Good news | PM Kisan ಯೋಜನೆ ಅಡಿಯಲ್ಲಿ ಸಿಗುವ ಹಣ ಮತ್ತಷ್ಟು ಹೆಚ್ಚಳ ?!

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಸಿಗುತ್ತಿರುವ ಹಣಕಾಸು ನೆರವು ಹೆಚ್ಚಳ ಆಗಲಿದೆ ಎಂಬ ಮಹತ್ವದ ಮಾಹಿತಿ ಲಭ್ಯ ಆಗಿದೆ.

ಪಿಎಂ ಕಿಸಾನ್ ಯೋಜನೆ ಅಡಿ ಸಿಗುವ ಹಣ ಹೆಚ್ಚಳವಾಗಬೇಕು ಹಾಗೂ ಕೃಷಿ ಉಪಕರಣಗಳು ಮತ್ತು ರಸಗೊಬ್ಬರಕ್ಕೆ ಜಿಎಸ್‌ಟಿ ವಿನಾಯಿತಿ ನೀಡಬೇಕು ಎಂಬ ಎರಡು ಆಗ್ರಹ ಕೇಳಿ ಬರುತ್ತಿದೆ. ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ 19 ರಂದು ಬೃಹತ್ ಕ್ಯಾಲಿ ನಡೆಸುವುದಾಗಿ ಆರೆಸ್ಸೆಸ್ ಬೆಂಬಲಿತ ಭಾರತೀಯ ಕಿಸಾನ್ ಸಂಘ (ಬಿಕೆಎಸ್ ) ಪ್ರಕಟಿಸಿದೆ.

ದೇಶದ ರೈತರಿಗೆ ಹಣಕಾಸಿನ ನೆರವು ಆಗಲೆಂದು ಪಿ ಎಂ ಕಿಸಾನ್ ಯೋಜನೆ ಜಾರಿಯಲ್ಲಿದ್ದು, ಸಮಾನ ಮೂರು ಕಂತುಗಳಲ್ಲಿ ರೈತರಿಗೆ 6,000 ರೂಪಾಯಿ ಹಣವನ್ನು ನೀಡಲಾಗುತ್ತಿದೆ. ಲೋಕಸಭಾ ಚುನಾವಣೆಗೆ ಕೆಲವೇ ವಾರಗಳ ಮೊದಲು ಅಂದರೆ 2019ರ ಫೆಬ್ರವರಿ 24ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಪಿಎಂ ಕಿಸಾನ್ ಯೋಜನೆಯನ್ನು ಉದ್ಘಾಟನೆ ಮಾಡಿದ್ದರು.

2019 ರ ಅಸೆಂಬ್ಲಿ ಚುನಾವಣೆಗೂ ಮುನ್ನ ಜಾರಿಗೆ ತಂದ ಕೇವಲ ಐದು ವಾರಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ರೈತರನ್ನು ಈ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲಾಗಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಮತ್ತು ಅಧಿಕಾರಿಗಳು ಈ ಯೋಜನೆಯನ್ನು ಮರೆತರು. ಆನಂತರ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ರೈತರೂ ಕೂಡ ಆಸಕ್ತಿ ತೋರಲಿಲ್ಲ. ಜತೆಗೆ ಅಧಿಕಾರಿಗಳೂ ಶ್ರದ್ಧೆವಹಿಸಲಿಲ್ಲ. ನಂತರ
ಹಲವು ಅನರ್ಹರು ನಕಲಿ ದಾಖಲೆ ಸೃಷ್ಠಿಸಿ ಯೋಜನೆಯ ಲಾಭ ಪಡೆದರು. ನಮ್ಮ ಕರ್ಣಾಟಕದಲ್ಲಿಯೇ 2.40 ಲಕ್ಷ ನಕಲಿ ರೈತರ ಖಾತೆಗಳಿಗೆ ಸಹಾಯಧನ ವರ್ಗಾವಣೆಯಾಗಿದೆ. ಸದ್ಯ ಕರ್ನಾಟಕ, ತಮಿಳುನಾಡು, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ತಮಿಳುನಾಡಲ್ಲಿ ಎಂಟೂವರೆ ಲಕ್ಷ ಅನರ್ಹರ ಖಾತೆಗಳಿಗೆ ಸಹಾಯಧನ ಜಮೆಯಾಗಿದ್ದು, ಅತಿಹೆಚ್ಚು ವಂಚನೆ ಪ್ರಕರಣಗಳು ದಾಖಲಾದ ರಾಜ್ಯವಾಗಿದೆ.

ನಡೆಯುತ್ತಿರುವ ಎಲ್ಲಾ ಮೋಸಗಳ ಕಾರಣದಿಂದಾಗಿ ಈ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು ಮತ್ತು ನಿಜವಾದ ರೈತರಿಗೆ ಮಾತ್ರ ಯೋಜನೆಯ ಹಣ ದೊರೆಯುವಂತೆ ಮಾಡಲು ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿದೆ.

ಏತನ್ಮಧ್ಯೆ ಸಮಾನ ರೈತರಿಗೆ 6,000 ರೂಪಾಯಿ ಹಣವನ್ನು ನೀಡುವ ಪಿ ಎಂ ಕಿಸಾನ್ ಯೋಜನೆಯ ಹಣಕಾಸು ನೆರವು ಹೆಚ್ಚಳವಾಗಬೇಕು ಎಂಬ ಆಗ್ರಹ ಕೇಳಿ ಬರುತ್ತಿದ್ದು, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಂಗ ಸಂಸ್ಥೆಯಾಗಿರುವ ಭಾರತೀಯ ಕಿಸಾನ್ ಸಂಘದಿಂದಲೇ ಈ ಸಂಬಂಧ ಬೃಹತ್ ಪ್ರತಿಭಟನೆ ನಡೆಸುವ ಮಾತು ಕೇಳಿ ಬಂದಿದೆ. ಆದುದರಿಂದ ಹೆಚ್ಚು ಕಮ್ಮಿ ಹಣದ ಮೊತ್ತ ಜಾಸ್ತಿ ಆಗುವ ಸಂಭವನೀಯತೆ ಹೆಚ್ಚು.

ಕಳೆದ ಅಕ್ಟೋಬರ್ 8 ಮತ್ತು 9ರಂದು ನಡೆದ ಭಾರತೀಯ ಕಿಸಾನ್ ಸಂಘದ (ಬಿಕೆಎಸ್) ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರೈತರ ಆರ್ಥಿಕ ಸ್ಥಿರತೆಗಾಗಿ ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಲಾಗಿದೆ. ಕೃಷಿ ಉಪಕರಣಗಳು ಮತ್ತು ರಸಗೊಬ್ಬರಗಳ ಮೇಲಿನ ಜಿಎಸ್‌ಟಿ ತೆಗೆದು ಹಾಕುವಂತೆ ಒತ್ತಾಯಿಸಿ ಬೃಹತ್ ಕಿಸಾನ್ ಘರ್ಜನಾ ಕ್ಯಾಲಿ ನಡೆಸಲಾಗುವುದು ಎಂದು ಬಿಕೆಎಸ್ ಅಖಿಲ ಭಾರತ ಕಾರ್ಯದರ್ಶಿ ಕೆ. ಸಾಯಿ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಡಿ.19ರಂದು ನಡೆಯಲಿರುವ ರ್ಯಾಲಿಗೆ ದೇಶದ ಎಲ್ಲೆಡೆಯಿಂದ ರೈತರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುವ ಬಗ್ಗೆ ಮಾತನಾಡಿದರೆ ಸಾಲದು, ಇದಕ್ಕಾಗಿ ಅಗತ್ಯ ಕ್ರಮಗಳನ್ನು ಖಾತ್ರಿಪಡಿಸುವಂತೆಯೂ ಒತ್ತಾಯಿಸಲಾಗುವುದು ಎಂದು ಬಿಕೆಎಸ್ ಪ್ರಧಾನ ಕಾರ್ಯದರ್ಶಿ ಮೋಹಿನಿ ಮೋಹನ್ ಮಿಶ್ರಾ ತಿಳಿಸಿದ್ದಾರೆ. ಒಟ್ಟಾರೆ ರೈತರಿಗೆ ಒಳ್ಳೆಯ ಸುದ್ದಿ ಕಾದಿದೆ.

Leave A Reply

Your email address will not be published.