30 ಲಕ್ಷ ಸಂಬಳ ತರುವ ವರ ಬೇಕಾಗಿದೆ ಎಂದು ಅರ್ಹತೆಗಳ ಉದ್ದ ಲಿಸ್ಟ್ ನೀಡಿದ ಹುಡುಗಿ ; ಮದುವೆ ಜಾಹೀರಾತು ನೋಡಿ ‘ ಇದು ಆಗೋ ಹೋಗೋ ಮಾತಲ್ಲ’ ಎಂದು ಕೈ ಚೆಲ್ಲಿದ ಯುವಕರು !

ತಮಗೆ ಅನುರೂಪ ವರ ಬೇಕು, ತಮ್ಮ ಗಂಡನಾಗುವವನು ಹೀಗೆಯೇ ಇರಬೇಕು ಎಂದು ಹಲವು ಯುವತಿಯರು ಕನಸು ಕಾಣುವುದು ಸಹಜ. ಅದಕ್ಕಾಗಿಯೇ ಅಪರೂಪಕ್ಕೆ ಕೆಲವೊಮ್ಮೆ ತಮ್ಮಿಷ್ಟದ ಗಂಡಿಗಾಗಿ ಜಾಹೀರಾತು ನೀಡುವುದೂ ಈ ದಿನಗಳಲ್ಲಿ ಇದೆ. ಆದರೆ ಇಲ್ಲೊಬ್ಬಳು ‘ಟೆಕ್ನಿಕಲ್ ‘ ಲೇಡಿ ನೀಡಿರುವ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಹಂಗಾಮ ಸೃಷ್ಟಿಸಿದೆ. ಆಕೆಯ ಜಾಹೀರಾತು ಇತರ ಹುಡುಗಿಯರ ಹುಬ್ಬೇರಿಸಿದ್ದಾರೆ. ಹಾಗಾದ್ರೆ ಏನಿದೆ ಆಕೆಯ ಡಿಮಾಂಡ್ ಗೊತ್ತಾ ?

ತನಗೆ 1992 ರ ಜೂನ್ ಗಿಂತ ಮೊದಲು ಜನಿಸಿರುವ ಗಂಡು ತನಗೆ ಬೇಕು ಎಂದಿರುವ ಯುವತಿಯ ಮುಂದಿನ ಬೇಡಿಕೆಗಳು ಸುದ್ದಿಗೆ ಗ್ರಾಸವಾಗಿವೆ. ತನ್ನ ಗಂಡನಾಗುವವ ಎಲ್ಲೆಲ್ಲಿ ಓದಿರಬೇಕು, ಯಾವ್ಯಾವ ಪದವಿ ಎನ್ನುವುದನ್ನು ಪಡೆದಿರಬೇಕು ಎಂದು ಈಕೆ ಜಾಹೀರಾತಿನಲ್ಲಿ ತಿಳಿಸಿದ್ದಾಳೆ.

ವರನ ಓದು : ಮದುವೆಯಾಗಲು ಹೊರಡುವ ಹುಡುಗನ ಒಟ್ಟಾರೆ ಎಜುಕೇಶನ್ ಈ ರೀತಿ ಇರಬೇಕು : ಎಂಬಿಎ, ಎಂಟೆಕ್, ಎಂಎಸ್, ಪಿಜಿಡಿಎಂ. ಹೀಗೆ ಹೇಳಿದ್ದಾಳೆ:

ಇಂಜಿನಿಯರಿಂಗ್ ಪದವಿಯನ್ನು ಆತ ಐಐಟಿ- ಬಾಂಬೆ, ಮದ್ರಾಸ್, ಕಾನ್ಸು‌ರ, ದೆಹಲಿ, ರೂರ್ಕಿ, ಖರಗ್‌ಪುರ, ಗುವಾಹಟಿ ಸೇರಿದಂತೆ ಒಂದನೇ ಶ್ರೇಣಿಯ ಕಾಲೇಜಿನಲ್ಲಿ ಕಲಿತಿರಬೇಕು. ಎನ್‌ಐಟಿ ಪದವೀಧರನಾಗಿದ್ದರೆ ಅದನ್ನು ಆತ ಕೋಲ್ಕತಾ, ದೆಹಲಿ, ಕುರುಕ್ಷೇತ್ರ, ಜಲಂಧರ್, ತಿರುಚಿ, ಸುರತ್ಕಲ್, ವಾರಂಗಲ್. ಐಐಟಿ ಹೈದರಾಬಾದ್, ಅಲಹಾಬಾದ್, ದೆಹಲಿ ಅಥವಾ ಬೆಂಗಳೂರಿನಲ್ಲಿ ಕಲಿತಿರಬೇಕಂತೆ. ಇಷ್ಟು ಓದಿದ್ರೆ ಎಲ್ಲಿ ಸಾಕಾಗತ್ತೆ? ಆಕೆಯನ್ನು ಮದುವೆಯಾಗಲು ಇನ್ನೂ ಒಂದು ದೊಡ್ಡ ವಿದ್ಯಾರ್ಹತೆ ಬೇಕಿದೆ.

ಇಂಜಿನಿಯರಿಂಗ್ ಹೊರತಾಗಿ ಆತ ಐಐಎಸ್‌ಸಿ ಬೆಂಗಳೂರು, ಬಿಐಟಿಎಸ್ ಪಿಲಾನಿ, ಹೈದರಾಬಾದ್, ಡಿಟಿಯು, ಎನ್‌ಎಸ್‌ಐಟಿ ಮತ್ತು ಜಾಧವಪುರ ವಿಶ್ವವಿದ್ಯಾಲಯ (ಕೋಲ್ಕತಾ) ಇಲ್ಲಿ ಎಂಬಿಎ ವ್ಯಾಸಂಗ ಮಾಡಿರಬೇಕು. ಐಐಎಂ ನಲ್ಲಿ ಕಲಿತಿರುವುದಾದರೆ ಅದು ಅಹಮದಾಬಾದ್, ಬೆಂಗಳೂರು, ಕೋಲ್ಕತಾ, ಇಂದೋರ್,ಲಖನೌ, ಕೋಯಿಕ್ಕೋಡ್‌ನಿಂದ ಆಗಿರಬೇಕು. ಇದು ಕ್ವಾಲಿಫಿಕೇಷನ್ ನ ಕಥೆಯಾಯಿತು. ಅದರ ಹೊರತು ಆಕೆ ಇನ್ನಷ್ಟು ಕಂಡೀಷನ್ ಅನ್ನು.ಮಡಗಿದ್ದಾಳೆ.

ಇನ್ನು ಆತ ಸಂಸ್ಥೆಯಲ್ಲಿ ಕಲಿತರೆ ಸಾಲದು, ತನ್ನ ಗಂಡನಾಗುವವ ಕಾರ್ಪೊರೇಟ್ ಸಂಸ್ಥೆಯಲ್ಲಿ ದುಡಿದು ವಾರ್ಷಿಕವಾಗಿ 30 ಲಕ್ಷ ರೂಪಾಯಿ (ಅಂದರೆ ತಿಂಗಳಿಗೆ ಎರಡೂವರೆ ಲಕ್ಷ ರೂ.) ಸಂಬಳ ಪಡೆಯಬೇಕು ಎಂದಿದ್ದಾರೆ. ವರನ ಎತ್ತರವು 57″ ನಿಂದ 6” ನಡುವೆ ಇರಬೇಕು ಎಂದು ಹೇಳಲಾಗಿದೆ. ಈತನ ಕುಟುಂಬವು ಚಿಕ್ಕದಾಗಿರಬೇಕು, ಗರಿಷ್ಠ 2 ಒಡಹುಟ್ಟಿದವರು ಇರಬೇಕು. ವಿದ್ಯಾವಂತ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಾಹೀರಾತಿನಲ್ಲಿ ಬರೆಯಲಾಗಿದೆ.

ಇಷ್ಟೆಲ್ಲಾ ಎಜುಕೇಶನ್ ಕಂಡೀಷನ್ ಹಾಕುತ್ತಿರುವ ಹುಡುಗಿಯ ಕ್ವಾಲಿಫಿಕೇಷನ್ ಏನು, ಅವಳು ಕೂಡಾ ಹೈಯೆಸ್ಟ್ ಸ್ಕಾಲರ್ ನಾ ಅಥವಾ ಅತಿರೇಕ ಸುಂದರಿಯಾ ? ಎಂಬ ಬಗ್ಗೆ ಈಗ ಇಡೀ ದೇಶಕ್ಕೆ ಕುತೂಹಲ ಮೂಡಿದೆ. ಆಕೆಯ ಬೇಡಿಕೆ ಕಂಡ ಯುವಕರು ‘ಇದು ಆಗೋ ಹೋಗೋ ಮಾತಲ್ಲ’ ಎಂದು ಕೈ ಚೆಲ್ಲಿದ್ದಾರೆ. ಆದರೆ ನೆಟ್ಟಿಗರು ಆಕೆಯ ಜಾಹೀರಾತು ಸುದ್ದಿ, ಈ ಮೂಲಕ ಹರಡಿ ಆಕೆಯ 30 ಲಕ್ಷದ ವರನ ತಲಾಷ್ ಗೆ ಸಹಾಯ ಮಾಡ್ತಿದ್ದಾರೆ.

Leave A Reply

Your email address will not be published.