ನೃತ್ಯ ಮಾಡುತ್ತಲೇ ಕುಸಿದ ಮಗ ಮಗನ ಅನಿರೀಕ್ಷಿತ ಸಾವಿನಿಂದ ತಂದೆ ಕೂಡಾ ಸ್ಥಳದಲ್ಲೇ ನಿಧನ
ಗರ್ಭಾ ನೃತ್ಯದ ಸಂದರ್ಭದಲ್ಲಿ
ಎರಡು ಸಾವು ಸಂಭವಿಸಿದ ದಾರುಣ ಘಟನೆಯೊಂದು ನಡೆದಿದೆ. ಮುಂಬೈನ ವಿರಾರ್ ಗ್ಲೋಬಲ್ ಸಿಟಿ ಕಾಂಪ್ಲೆಕ್ಸ್‌ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಗರ್ಬಾ ನೃತ್ಯವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಶನಿವಾರ ಹಾಗೂ ಭಾನುವಾರ ರಾತ್ರಿ ಗರ್ಬಾ ನೃತ್ಯ ನಡೆಸಲಾಗಿತ್ತು. ಈ ನೃತ್ಯದಲ್ಲಿ ರಾತ್ರಿ ಮನೀಶ್ ತನ್ನ ಕುಟುಂಬದ ಜೊತೆ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡಿದ್ದಾನೆ. ಆರಂಭದಲ್ಲಿ ನೃತ್ಯ ಮಾಡಿ ಕೆಲ ಹೊತ್ತು ವಿಶ್ರಾಂತಿ ಪಡೆದ ಮನೀಶ್, ಸುಧಾರಿಸಿಕೊಂಡು ಮತ್ತೆ ಗರ್ಬಾ ನೃತ್ಯ ಮಾಡಿದ್ದಾನೆ. ಮನೀಶ್ ಮಾತ್ರವಲ್ಲದೇ, ಆತನ ಕುಟುಂಬ ಕೂಡ ನೃತ್ಯದಲ್ಲಿ ಪಾಲ್ಗೊಂಡು ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆ.
ಆದರೆ ಏನಾಯಿತೋ ಏನೋ ನೃತ್ಯ ಮಾಡುತ್ತಿದ್ದ ಮನೀಶ್ ಅಸ್ವಸ್ಥನಾಗಿದ್ದಾನೆ. ಆದರೆ ಈತ ಅಸ್ವಸ್ಥಗೊಂಡಿದ್ದನ್ನು ಯಾರೂ ಗಮನಿಸಲಿಲ್ಲ. ಕೆಲ ಹೊತ್ತಲ್ಲೇ ತೀವ್ರ ಅಸ್ವಸ್ಥಗೊಂಡ ಮನೀಶ್ ನೃತ್ಯ ಮಾಡುತ್ತಿದಂತೆ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಮನೀಶ್ ನನ್ನು ಕಾಳಜಿ ವಹಿಸಿಕೊಂಡರೂ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ತಕ್ಷಣ ಮನೀಶ್ ತಂದೆ, ಮಗನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ವೈದ್ಯರು ತಪಾಸಣೆ ನಡೆಸಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಈ ವಿಷಯವನ್ನು ವೈದ್ಯರು ಮನೀಶ್ ನ ತಂದೆಯ ಬಳಿ ತಿಳಿಸಿದ್ದಾರೆ. ಕೂಡಲೇ ಈ ವಿಷಯವನ್ನು ಕೇಳಿ ಮನೀಶ್ ತಂದೆಯೂ ಕುಸಿದು ಬಿದ್ದು ಪ್ರಾಣ ಕಳೆದು ಕೊಂಡಿದ್ದಾರೆ. ಮಗನನ್ನು ಬದುಕಿಸಲು ಹಾತೊರೆದ ಮನೀಶ್ ನ ತಂದೆಯ ಜೀವವು ನಿಂತು ಹೋಗಿತ್ತು. ಒಂದೇ ಮನೆಯ ಎರಡು ಜೀವವು ಸಾವನ್ನಪ್ಪಿದ್ದು, ನಿಜಕ್ಕೂ ದುರದೃಷ್ಟಕರ ಎಂದೇ ಹೇಳಬಹುದು. ಮನೀಶ್ ಕುಟುಂಬಕ್ಕೆ ಸಂಭ್ರಮ ತರಬೇಕಿದ್ದ ನವರಾತ್ರಿಯು ದುಃಖವನ್ನೇ ಹೊತ್ತು ತಂದಿದ್ದು ನಿಜಕ್ಕೂ ಆಘಾತ.
ನವರಾತ್ರಿಯಲ್ಲಿ ಗರ್ಬಾ ನೃತ್ಯ ಮಾಡುತ್ತಲೇ ಕುಸಿದ ಬಿದ್ದ ಯುವಕ ಸಾವನಪ್ಪಿದ ವಿಡಿಯೋ ವೈರಲ್ ಆಗಿದ್ದು,
ಆಕಸ್ಮಿಕ ಸಾವು ಎಂದು ವಿರಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.