KSP Recruitment 2022 : ಪೊಲೀಸ್ ಇಲಾಖೆಯಿಂದ 1137 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ !!!
ಕರ್ನಾಟಕ ರಾಜ್ಯಾದ್ಯಂತ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ ಟೇಬಲ್ ಸಿವಿಲ್ ( ಪುರುಷ ಮತ್ತು ಮಹಿಳಾ) ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಲಿಪಿಕಾ ನೌಕರರ ಸೇವೆಗಳು ಸೇರಿದಂತೆ ( ನೇಮಕಾತಿ) ನಿಯಮ 2004 ಮತ್ತು ಅದರ ತಿದ್ದುಪಡಿ ನಿಯಮ 2009 ಕರ್ನಾಟಕ ರಾಜ್ಯ ಪೊಲೀಸ್ ಲಿಪಿಕ ಸೇವೆಗಳನ್ನು ಒಳಗೊಂಡ ( ನೇಮಕಾತಿ) ( ತಿದ್ದುಪಡಿ) ನಿಯಮಗಳು ಹಾಗೂ ಕರ್ನಾಟಕ ಸೇವೆಗಳು ( ಸಾಮಾನ್ಯ ನೇಮಕಾತಿ) ಕಾಲಕಾಲಕ್ಕೆ ಆಗುವ ತಿದ್ದುಪಡಿಗಳ ಅನುಸಾರ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 20-10-2022 ಬೆಳಗ್ಗೆ 10 ಗಂಟೆಯಿಂದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-11-2022 ಸಂಜೆ 06 ಗಂಟೆಯವರೆಗೆ
ಪೊಲೀಸ್ ಕಾನ್ ಸ್ಟೇಬಲ್ ( ಸಿವಿಲ್)( ಪುರುಷ ಮತ್ತು ಮಹಿಳಾ) ಮತ್ತು ( ತೃತೀಯ ಲಿಂಗ ಪುರುಷ ಮತ್ತು ಮಹಿಳಾ) ಹಾಗೂ ಸೇವಾನಿರತ ಬ್ಯಾಕ್ ಲಾಗ್ ( ಮಿಕ್ಕುಳಿದ ವೃಂದ) ಖಾಲಿ ಹುದ್ದೆಗಳ ವಿವರ:
ಪೊಲೀಸ್ ಕಾನ್ ಸ್ಟೇಬಲ್ ( ಸಿವಿಲ್)(ಪುರುಷ) – 683
ಪೊಲೀಸ್ ಕಾನ್ ಸ್ಟೇಬಲ್ ( ಸಿವಿಲ್)(ಮಹಿಳಾ) – 229
ಪೊಲೀಸ್ ಕಾನ್ ಸ್ಟೇಬಲ್ ( ಸಿವಿಲ್)(ಪುರುಷ) ( ತೃತೀಯ ಲಿಂಗ) – 22
ಪೊಲೀಸ್ ಕಾನ್ ಸ್ಟೇಬಲ್ ( ಸಿವಿಲ್)(ಮಹಿಳಾ) ( ತೃತೀಯ ಲಿಂಗ) – 10
ಸೇವಾನಿರತ ಪೊಲೀಸ್ ಕಾನ್ ಸ್ಟೇಬಲ್ ( ಸಿವಿಲ್) ( ಪುರುಷ) – 134
ಸೇವಾನಿರತ ಪೊಲೀಸ್ ಕಾನ್ ಸ್ಟೇಬಲ್ ( ಸಿವಿಲ್) ( ಮಹಿಳಾ) – 57
ಸೇವಾನಿರತ ಪೊಲೀಸ್ ಕಾನ್ ಸ್ಟೇಬಲ್ ( ಸಿವಿಲ್)(ಪುರುಷ) ( ತೃತೀಯ ಲಿಂಗ) – 1
ಸೇವಾನಿರತ ಪೊಲೀಸ್ ಕಾನ್ ಸ್ಟೇಬಲ್ ( ಸಿವಿಲ್)(ಮಹಿಳೆ) ( ತೃತೀಯ ಲಿಂಗ) – 1
ಒಟ್ಟು ಹುದ್ದೆಗಳು : 1137
ಅರ್ಜಿ ಶುಲ್ಕ : ಸಾಮಾನ್ಯ ಅರ್ಹತೆ, ಪ್ರವರ್ಗ 2(ಎ), 2 (ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ. 400
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.200/-
ವಿದ್ಯಾರ್ಹತೆ : ಪೊಲೀಸ್ ಕಾನ್ಸ್ಟೇಬಲ್ ನಾಗರಿಕ ( ಪುರುಷ ಮತ್ತು ಮಹಿಳಾ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿ.ಯು.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ : ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 1,2022ಕ್ಕೆ ಅಭ್ಯರ್ಥಿಗೆ ಕನಿಷ್ಟ 19 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.
- ಪುರುಷ ಮತ್ತು ಮಹಿಳಾ ಮತ್ತು ತೃತೀಯ ಲಿಂಗ (ಪುರುಷ ಮತ್ತು ಮಹಿಳಾ) ಅಭ್ಯರ್ಥಿಗಳಿಗೆ
i) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು,
ii) ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು,
iii) ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು
ವೇತನ ಶ್ರೇಣಿ:
ರೂ. 23500-550-24600-600-
27000-650-29600-750-
32600-850-36000-950-
39800-1100-16400-1250- 47650
ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಆನ್ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ, ಅಂಚೆಮೂಲಕ, ಪ್ರತ್ಯೇಕವಾಗಿ ಸಲ್ಲಿಸುವಂತಿಲ್ಲ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.