Kantara: ‘ ಕಾಂತಾರ ಕಥೆ ಒಂದು ಗಿಮಿಕ್​, ಹೀರೋ ಪಾತ್ರ ಹಾಸ್ಯಾಸ್ಪದ, ಕ್ಲೈಮಾಕ್ಸ್ ಬಗ್ಗೆ ಆಸಕ್ತಿಯೇ ಉಳಿಯಲಿಲ್ಲ ‘ -ಕಟು ಟೀಕೆ ಮಾಡಿದ ನಿರ್ದೇಶಕ ಅಭಿರೂಪ್​ ಬಸು

‘ಕಾಂತಾರ’ ಚಿತ್ರವನ್ನು ನಿರ್ದೇಶಕ ಅಭಿರೂಪ್​ ಬಸು ಕಟುವಾಗಿ ಟೀಕಿಸಿದ್ದಾರೆ. ಈ ಸಿನಿಮಾದಲ್ಲಿನ ಅನೇಕ ಅಂಶಗಳ ಕುರಿತು ಅವರು ತಕರಾರು ತೆಗೆದಿದ್ದಾರೆ.

‘ಕಾಂತಾರ’ (Kantara) ಸಿನಿಮಾಗ ಇಡೀ ವಿಶ್ವಕ್ಕೆ ಒಪ್ಪಿಗೆ ಆಗಿದೆ. ಎಲ್ಲೆಡೆ ಅದಕ್ಕೆ ಜನ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರ ನೋಡಿ ಹೋಗಳದವರು ಇಲ್ಲ. ಮತ ಪ್ರಭಾಸ್​, ಅನುಷ್ಕಾ ಶೆಟ್ಟಿ, ಕಂಗನಾ ರಣಾವತ್, ರಜನಿಕಾಂತ್​, ವಿವೇಕ್​ ಅಗ್ನಿಹೋತ್ರಿ, ಜಗ್ಗೇಶ್ ಮುಂತಾದ ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ ಈಗ ನಿಧಾನಕ್ಕೆ ಟೀಕೆಗಳು ಒಂದೊಂದಾಗಿ ಕೇಳಿಬರುತ್ತಿವೆ.

ಈಗ ಈ ಸಿನಿಮಾದ ಕೆಲವು ಅಂಶಗಳ ಬಗ್ಗೆ ತಕರಾರು ತೆಗೆದಿದ್ದಾರೆ. ರಿಷಬ್​ ಶೆಟ್ಟಿ (Rishab Shetty) ನಟನೆ, ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ಅಗತ್ಯಕ್ಕಿಂತಲೂ ಹೆಚ್ಚಿನ ಹೈಪ್​ ಸಿಕ್ಕಿದೆ ಎಂಬುದು ಕೆಲವರ ಅಭಿಪ್ರಾಯ. ಅಲ್ಲಿಂದ ಇನ್ನೊಂದು ಒಂದು ಹೆಜ್ಜೆ ಮುಂದೆ ಹೋಗಿರುವ ನಿರ್ದೇಶಕ ಅಭಿರೂಪ್​ ಬಸು (Abhiroop Basu) ಅವರು, ‘ಕಾಂತಾರ’ ಸಿನಿಮಾವನ್ನು ಕಟುವಾಗಿ ಟೀಕಿಸಿದ್ದಾರೆ.

ಎಕನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ಅಭಿರೂಪ್​ ಬಸು ಅವರು ಕೆಲ ವಿಚಾರಗಳನ್ನು ಎತ್ತಿದ್ದಾರೆ. ಅದೇನುಎಂದು ನೋಡೋಣ. ‘ ನಮ್ಮ ಜನರ ಬುದ್ಧಿವಂತಿಕೆಯನ್ನು ಈ ಸಿನಿಮಾ ಅಣಕಿಸುತ್ತದೆ ಎಂಬ ಭಾವನೆ ನನ್ನದು. ಚಿತ್ರವನ್ನು ಕಳಪೆಯಾಗಿ ಮಾಡಲಾಗಿದೆ. ಚಿತ್ರ ಪ್ರಗತಿಪರವಲ್ಲದ ರೀತಿಯಲ್ಲಿದೆ. ಕಥೆಯಲ್ಲಿನ ತಿರುವುಗಳು ತುಂಬ ಅಪ್ರಾಮಾಣಿಕವಾಗಿವೆ. ಸಿನಿಮಾ ಕೇವಲ ಗಿಮಿಕ್​ ರೀತಿ ಇದೆ. ಹೀರೋ ಪಾತ್ರ ಒಳ್ಳೆಯವನಾಗಿ ಬದಲಾಗುವ ಸನ್ನಿವೇಶ ಹಾಸ್ಯಾಸ್ಪದವಾಗಿದೆ. ಅತಿಯಾಗಿ ಚರ್ಚೆ ಆಗಿರುವ ಕ್ಲೈಮ್ಯಾಕ್ಸ್​ ಬಗ್ಗೆ ನನಗೆ ಆಸಕ್ತಿಯೇ ಉಳಿಯಲಿಲ್ಲ’ ಎಂದು ನಿರ್ದೇಶಕ ಅಭಿರೂಪ್​ ಬಸು ಹೇಳಿದ್ದಾರೆ.

ಥಿಯೇಟರ್​ನಲ್ಲಿ ‘ಕಾಂತಾರ’ ಚಿತ್ರವನ್ನು ನೋಡಿದ ನಂತರ ಬಸು ಅವರು ಈ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು. ಈಗ ಅವರ ಹೇಳಿಕೆಗೂ ವಿರೋಧ ಕೇಳಿಬಂದಿದೆ. ಅವರ ಹೇಳಿಕೆಯ ವಿರುದ್ಧ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಕೂಡ ತಮ್ಮ ಹೇಳಿಕೆಗೆ ತಾವು ಬದ್ಧರಾಗಿರುವುದಾಗಿ ಅಭಿರೂಪ್ ಬಸು ತಿಳಿಸಿದ್ದಾರೆ.

ಎಲ್ಲೆಡೆ ಪೌರಾಣಿಕ ಪಾತ್ರಗಳಿಗೆ ವೈಜ್ಞಾನಿಕ ಪುರಾವೆಯನ್ನು ಹುಡುಕುತ್ತಿರುವ ಪರಿಸ್ಥಿತಿ ಇರುವಾಗ ಇದೆಲ್ಲ ಅಚ್ಚರಿ ಏನಲ್ಲ – ಎಂದು ಅವರು ಹೇಳಿದ್ದಾರೆ.

ಇದೀಗ ಕಾಂತಾರ ಮೇಲೆ ಕೋರ್ಟು ವರಹಾ ರೂಪಂ ಹಾಡು ಬಳಸದಂತೆ ತಾಕೀತು ಮಾಡಿದೆ
ಇತ್ತೀಚೆಗೆ ‘ವರಾಹ ರೂಪಂ..’ ಹಾಡಿನ ಬಗ್ಗೆಯೂ ಅನೇಕರಿಂದ ಟೀಕೆ ವ್ಯಕ್ತವಾಗಿತ್ತು. ಮಲಯಾಳಂನ ‘ನವರಸಂ..’ ಗೀತೆಯ ಟ್ಯೂನ್​ ಅನ್ನು ಸಂಗೀತ ನಿರ್ದೇಶಕ ಅಜನೀಶ್​ ಬಿ. ಲೋಕನಾಥ್​ ಕಾಪಿ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು. ಈ ಕುರಿತು ‘ನವರಸಂ..’ ಗೀತೆಯನ್ನು ನಿರ್ಮಿಸಿದ ‘ತೈಕ್ಕುಡಂ ಬ್ರಿಡ್ಜ್​’ ತಂಡ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿತ್ತು. ‘ಯಾವುದೇ ರೀತಿಯಲ್ಲೂ ‘ತೈಕ್ಕುಡಂ ಬ್ರಿಡ್ಜ್​’ ತಂಡವು ‘ಕಾಂತಾರ’ ಸಿನಿಮಾ ಜೊತೆ ಸಹಯೋಗ ಹೊಂದಿಲ್ಲ. ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್​ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಇದಕ್ಕೆ ಕಾರಣವಾದವರ ವಿರುದ್ಧ ನಾವು ಕಾನೂನಿನ ಕ್ರಮಕ್ಕೆ ಒತ್ತಾಯಿಸುತ್ತೇವೆ’ ಎಂದು ‘ತೈಕ್ಕುಡಂ ಬ್ರಿಡ್ಜ್​’ ಮಾಡಿದ ಪೋಸ್ಟ್​ ವೈರಲ್​ ಆಗಿತ್ತು. ಈಗ ಕೋರ್ಟು ಮಧ್ಯ ಪ್ರವೇಶಿಸಿದೆ. ಮುಂದೇನು ಆಗತ್ತೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.