Kantara Movie: ಕಾಂತಾರ ಸಿನಿಮಾ ಮಾಡುವ ಮೊದಲು ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು| ಯಾಕಾಗಿ ಗೊತ್ತೇ?

Share the Article

ಕಾಂತಾರ..ಕಾಂತಾರ…ಎಲ್ಲಾ ಕಡೆ ಹವಾ ಎಬ್ಬಿಸಿದೆ‌ ಈ ಸಿನಿಮಾ. ಸಿನಿರಸಿಕರ ಬಾಯಲ್ಲಿ ಈಗ ಹರಿದಾಡುತ್ತಿರುವ ಸಿನಿಮಾ ಒಂದೇ ಅದುವೇ ಕಾಂತಾರ. ಈಗಾಗಲೇ ಕಾಂತಾರ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ. ಕರಾವಳಿಯ ಸೊಗಡು, ದೈವ ಭಕ್ತಿಯಿಂದಲೇ ತುಂಬಿ ತುಳುಕುತ್ತಿರುವ ಈ ಸಿನಮಾ ನಿಜಕ್ಕೂ ಸಿನಿ ರಸಿಕರ ಮನಸ್ಸನ್ನು ಗೆದ್ದಿದೆ ಎಂದೇ ಹೇಳಬಹುದು. ಆದರೆ ಈ ಸಿನಿಮಾ ಮಾಡುವ ಮೊದಲು ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಯಾಕೆ ಗೊತ್ತಾ?

ಕಾಂತಾರ ಸಿನಿಮಾ ಕರಾವಳಿಯ ದೈವ, ನಾಡು, ನುಡಿ ಆಚರಣೆಗಳನ್ನು ಒಳಗೊಂಡ ಸಿನಿಮಾ. ಇದರಲ್ಲಿ ಬಹಳಷ್ಟು ಗ್ರಾಮೀಣ ಸೊಗಡು, ಸಂಸ್ಕೃತಿಯ ಅಂಶಗಳು ಒಳಗೊಂಡಿದೆ. ಅಷ್ಟೇ ಅಲ್ಲ ಇದನ್ನು ಈ ಸಿನಿಮಾದಲ್ಲಿ ಅದ್ಧೂರಿಯಾಗಿ ತೋರಿಸಿದ್ದಾರೆ ಕೂಡಾ.

ದೈವಪಾತ್ರಿಯಾಗಿ ನಟಿಸುವ ಮೊದಲು ನಟ ರಿಷಬ್ ಮಾಡಿದ ತಯಾರಿಯೇನು ? ಇದರ ಬಗ್ಗೆ ಕುತೂಹಲ ಮಾಹಿತಿಯೊಂದು ಹೊರಬಿದ್ದಿದೆ. ಹೌದು ಅದೇನೆಂದು ತಿಳಿಯೋಣ.

ನಟ ರಿಷಬ್ ದೈವ ಪಾತ್ರಿಯಾಗಿ ನಟಿಸುವ ಮೊದಲು ಮಂಗಳೂರಿನ ಸುತ್ತಮುತ್ತಲಿನ ಕೆಲ ದೈವ ನರ್ತಕರು, ದೈವಾರಾಧಾನೆ ಮಾಡುವಂತ ಹಿರಿಯರು ಹಾಗೂ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಹೇಗೆ ನಡೆದುಕೊಳ್ಳಬೇಕು ಎಂದು ಕೇಳಿಕೊಂಡಿದ್ದರು.
ಅಂದ ಹಾಗೇ, ಈ ದೈವ ಪಾತ್ರಿಯನ್ನು ಒಂದು ಭಾಗದ ಜನರು ಮಾತ್ರ ಮಾಡುತ್ತಾರೆ. ಹಾಗಾಗಿ ನಾವು ಸಿನಿಮಾಗೆ ಮಾಡುವಾಗ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ಹಾಗಾಗಿ ಎಲ್ಲಾ ಕಡೆ ಭೇಟಿ ನೀಡಿದ್ದೆವು ಹಾಗೂ ಈ ಎಲ್ಲರ ಸಲಹೆ ಕೇಳಿದ್ದೆವು ಎಂದು ನಟ ರಿಷಬ್ ಅವರು ಹೇಳಿದ್ದಾರೆ.

ಅಷ್ಟು ಮಾತ್ರವಲ್ಲದೇ, ” ಸೀದಾ ಧರ್ಮಸ್ಥಳಕ್ಕೆ ಹೋಗು, ಮಂಜುನಾಥ ಸ್ವಾಮಿ ಹತ್ತಿರ ಪ್ರಾರ್ಥಿಸು, ಯಾಕೆಂದರೆ ಇದರ ಮೂಲ ಎಲ್ಲಾ ಅಲ್ಲೇ ಇರೋದು” ಎಂದು ದೈವನರ್ತಕರು ರಿಷಬ್ ಶೆಟ್ಟಿ ಅವರಿಗೆ ಸಲಹೆ ಕೊಟ್ಟಿದ್ದರು.

ಹಾಗೇನೇ, ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ವಿರೇಂದ್ರ ಹೆಗ್ಗಡೆಯವರ ಬಳಿ ಈ ರೀತಿ ಸಿನಿಮಾ ಮಾಡ್ತಾ ಇದ್ದೇನೆ, ಯಾವ ರೀತಿ ನಡೆದುಕೊಳ್ಳಬೇಕು ಎಂದು ಕೇಳಿದಾಗ ಅವರು ಏನೂ ಆಗಲ್ಲ, ಇಲ್ಲಿಗೆ ಬಂದಿದ್ದೀಯಲ್ಲ ಒಳ್ಳೆಯದಾಗುತ್ತೆ ಹೋಗು ಎಂದಿದ್ದರು ಎನ್ನುವುದನ್ನು ರಿಷಬ್ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

Leave A Reply