Home News ಕೆರೆ ಕಟ್ಟೆಗಳ ನಿರ್ಮಾಣದ ಸರದಾರ ʻ ಕಲ್ಮನೆ ಕಾಮೇಗೌಡ ʼ ನಿಧನ |

ಕೆರೆ ಕಟ್ಟೆಗಳ ನಿರ್ಮಾಣದ ಸರದಾರ ʻ ಕಲ್ಮನೆ ಕಾಮೇಗೌಡ ʼ ನಿಧನ |

Hindu neighbor gifts plot of land

Hindu neighbour gifts land to Muslim journalist

ಮಂಡ್ಯ: ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಅಂತರ್ಜಲ ವೃದ್ಧಿಯಲ್ಲಿ ದೇಶದ ಗಮನವನ್ನು ಸೆಳೆದ `ಕಲ್ಮನೆ ಕಾಮೇಗೌಡ(Kalmane Kamegowda)ಇಂದು ಕೊನೆಯುಸಿರೆಳೆದಿದ್ದಾರೆ. ಕೆರೆ ಕಟ್ಟೆಗಳ ನಿರ್ಮಾಣದ ಸರದಾರ ಎಂದೇ ಖ್ಯಾತರಾಗಿದ್ದರು.
ಮಂಡ್ಯದ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಅಂತರ್ಜಲ ವೃದ್ಧಿಯಲ್ಲಿ ದೇಶದ ಗಮನವನ್ನು ಸೆಳೆದ 16 ಚೆಕ್ ಡ್ಯಾಂ ನಿರ್ಮಾತೃ, ರಾಜ್ಯೋತ್ಸವ ಬಸವಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದ ಆಧುನಿಕ ಭಗೀರಥ ರಂದು ಖ್ಯಾತಿ ಪಡೆದಿರುವ ಕಲ್ಮನೆ ಕಾಮೇಗೌಡ (84) ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ .

ಮೃತರು ಪತ್ನಿ ಇಬ್ಬರು ಗಂಡು ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಭಿಮಾನಿಗಳನ್ನು ಅಗಲಿದ್ದಾರೆ. ಇವರು ಅಂತರ್ಜಲ ,ಪರಿಸರ ಸಂರಕ್ಷಣೆ ಮಹತ್ವದ ಪಾತ್ರ ವಹಿಸಿದ್ದರು