ಚಿತ್ರೋದ್ಯಮದಲ್ಲಿ ಕೂಡಾ ಸಮಾನ ವೇತನ ಬೇಕು – ನಟಿ ರಮ್ಯಾ

ಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಬಿಸಿಸಿಐ ಮೊದಲ ಹೆಜ್ಜೆಯನ್ನಿಟ್ಟಿದೆ. ಪುರುಷ ಹಾಗೂ ಮಹಿಳಾ ಆಟಗಾರರಿಗೆ ಸಮಾನ ಪಂದ್ಯ ಶುಲ್ಕ ಸಿಗಬೇಕು ಎಂಬ ಕಾರಣದಿಂದ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಒಂದು ಮಹತ್ವ ನಿರ್ಧಾರವನ್ನು ಮಾಡಿದೆ. ತನ್ನ ಕೇಂದ್ರೀಯ ಗುತ್ತಿಗೆ ಪಡೆದ ಮಹಿಳಾ ಮತ್ತು ಪುರುಷ ಆಟಗಾರರಿಗೆ ಸಮಾನ ವೇತನ ನೀಡುವುದಾಗಿ ಘೋಷಿಸಿದೆ.

ಮಾಜಿ ಸಂಸದೆ ಹಾಗೂ ಸ್ಯಾಂಡಲ್​ವುಡ್ ನಲ್ಲಿ ಸಾಕಷ್ಟು ಮಿಂಚಿರುವ ನಟಿ ಮೋಹಕ ತಾರೆ ರಮ್ಯಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಪುರುಷ-ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ನೀಡಬೇಕು ಎಂಬ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಚಿತ್ರೋದ್ಯಮ ಸಹ ಇದನ್ನು ಅನುಸರಿಸಬೇಕು ಎಂದು ನಟಿ ರಮ್ಯಾ ಬೇಡಿಕೆ ಇಟ್ಟಿದ್ದಾರೆ.

ನಟಿ ರಮ್ಯಾ ಅವರು ಇದು ತುಂಬಾ ಒಳ್ಳೆಯ ನಿರ್ಧಾರ ಎಂದು ಬಿಸಿಸಿಐ ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರೋದ್ಯಮ ಕೂಡ ಇದನ್ನು ಅನುಸರಿಸಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ಯಾಗ್ ಮಾಡಿ ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.