Home Education 15 ಸಾವಿರ ಶಿಕ್ಷಕರ ನೇಮಕಾತಿ | 1:1 ತಾತ್ಕಾಲಿಕ ಆಯ್ಕೆ ಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ

15 ಸಾವಿರ ಶಿಕ್ಷಕರ ನೇಮಕಾತಿ | 1:1 ತಾತ್ಕಾಲಿಕ ಆಯ್ಕೆ ಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ

Hindu neighbor gifts plot of land

Hindu neighbour gifts land to Muslim journalist

ರಾಜ್ಯದ ವಿವಿಧ ಶಾಲೆಗಳಲ್ಲಿ ಖಾಲಿ ಇದ್ದಂತ 15,000 ಪದವೀಧರ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪದವೀಧರ ಶಾಲಾ ಶಿಕ್ಷಕರ ನೇಮಕಾತಿಗೆ 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು.

ಶಿಕ್ಷಣ ಇಲಾಖೆ ಪ್ರಕಟಿಸಿದಂತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಸಂಬಂಧ ಅಕ್ಷತ ಚೌಗಲೆ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಪರವಾಗಿ ಲತಾ ಶೆಟ್ಟಿ ಎಂಬುವಂತ ವಕೀಲರು ವಾದಿಸಿದ್ದರು.

15 ಸಾವಿರ ಹುದ್ದೆಗಳಿಗೆ 13,363 ಅಭ್ಯರ್ಥಿಗಳು ಮಾತ್ರವೇ ಆಯ್ಕೆಯಾಗಿದ್ದರು. ಇನ್ನೂ 1,637 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಇಲ್ಲದೇ ಖಾಲಿ ಉಳಿದಿದ್ದವು.
ದಿನಾಂಕ 28-11-2022ರಂದು ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರನ್ನು ಒಳಗೊಂಡಂತ ನ್ಯಾಯಪೀಠವು, ಮುಂದಿನ ಆದೇಶದವರೆಗೆ ದಿನಾಂಕ 18-11-2022ರಂದು ಪ್ರಕಟಿಸಿರುವಂತ 1:1 ತಾತ್ಕಾಲಿಕ ಶಿಕ್ಷಕರ ಆಯ್ಕೆ ಪಟ್ಟಿಗೆ ತಡೆಯಾಜ್ಞೆಯನ್ನು ನೀಡಿ, ಆದೇಶಿಸಿದ್ದಾರೆ