“ನನ್ನ ತಾಯಿ ಸಾಯಲಿದ್ದಾರೆ” ರಜೆಗಾಗಿ ಶಿಕ್ಷಕನ ಲೀವ್ ಲೆಟರ್ | ದಂಗಾಗಿ ಹೋದ ಮುಖ್ಯಶಿಕ್ಷಕ! ಏನಿದು ವಿಚಿತ್ರ ಪ್ರಕರಣ?
ಸಾಮಾನ್ಯವಾಗಿ ರಜೆ ಬೇಕು ಎಂದೆನಿಸಿದಾಗ, ಕೆಲವರು ಕೊಡುವ ಕಾರಣ ಮಾತ್ರ ಏನೇನೋ ಇರುತ್ತದೆ. ನನಗೆ ಹೊಟ್ಟೆ ನೋವು, ತಲೆ ನೋವು, ಜ್ವರ ಅಂತಾ ಕಾರಣ ನೀಡಿ ರಜೆ ತೆಗೆದುಕೊಳ್ಳುವುದನ್ನು ನೋಡಿರ್ತೀರಿ. ಇನ್ನು ಕೆಲವರು ಮುಂದಕ್ಕೆ ಹೋಗಿ ನಮ್ಮ ಮನೆಯ ಸದಸ್ಯರೊಬ್ಬರು ತೀರಿ ಹೋಗಿದ್ದಾರೆ ಎಂದು ಸುಳ್ಳು ಹೇಳಿ ರಜೆ ಮಾಡುವವರೂ ಇದ್ದಾರೆ.
ಆದರೆ, ಇಲ್ಲೊಬ್ಬ ಬಿಹಾರದ ಈ ಶಿಕ್ಷಕ ರಜೆ ಪತ್ರದಲ್ಲಿ ನೀಡಿರುವ ಕಾರಣ ಎಲ್ಲರಿಗೆ ಆಶ್ಚರ್ಯ ಉಂಟು ಮಾಡಿದೆ. ಈ ರೀತಿಯಾಗಿ ಕೂಡಾ ರಜೆ ಕೇಳಬಹುದಾ ಅಂತ.
ಅಂದಹಾಗೆ ಬಿಹಾರದ ಮುಂಗೇರ್, ಭಾಗಲ್ಪುರ್ ಮತ್ತು ಬಂಕಾ ಜಿಲ್ಲೆಗಳಲ್ಲಿ ಶಿಕ್ಷಕರು ತಮ್ಮ ಕ್ಯಾಶುಯಲ್ ರಜೆಯ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದೆ. ಅದರ ಪ್ರಕಾರ ರಜೆ ಪಡೆಯುವ ಶಿಕ್ಷಕರು 3 ದಿನ ಮುಂಚಿತವಾಗಿಯೇ ಕ್ಯಾಶುಯಲ್ ರಜೆಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಅರ್ಜಿ ಸಲ್ಲಿಸದಿದ್ದರೆ ರಜೆಯನ್ನು ರದ್ದು ಮಾಡಲಾಗುವುದು ಎಂದಿದ್ದಾರೆ.
ಹಾಗಂತ ರಜೆಗೆ ಏನೇನೋ ಕಾರಣ ಹೇಳಿ ರಜೆ ತಗೋಳ್ಳೋಕೆ ಆಗಲ್ಲ. ಹಾಗಾಗಿ ರಜೆ ಪಡೆಯುವ ಶಿಕ್ಷಕರು ಅದಕ್ಕೆ ಸೂಕ್ತ ಕಾರಣಗಳನ್ನು ಸಹ ನೀಡಬೇಕಾಗಿದೆ. ಆದರೆ, ಇಲ್ಲೊಬ್ಬ ಶಿಕ್ಷಕರು ನೀಡಿರುವ ಕಾರಣ ಎಲ್ಲರನ್ನು ಆಘಾತಕ್ಕೆ ಉಂಟು ಮಾಡಿದೆ. ಅಂಥದ್ದೇನಿದೆ ಆ ಪತ್ರದಲ್ಲಿ ಅಂತಾ ನೀವು ಊಹಿಸಬಹುದು? ಮುಂದೆ ಓದಿ.. ಡಿಸೆಂಬರ್ 5ರಂದು ರಾತ್ರಿ 8 ಗಂಟೆಗೆ ನಮ್ಮ ತಾಯಿ ಮೃತಪಡಲಿದ್ದಾರೆ. ಹೀಗಾಗಿ ನನಗೆ 6 ಮತ್ತು 7ನೇ ತಾರೀಖು ತಾಯಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ರಜೆ ಬೇಕು ಎಂದು ಕೇಳಿದ್ದಾರೆ.
ಸಾಯುವ ಮೊದಲೇ ಎಲ್ಲದಾರೂ ಯಾರಾದರೂ ಈ ರೀತಿ ರಜೆ ತಗೋತ್ತಾರಾ? ಆದರೆ ಈ ರೀತಿಯ ಪ್ರಕರಣ ನಡೆದಿದೆ. ನಮ್ಮ ಮನೆಯ ಸದಸ್ಯರೊಬ್ಬರು ಸತ್ತಿದ್ದಾರೆ, ರಜೆ ಕೊಡಿ ಎಂದು ಕೇಳುವುದನ್ನು ನೋಡಿದ್ದೇವೆ. ಆದರೆ, ಮುಂದೆ ಅವರು ಸಾಯುತ್ತಾರೆ. ಸಾಯಲಿದ್ದಾರೆ, ಹಾಗಾಗಿ ರಜೆ ಕೊಡಿ ಎಂದು ಕೇಳುವುದು ಅಸಹಜ ಎನಿಸದೇ ಇರದು. ಅಂದಹಾಗೆ ಈ ಪತ್ರ ಬರೆದಿರುವುದು ಓರ್ವ ಶಿಕ್ಷಕ ಅಜಯ್ ಕುಮಾರ್ ಎಂಬುವರು.
ಮತ್ತೊಬ್ಬ ಶಿಕ್ಷಕನ ರಜೆ ಪತ್ರ ಕೂಡ ವೈರಲ್ ಆಗಿದೆ. ಅದರಲ್ಲಿ ಆತ ಡಿಸೆಂಬರ್ 4 ರಿಂದ ಡಿಸೆಂಬರ್ 5 ರವರೆಗೆ ಅನಾರೋಗ್ಯದಿಂದ ಬಳಲುತ್ತೇನೆ, ಇದರಿಂದಾಗಿ ಶಾಲೆಗೆ ಬರಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ನಿಜಕ್ಕೂ ಶಿಕ್ಷಕರು ಈ ರೀತಿ ಬರೆದು ರಜೆ ಕೇಳಿದ್ದು ನೋಡಿ ನಿಜಕ್ಕೂ ಜನ ದಂಗಾಗಿರುವುದಂತೂ ನಿಜ.