Central Bank Recruitment 2022: ಸೆಂಟ್ರಲ್ ಬ್ಯಾಂಕ್ ನಿಂದ 110 ಆಫೀಸರ್ ಪೋಸ್ಟ್ ಗಳ ನೇಮಕ | ಡಿಗ್ರಿ ಪಾಸಾದವರಿಗೆ ಆದ್ಯತೆ, ಆಸಕ್ತರು ಅರ್ಜಿ ಸಲ್ಲಿಸಿ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ವಿವಿಧ ಆಫೀಸರ್ ಪೋಸ್ಟ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿಗೆ ಅಕ್ಟೋಬರ್ 17 ರವರೆಗೆ ಅವಕಾಶ ನೀಡಲಾಗಿದೆ. ಹುದ್ದೆಗಳ ಕುರಿತು ಇನ್ನಷ್ಟು ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

 

ಹುದ್ದೆಗಳ ವಿವರ (ವಿಭಾಗವಾರು ಆಫೀಸರ್ ಹುದ್ದೆಗಳು)
ಐಟಿ : 36
ಎಕನಾಮಿಸ್ಟ್ : 3
ಡಾಟಾ ಸೈಂಟಿಸ್ಟ್ : 1
ರಿಸ್ಕ್ ಮ್ಯಾನೇಜರ್ : 21
ಐಟಿ ಎಸ್‌ಒಸಿ ಅನಾಲಿಸ್ಟ್: 1
ಐಟಿ ಸೆಕ್ಯೂರಿಟಿ ಅನಾಲಿಸ್ಟ್ : 1
ಟೆಕ್ನಿಕಲ್ ಆಫೀಸರ್ (ಕ್ರೆಡಿಟ್) 15
ಕ್ರೆಡಿಟ್ ಆಫೀಸರ್ : 8
ಡಾಟಾ ಇಂಜಿನಿಯರ್ -9
ಕಾನೂನು ಆಫೀಸರ್ : 5
ಸೆಕ್ಯೂರಿಟಿ : 5
ಫೈನಾನ್ಸಿಯಲ್ ಅನಾಲಿಸ್ಟ್: 8

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 28-09-2022 ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17-10-2022 ಸಂದರ್ಶನಕ್ಕೆ ಹಾಜರಾಗಲು ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಆರಂಭ ದಿನಾಂಕ: ನವೆಂಬರ್ 2022 ಸಂದರ್ಶನ ದಿನಾಂಕ : ಡಿಸೆಂಬರ್ 2022

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಪದವಿ, ಬಿಇ / ಬಿಎಸ್ಸಿ / ಎಂಎಸ್ಸಿ / ಇತರೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು.

ವಯೋಮಿತಿ : ಕನಿಷ್ಠ 20 ವರ್ಷದಿಂದ ಗರಿಷ್ಠ 50 ವರ್ಷದ ವರೆಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ : ಸಾಮಾನ್ಯ / ಒಬಿಸಿ / EWS ಅಭ್ಯರ್ಥಿಗಳಿಗೆ ರೂ.850.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ರೂ.175.
ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್‌ನೆಟ್‌ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್, ಮೊಬೈಲ್ ವ್ಯಾಲೆಟ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.