ಮೂಕ ಪ್ರಾಣಿಯ ಮೇಲೆ ಸಹೋದರರಿಬ್ಬರ ಮೃಗೀಯ ವರ್ತನೆ | ದೊಣ್ಣೆಯಿಂದ ಮನಸೋಇಚ್ಛೆ ಥಳಿಸಿದ ಸಹೋದರರು | ಹಲ್ಲೆ ವೀಡಿಯೊ ವೈರಲ್
ತಂತ್ರಜ್ಞಾನದ ಮಾಯವೋ ಅಥವಾ ಮನಸ್ಥಿತಿಯೋ ಇತ್ತೀಚೆಗೆ ಜನರೆಲ್ಲ ಮಾನವೀಯತೆಯನ್ನೇ (Humanity) ಮರೆತಿದ್ದಾರೆ ಎಂದು ಅನಿಸುತ್ತದೆ. ಹೌದು. ಅದರಲ್ಲೂ ಈ ಮೂಕ ಪ್ರಾಣಿಗಳ ಮೇಲೆ ಈ ಮಾನವನಿಗೆ ಅದ್ಯಾಕೆ ಈ ಪರಿಯ ಸಿಟ್ಟು ಎಂದು ಗೊತ್ತಾಗುವುದೇ ಇಲ್ಲ. ಹೌದು, ಈ ಮೂಕ ಪ್ರಾಣಿಯ ಮೇಲೆ ಅತಿರೇಕವಾಗಿ ವರ್ತಿಸುವ ಘಟನೆಗಳು ಇತ್ತೀಚೆಗೆ ನಡೆಯುತ್ತಲೇ ಇದೆ. ರಸ್ತೆಯಲ್ಲಿ ಮಲಗಿದ್ದ ನಾಯಿ (Dog) ಮೇಲೆ ಕಾರು ಹರಿಸೋದು, ಬೀದಿ ನಾಯಿಗೆ (Street Dog) ವಿಷ ಹಾಕಿ ಕೊಲ್ಲುವ ಜನರು (Pepole) ಕೂಡ ನಮ್ಮ ನಡುವೆ ಇದ್ದಾರೆ ಎಂದರೆ ನಂಬಲು ಅಸಾಧ್ಯವಾಗುತ್ತಿದೆ.
ಇದಕ್ಕೆ ಹೊಸ ಸೇರ್ಪಡೆಯಾಗಿ ಇತ್ತೀಚೆಗೆ ಯುವಕನೋರ್ವ ನಾಯಿಯನ್ನು ಮನಸೋ ಇಚ್ಛೆ ಥಳಿಸಿರೋ ವಿಡಿಯೋ ವೈರಲ್ (Video Viral) ಆಗಿದೆ
ಈ ಯುವಕರು ನಾಯಿಗೆ ಹೊಡೆದಿರೋ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ. ತಾನು ಸಾಕಿದ ನಾಯಿಯನ್ನು ಪಕ್ಕದ ಮನೆಯ ನಾಯಿ ಕಚ್ಚಿದೆ ಎಂದು ಕೋಪಗೊಂಡ ಯುವಕ ನಾಯಿಯನ್ನು ಎಳೆದು ತಂದು ಕಟ್ಟಿ ಹಾಕಿ, ದೊಣ್ಣೆಗಳಿಂದ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾನೆ. ಇದಕ್ಕೆ ಆತನ ಸಹೋದರ ಸಹ ಸೇರಿದ್ದಾನೆ.
ಕೆ.ಆರ್ ಪುರಂನ ಭಟ್ಟರಹಳ್ಳಿಯ ಮಂಜುನಾಥ್ ಲೇಔಟ್‌ನ ಲೋಹಿತ್ ಕುಮಾರ್ ಹಾಗೂ ಅವನ ಸಹೋದರ ಸೇರಿ ಕೊಂಡು ನಾಯಿ ಮೇಲೆ ಹಲ್ಲೆ ನಡೆಸಿದ್ದಾರೆ. ನಾಯಿ ಮಾಲೀಕ ಗದ್ದಿಗಪ್ಪ ಅವರು ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಲೋಹಿತ್ ಕುಮಾರ್‌ನನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಸಹೋದರರಿಬ್ಬರ ಮೃಗೀಯ ವರ್ತನೆ ಕಂಡು ಸ್ಥಳೀಯ ಜನರೇ ಬೆಚ್ಚಿಬಿದ್ದಿದ್ದಾರೆ. ಕೆ.ಆರ್ ಪುರಂನ ಭಟ್ಟರಹಳ್ಳಿಯ ಮಂಜುನಾಥ್ ಲೇಔಟ್ ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಗದ್ದುಗಪ್ಪ ಎಂಬುವರಿಗೆ ಸೇರಿದ ನಾಯಿಗೆ ಹಲ್ಲೆ ಮಾಡಿ ಯುವಕರು ವಿಕೃತ ಮೆರೆದಿದ್ದಾರೆ.