ಕೋಡಿ ಹಬ್ಬ & ಉಪ್ಪಂದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಕ್ಕೆ ವಿರೋಧ : ಹಿಂದೂ ಸಂಘಟನೆಗಳಿಂದ ಆಗ್ರಹ

ಉಡುಪಿ :ಕುಂದಾಪುರ ತಾಲೂಕಿನಲ್ಲಿ ಎರಡು ಮಹತ್ವದ ಜಾತ್ರೆಗಳಲ್ಲಿ ಅನ್ಯ ಧರ್ಮೀಯ ವ್ಯಾಪಾರಿಗಳಿಗೆ ಅವಕಾಶ  ನೀಡಬಾರದೆಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದಾರೆ.

ಪ್ರಸಿದ್ದ ಕೋಟೇಶ್ವರದ ಕೋಡಿ ಹಬ್ಬ & ಉಪ್ಪಂದ ಜಾತ್ರೆಗಳು ಡಿಸೆಂಬರ್ 8 -9 ರಂದು ಶುರುವಾಗಲಿದ್ದು, ಈ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮನವಿ ಮಾಡಿದೆ
ದಿನದಿಂದ ದಿನಕ್ಕೆ  ಭಯೋತ್ಪಾದನೆ, ಲವ್ ಜಿಹಾದ್ ನಂತಹ ಪ್ರಕರಣ ಹೆಚ್ಚಿರುವ ಕಾರಣಕ್ಕೆ ಹಿಂದೂ ಸಂಘಟನೆಗಳು ಈ ರೀತಿಯ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ಸಂಘಟನೆಗಳ ಬೇಡಿಕೆಗೆ ವ್ಯವಸ್ಥಾಪನಾ ಸಮಿತಿ ಸಮ್ಮತಿಸುವ ಸಾಧ್ಯತೆಯಿದೆ.

ಇನ್ನು ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಧರ್ಮ ಸಂಘರ್ಷ ಶುರುವಾಗಿದೆ. ಡಿಸೆಂಬರ್​ 9.10. 11ರಂದು ನೆರವೇರಲಿರುವ ಜಾತ್ರೆಯಲ್ಲಿ ದೇವಸ್ಥಾನದ ಆವರಣದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶವಿಲ್ಲ.ಭಜರಂಗದಳ, ವಿಶ್ವ ಹಿಂದೂ ಪರಿಷತ್​, ಹಿಂದೂ ಜಾಗರಣ ವೇದಿಕೆಯ ಒತ್ತಾಯದ ಮೇರೆಗೆ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಯ ಆಡಳಿತಾಧಿಕಾರಿಯಿಂದ ಸಹಾಯಕ ಕಮಿಷನರ್​ಗೆ ಈಗಾಗಲೇ ನಿರ್ಣಯವನ್ನು ರವಾನೆ ಮಾಡಲಾಗಿದೆ. ಕೋಡಿಹಬ್ಬ, ಉಪ್ಪಂದಜಾತ್ರೆಗಳಲ್ಲಿ ಅನ್ಯಧರ್ಮೀಯರ ವ್ಯಾಪಾರ ನಿರ್ಬಂಧ ಹೇರಲಾಗುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ

Leave A Reply

Your email address will not be published.