ವಾಹನ ಮಾಲೀಕರಿಗೆ ಸಿಹಿ ಸುದ್ದಿ ಮತ್ತು ಶಾಕಿಂಗ್ ಸುದ್ದಿ | ಸಾಮಾನ್ಯ ವೆಹಿಕಲ್ ಗಳಿಗೂ BH ಸಿರೀಸ್ ನೋಂದಣಿಗೆ ಅವಕಾಶ
ಸಾಮಾನ್ಯ ವಾಹನಕ್ಕೂ ಬಿಎಚ್ ಸೀರೀಸ್ ನಲ್ಲಿ ವಾಹನ ನೋಂದಣಿ ಮಾಡಿಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಶುಕ್ರವಾರ ಈ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ. ಭಾರತ್ ಸೀರೀಸ್(BH) ಅಡಿಯಲ್ಲಿ ನೋಂದಣಿ ಮಾಡಿಕೊಡಲು ಅವಕಾಶ ಕಲ್ಪಿಸಲು ಮುಂದಾಗಿದೆ. ಪ್ರಸ್ತುತ ಹೊಸ ವಾಹನಗಳ ನೋಂದಣಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಬಿಹೆಚ್ ( BH) ನೋಂದಣಿ ನಿಯಮದಲ್ಲಿ ತಿದ್ದುಪಡಿ ತರಲು ಕರಡು ಅಧಿಸೂಚನೆ ಹೊರಡಿಸಲಾಗಿದೆ.
ಈ ಮೊದಲು ದೇಶದಲ್ಲಿ ವರ್ಗಾವಣೆ ಪಡೆದುಕೊಳ್ಳುತ್ತಿದ್ದ ಕೇಂದ್ರ ಸರ್ಕಾರದ ನೌಕರರಿಗೆ ಮಾತ್ರ ಬಿಹೆಚ್ ಸೀರೀಸ್ ಅಡಿಯಲ್ಲಿ ನೋಂದಣಿಗೆ ಅವಕಾಶ ನೀಡಲಾಗುತ್ತಿತ್ತು. ಈಗ ಸಾಮಾನ್ಯ ವಾಹನಗಳಿಗೂ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.
ಇಷ್ಟು ಮಾತ್ರವಲ್ಲದೇ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎಂದೇ ಹೇಳಬಹುದು. ಈಗ ಮತ್ತೊಮ್ಮೆ ಸಿಎನ್‌ಜಿ (cng) ಬೆಲೆ ಏರಿಕೆ ಮಾಡಲಾಗಿದೆ.
ಇಂದ್ರಪ್ರಸ್ತ ಗ್ಯಾಸ್ ಲಿಮಿಟೆಡ್ ದೆಹಲಿಯಲ್ಲಿ ಕಂಪ್ರೆಸ್ಟ್ ನ್ಯಾಚುರಲ್ ಗ್ಯಾಸ್ ದರವನ್ನು ಪ್ರತಿ ಕೆಜಿಗೆ 3 ರೂ. ಹೆಚ್ಚಿಸಿದೆ. ಈ ಮೂಲಕ ದೆಹಲಿಯಲ್ಲಿ ಒಂದು ಕೆಜಿ ಸಿಎನ್ ಜಿ ಬೆಲೆ 78.61 ರೂ.ಗೆ ಏರಿಕೆಯಾಗಿದೆ.
ನಿಮ್ಮ ನಗರದ ದರಗಳೇಷ್ಟು?
ದೆಹಲಿಯಲ್ಲಿ ಸಿಎನ್ ಜಿ ಬೆಲೆ ಪ್ರತಿ ಕೆಜಿಗೆ 75.61 ರೂ.ಗಳಿಂದ 78.61 ರೂ.ಗೆ ಏರಿದೆ.
ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್ನಲ್ಲಿ ಸಿಎನ್ಜಿ ಬೆಲೆ ಪ್ರತಿ ಕೆಜಿಗೆ 78.17 ರೂ.ಗಳಿಂದ 81.17 ರೂ.ಗೆ ಏರಿದೆ.
ಗುರುಗ್ರಾಮದಲ್ಲಿ, ಸಿಎನ್ಜಿಯ ಬೆಲೆ ಪ್ರತಿ ಕೆಜಿಗೆ 83.94 ರೂ.ಗಳಿಂದ 86.94 ರೂ.ಗೆ ಏರಿದೆ.
ರೆವಾರಿಯಲ್ಲಿ, ಸಿಎನ್ಜಿಯ ಬೆಲೆ ಪ್ರತಿ ಕೆಜಿಗೆ 86.07 ರೂ.ಗಳಿಂದ 89.07 ರೂ.ಗೆ ಏರಿದೆ.
ಕರ್ನಾಲ್ ಮತ್ತು ಕೈಥಾಲ್ನಲ್ಲಿ, ಸಿಎನ್ಜಿಯ ಬೆಲೆ ಪ್ರತಿ ಕೆಜಿಗೆ 84.27 ರೂ.ಗಳಿಂದ 87.27 ರೂ.ಗೆ ಏರಿದೆ.
ಮುಜಫ್ಫರ್ನಗರದಲ್ಲಿ, ಸಿಎನ್ಜಿಯ ಬೆಲೆ ಪ್ರತಿ ಕೆಜಿಗೆ 82.84 ರೂ.ಗಳಿಂದ 85.84 ರೂ.ಗೆ ಏರಿದೆ.
ಕಾನ್ಪುರದಲ್ಲಿ, ಸಿಎನ್ಜಿಯ ಬೆಲೆ ಪ್ರತಿ ಕೆಜಿಗೆ 87.40 ರೂ.ಗಳಿಂದ 89.81 ರೂ.ಗೆ ಏರಿದೆ.