ಸಂಭೋಗ ಮಾಡಲು ಒಳ್ಳೆಯ ಟೈಮ್ ಎಂಬುದು ಇದೆಯಾ? ಆಯುರ್ವೇದ ಏನು ಹೇಳುತ್ತೆ? ಇಲ್ಲಿದೆ ಉತ್ತರ
ದೈಹಿಕ ಸಂಬಂಧದ ಬಗ್ಗೆ ಯಾರಾದರೂ ಮುಕ್ತವಾಗಿ ಮಾತನಾಡಿದರೆ ನಿಜಕ್ಕೂ ನಾಚಿ ನೀರಾಗುತ್ತಾರೆ. ಏಕೆಂದರೆ ಭಾರತದಲ್ಲಿ ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತನಾಡುವ ಅವಕಾಶ ಇಲ್ಲ. ಹಾಗಾಗಿ ನಮ್ಮ ದೇಶದಲ್ಲಿ ಸೆಕ್ಸ್ ಎಜುಕೇಷನ್ ಗೆ ಹೆಚ್ಚು ಆದ್ಯತೆ ಇಲ್ಲ. ಆದರೆ ಇತ್ತೀಚಿನ ದಿನದಲ್ಲಿ ಜನರಿಗೆ ಲೈಂಗಿಕ ಶಿಕ್ಷಣ ನೀಡುವುದು ಅನಿವಾರ್ಯವಾಗಿದೆ. ಲೈಂಗಿಕ ಸಂಬಂಧ ಹಾಗೂ ಅದರ ಲಾಭ ಸೇರಿದಂತೆ ಅನೇಕ ವಿಷಯಗಳನ್ನು ಜನರು ತಿಳಿಯುವುದು ಅನಿವಾರ್ಯ. ಆದರೆ ದೈಹಿಕ ಸಂಬಂಧ ಬೆಳೆಸಲು ಒಂದು ಸಮಯವಿದೆ ಎಂದು ಆಯುರ್ವೇದ ಹೇಳುವುದರಿಂದ ಮನಸ್ಸಿಗೆ ಬಂದಾಗ ಸಂಬಂಧ ಬೆಳೆಸಿದರೆ ಅದರಿಂದ ಅನಾನುಕೂಲ ಹೆಚ್ಚೇ ಅನ್ನುತ್ತೆ ಆಯುರ್ವೇದ.
ಸಂತಾನೋತ್ಪತ್ತಿ ಒಂದಕ್ಕೆನೇ ದೈಹಿಕ ಸಂಬಂಧ ಎಂಬುದಕ್ಕೆ ಆಯುರ್ವೇದ (Ayurveda) ಒಪ್ಪುವುದಿಲ್ಲ. ನಮ್ಮ ಜೀವನದ 4 ಪ್ರಮುಖ ಸ್ತಂಭಗಳಲ್ಲಿ ಇದು ಒಂದಾಗಿರುವುದರಿಂದ, ಅದರ ಪರಿಣಾಮ ನಮಗೆ ಸಿಗಬೇಕೆಂದರೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.
ಬೆಳಗ್ಗೆ ಮತ್ತು ಹಗಲಿನ ಬದಲು ರಾತ್ರಿಯ ಸಮಯ ಲೈಂಗಿಕತೆಗೆ ಸೂಕ್ತ ಎಂಬುವುದು ಆಯುರ್ವೇದ ಹೇಳುತ್ತದೆ. ಸಂಭೋಗ ಬೆಳೆಸುವ ಬಯಕೆ ಬೇಸಿಗೆ ಅಥವಾ ಮಳೆಗಾಲಕ್ಕಿಂತ ಚಳಿಗಾಲದಲ್ಲಿ ಹೆಚ್ಚು. ಆಯುರ್ವೇದದ ಪ್ರಕಾರ, ಈ ಲೈಂಗಿಕ ಸಂಬಂಧ ಬೆಳೆಸಲು ಸಂಜೆ 6 ರಿಂದ ರಾತ್ರಿ 10 ರವರೆಗೆ ಒಳ್ಳೆಯ ಸಮಯ ಎಂದು ಹೇಳುತ್ತದೆ. ದೇಹವು ಕ್ಷೀಣಿಸುವ ಸಮಯ ಇದಾಗಿರುವುದರಿಂದ ಲೈಂಗಿಕತೆಯ ಪರಾಕಾಷ್ಠೆ (Climax) ನಂತರ ಅನೇಕರು ನಿದ್ರೆಗೆ ಜಾರುತ್ತಾರೆ. ಪರಾಕಾಷ್ಠೆ ದೇಹದಲ್ಲಿ ಕಫ ಉಂಟು ಮಾಡುತ್ತದೆ. ಇದು ಆಲಸ್ಯ ಮತ್ತು ಆಯಾಸಕ್ಕೆ ಕಾರಣವಾಗುತ್ತದೆ. ಏಕೆಂದರೆ ಬೆಳಗಿನ ಜಾವ ಸಂಬಂಧ ಬೆಳೆಸಿದ್ರೆ ಕಫ ಉತ್ಪತ್ತಿಯಾಗುತ್ತದೆ. ಇದು ಆಯಾಸ, ಆಲಸ್ಯವನ್ನು ಹೆಚ್ಚು ಮಾಡುವ ಸಾಧ್ಯತೆಯಿರುವುದರಿಂದ ಲೈಂಗಿಕತೆಗೆ ಸೂಕ್ತಸಮಯ ಇದಲ್ಲ ಎಂದು ಹೇಳಲಾಗುತ್ತದೆ ಆಯುರ್ವೇದದ ಪ್ರಕಾರ.
ಇನ್ನು ಲೈಂಗಿಕ ಜೀವನವನ್ನು ನಾಲ್ಕು ಋತುಗಳು ನಿಯಂತ್ರಿಸುತ್ತವೆ ಎಂದು ಆಯುರ್ವೇದ ಹೇಳುತ್ತದೆ. ಅದು ಯಾವ ರೀತಿಯೆಂದರೆ, ಮಾನ್ಸೂನ್ ಮತ್ತು ಬೇಸಿಗೆಯಲ್ಲಿ ದೇಹದ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಆ ಸಮಯದಲ್ಲಿ ಹದಿನೈದು ದಿನಕ್ಕೆ ಒಮ್ಮೆ ಸಂಬಂಧವನ್ನು ಬೆಳೆಸುವುದು ಉತ್ತಮ. ವಸಂತ ಋತುವಿನಲ್ಲಿ ಸಾಮರ್ಥ್ಯವು ಮಧ್ಯಮವಾಗಿರುವುದರಿಂದ, ಈ ಸಮಯದಲ್ಲಿ 3 ದಿನಗಳಿಗೊಮ್ಮೆ ಸಂಬಂಧ ಬೆಳೆಸುವುದು ಉತ್ತಮ. ಚಳಿಗಾಲದಲ್ಲಿ ದೇಹದ ಶಕ್ತಿಯು ಉತ್ತುಂಗದಲ್ಲಿರುತ್ತದೆ. ಆದ್ದರಿಂದ ಪ್ರತಿ ದಿನ ಸಂಬಂಧ ಬೆಳೆಸಬಹುದು ಎಂದು ಈ ರೀತಿಯಾಗಿ ಆಯುರ್ವೇದ ವಿಂಗಡಿಸಿದೆ.
ದೈಹಿಕ ಸಂಬಂಧಕ್ಕೆ ಉತ್ತಮ ವಯಸ್ಸು 21 ರಿಂದ 60 ವರ್ಷಗಳು. ಈ ವೇಳೆ ನಮ್ಮ ದೇಹವು ಶಕ್ತಿಯುತವಾಗಿರುತ್ತದೆ. ಇದಕ್ಕಿಂತ ಮೊದಲು ಅಥವಾ ನಂತರ ಲೈಂಗಿಕ ಚಟುವಟಿಕೆಯಲ್ಲಿ ಪಾಲ್ಗೊಂಡರೆ ವಿವಿಧ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಮತ್ತು ಹೊಟ್ಟೆ ತುಂಬಿದ ತಕ್ಷಣ ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು ಎಂದು ಆಯುರ್ವೇದ ಹೇಳುತ್ತದೆ. ರೋಗನಿರೋಧಕ ಶಕ್ತಿ (Immunity Power), ಜೀರ್ಣಕ್ರಿಯೆ, ದೈಹಿಕ ಶಕ್ತಿ (Physical Energy), ಚರ್ಮದ ಆರೋಗ್ಯ (Skin Health), ಆಧ್ಯಾತ್ಮಿಕ ಒಲವು (Spiritual Interest), ನಿದ್ರೆ ಮತ್ತು ಮನಸ್ಥಿತಿಯ ಇದು ಮನುಷ್ಯನ ಮೇಲೆ ಬಹಳ ಪರಿಣಾಮ ಬೀರುತ್ತದೆ. ಲೈಂಗಿಕ ಕ್ರಿಯೆ ಹೆಚ್ಚಾದರೆ ಹಾನಿಯುಂಟು ಮಾಡುವ ಸಾಧ್ಯತೆ ಹೆಚ್ಚು. ಇದರಿಂದ ಅನಾರೋಗ್ಯ ಕಾಡುವ ಸಾಧ್ಯತೆಯಿರುತ್ತದೆ.