Home latest Petrol Diesel Rate : ಜನಸಾಮಾನ್ಯರೇ ನಿಮಗೆ ಕೇಂದ್ರದಿಂದ ಸಿಹಿ ಸುದ್ದಿ: ಬರೋಬ್ಬರಿ 7 ತಿಂಗಳ...

Petrol Diesel Rate : ಜನಸಾಮಾನ್ಯರೇ ನಿಮಗೆ ಕೇಂದ್ರದಿಂದ ಸಿಹಿ ಸುದ್ದಿ: ಬರೋಬ್ಬರಿ 7 ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ!

Hindu neighbor gifts plot of land

Hindu neighbour gifts land to Muslim journalist

ದೇಶದ ಜನರಿಗೆ ನವೆಂಬರ್ ತಿಂಗಳ ಮೊದಲ ದಿನವೇ ಶುಭ ಸುದ್ದಿ ದೊರಕಿದೆ. ಅದೇನೆಂದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಇಳಿಕೆಯಾಗಿದ್ದು ನವೆಂಬರ್ 1ರಿಂದಲೇ ಅಂದರೆ ಇಂದಿನಿಂದಲೇ ಜಾರಿಗೆ ಬರಲಿದೆ.

ಮೇ 22 ರಂದು ಕೇಂದ್ರ ಸರ್ಕಾರವು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿತ್ತು. ಇದಾದ ನಂತರ ಇದೀಗ 40 ಪೈಸೆಯಷ್ಟು ಇಳಿಕೆ ಮಾಡಿದ್ದು ನವೆಂಬರ್ 1ರ ಬೆಳಗ್ಗೆ 6 ಗಂಟೆಯಿಂದ ಹೊಸ ಬೆಲೆ ಜಾರಿಗೆ ಬರಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ಪೆಟ್ರೋಲ್ ಬೆಲೆ ಲೀಟರ್ಗೆ 96.72 ರೂ ಮತ್ತು ಡೀಸೆಲ್ ಪ್ರತಿ ಲೀಟರ್ಗೆ 89.62 ರೂಪಾಯಿ ಇದೆ. ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ನಿನ್ನೆ ಪೆಟ್ರೋಲ್ ಬೆಲೆ ಲೀಟರ್ಗೆ 106.31 ರೂ ಮತ್ತು ಡೀಸೆಲ್ ಲೀಟರ್ ಗೆ 94.27ರೂ. ಇತ್ತು.

ಇದಲ್ಲದೇ, ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 102.63 ರೂ.ಗಳಾಗಿದ್ದು, ಡೀಸೆಲ್ ಬೆಲೆ ಲೀಟರ್ಗೆ 94.24 ರೂ. ಅದೇ ಸಮಯದಲ್ಲಿ, ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಅನ್ನು 106.03 ರೂ ಮತ್ತು ಡೀಸೆಲ್ ಲೀಟರ್ಗೆ 92.76 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈಗ ಎಲ್ಲ ಕಡೆ 40 ಪೈಸೆ ಇಳಿಕೆಯಾಗಲಿದ್ದು, ನವೆಂಬರ್ 1ರ ಬೆಳಗ್ಗೆ 6ರಿಂದ
ಅನ್ವಯವಾಗಲಿದೆ. ಇನ್ನು ಬೆಂಗಳೂರಿನಲ್ಲಿ ನಿನ್ನೆ ಪೆಟ್ರೋಲ್ ದರ 101.92 ರೂಪಾಯಿ ಇದ್ದು ಇಂದಿನಿಂದ 101.52 ರೂಪಾಯಿ ಆಗಲಿದೆ. ಇನ್ನು ಡಿಸೇಲ್ ಬೆಲೆ 87.89 ರೂಪಾಯಿ ಇದ್ದು , ಇಂದು 87.47 ರೂಪಾಯಿ ಆಗಲಿದೆ.