Home Jobs ದೂರದರ್ಶನ ಹಾಗೂ ಆಕಾಶವಾಣಿಯ ಸುದ್ದಿ ವಿಭಾಗದಲ್ಲಿ ಹುದ್ದೆ, ಆಸಕ್ತರು ಅರ್ಜಿ ಸಲ್ಲಿಸಿ

ದೂರದರ್ಶನ ಹಾಗೂ ಆಕಾಶವಾಣಿಯ ಸುದ್ದಿ ವಿಭಾಗದಲ್ಲಿ ಹುದ್ದೆ, ಆಸಕ್ತರು ಅರ್ಜಿ ಸಲ್ಲಿಸಿ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು ದೂರದರ್ಶನ ಹಾಗೂ ಆಕಾಶವಾಣಿಯ ಸುದ್ದಿ ವಿಭಾಗದಲ್ಲಿ ಸಲಹಾ ಸಂಪಾದಕರು, ಬಹುಮಾಧ್ಯಮ ಪರ್ತಕರ್ತರು (Multi Media Journalist) ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಸಂಪೂರ್ಣವಾಗಿ ಗುತ್ತಿಗೆ ಆಧಾರವಾಗಿದ್ದು, ಪೂರ್ಣ ಅವಧಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ.

ಹುದ್ದೆಗಳ ವಿವರ : ಸಲಹಾ ಸಂಪಾದಕರು
ವಿದ್ಯಾರ್ಹತೆ- ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ
ಅನುಭವ – ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ 15 ವರ್ಷ
ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಪರಿಣಿತಿ ಹಾಗೂ ಜ್ಞಾನ ಅವಶ್ಯ
ವಯೋಮಿತಿ- 55 ವರ್ಷ
ಗುತ್ತಿಗೆ ಅವಧಿ- 2 ವರ್ಷ
ಸಂಭಾವನೆ – ಪ್ರತಿ ತಿಂಗಳಿಗೆ ರೂ. 1,25,000/-

ಬಹು ಮಾಧ್ಯಮ ಪತ್ರಕರ್ತರು – ( Multi Media Journalist)
ಬಹು ಮಾಧ್ಯಮ ಪತ್ರಕರ್ತರಾಗಿ ಬೆಂಗಳೂರು, ರಾಯಚೂರು, ರಾಮನಗರ, ಮೈಸೂರು, ಕಲಬುರಗಿ, ಧಾರವಾಡ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಬೆಳಗಾವಿಯಲ್ಲಿ ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ಪೂರ್ಣ ಅವಧಿಯಲ್ಲಿ ಕಾರ್ಯನಿರ್ವಹಿಸಬೇಕು.
ವಿದ್ಯಾರ್ಹತೆ- ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಡಿಪ್ಲೋಮಾ,
ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಪರಿಣಿತಿ ಹಾಗೂ ಜ್ಞಾನ
ಅನುಭವ- ವರದಿಗಾರಿಕೆಯಲ್ಲಿ 3 ವರ್ಷ
ವಯೋಮತಿ – 24-40 ವರ್ಷ
ಗುತ್ತಿಗೆ ಅವಧಿ- 2 ವರ್ಷ
ಸಂಭಾವನೆ- ಪ್ರತಿ ತಿಂಗಳಿಗೆ ರೂ. 30,000/-

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23-11-2022

ಆಕಾಂಕ್ಷಿಗಳು https://applications.prasarbharati.org ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಕ್ಕಾಗಿ https://prasarbharati.gov.in/pbvacancies/