ರ ನಂತರ ಯಾವುದೇ ಪಕ್ಷ ಸತತವಾಗಿ 2 ಬಾರಿ ಅಧಿಕಾರಕ್ಕೆ ಬಂದಿಲ್ಲ. ಆದರೆ, ಆ ಬಾರಿ ಬಿಜೆಪಿ ಮರಳಿ ಅಧಿಕಾರ ಸೂತ್ರ ಹಿಡಿದಲ್ಲಿ ಇದು ಮತ್ತೊಂದು ದಾಖಲೆಯೆನಿಸಿಕೊಳ್ಳಲಿದೆ.