Canara Bank : ಕೆನರಾ ಬ್ಯಾಂಕ್ ನಿಂದ ಗ್ರಾಹಕರಿಗೆ ಗುಡ್ ನ್ಯೂಸ್
ಕೆನರಾ ಬ್ಯಾಂಕ್(Canara Bank) ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೆನರಾ ಬ್ಯಾಂಕ್ ವಿಶೇಷ ನಿಶ್ಚಿತ ಠೇವಣಿಯನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಹೌದು, 666 ದಿನಗಳ ಅವಧಿಗೆ ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು ಪರಿಚಯಿಸಿದ್ದು, ಅದು ಶೇ.7.50 ಬಡ್ಡಿದರವನ್ನು ಒದಗಿಸುತ್ತದೆ ಎಂಬ ಮಾಹಿತಿಯನ್ನು ಕೆನರಾ ಬ್ಯಾಂಕ್ ನೀಡಿದೆ.
ಕೆನರಾ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಈ ಹೊಸ 666 ದಿನಗಳ ಅವಧಿಯ ಯೋಜನೆಯನ್ನು ಪ್ರಾರಂಭಿಸುವ ಕುರಿತು ತಿಳಿಸುವ ಇನ್ಫೋಗ್ರಾಫಿಕ್ ಅನ್ನು ಹಂಚಿಕೊಂಡಿದೆ. ಅದರಲ್ಲಿ ಈಗ ನಿಮ್ಮ ಹೂಡಿಕೆಯ ಮೇಲೆ ಗರಿಷ್ಠ ಆದಾಯವನ್ನು ಪಡೆಯಿರಿ! 666 ದಿನಗಳವರೆಗೆ ಹೂಡಿಕೆ ಮಾಡುವ ಮೂಲಕ 7.50% ಬಡ್ಡಿಯನ್ನು ನೀಡುವ ಕೆನರಾ ವಿಶೇಷ ಠೇವಣಿ ಯೋಜನೆಯನ್ನು ಪ್ರಸ್ತುತಪಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದೆ.
ಹೌದು, ಈ ಯೋಜನೆಯ ಅಡಿಯಲ್ಲಿ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 7% ಬಡ್ಡಿದರವನ್ನು ನೀಡುತ್ತಿದೆ.
ಹಿರಿಯ ನಾಗರಿಕರು ಮಾತ್ರ ಈ ಸ್ಥಿರ ಠೇವಣಿ ಯೋಜನೆಯಲ್ಲಿ 7.5% ಬಡ್ಡಿಯನ್ನು ಪಡೆಯುತ್ತಾರೆ. ಈ ವಿಶೇಷ ಅವಧಿಯ ಠೇವಣಿ ಯೋಜನೆಯು 2 ಕೋಟಿ ರೂ.ಗಿಂತ ಕಡಿಮೆ ಮೊತ್ತವಾಗಿದೆ.
ಕೆನರಾ ಬ್ಯಾಂಕ್ ಗೃಹ ಸಾಲ ಮತ್ತು ಕಾರು ಸಾಲಗಳ ಮೇಲೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತಿದೆ. ಇದಲ್ಲದೆ, ಬ್ಯಾಂಕ್ ದಾಖಲಾತಿ ಮತ್ತು ಸಂಸ್ಕರಣಾ ಶುಲ್ಕಗಳ ಮೇಲೆ ಸಂಪೂರ್ಣ ಮನ್ನಾವನ್ನು ನೀಡುತ್ತಿದೆ. ಗ್ರಾಹಕರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ವೈಯಕ್ತಿಕ ಸಾಲಗಳ ತ್ವರಿತ ಅನುಮೋದನೆಯನ್ನು ಪಡೆಯಬಹುದು. ಕಡಿಮೆ EMI, ಆಕರ್ಷಕ ಬಡ್ಡಿದರಗಳು ಈ ಯೋಜನೆಯ ಪ್ರಯೋಜನಗಳಾಗಿವೆ.