Bank Of Baroda : ಬ್ಯಾಂಕ್ ಆಫ್ ಬರೋಡದಿಂದ ನೇಮಕ ಅಧಿಸೂಚನೆ | ಒಟ್ಟು 346 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್‌ ಆಫ್‌ ಬರೋಡಾದಿಂದ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಹಾಕಿ.

 

ಹುದ್ದೆಗಳ ವಿವರ :
ಸೀನಿಯರ್ ರಿಲೇಶನ್‌ಶಿಪ್‌ ಮ್ಯಾನೇಜರ್ : 320 (ಬೆಂಗಳೂರಿನಲ್ಲಿ 32 ಹುದ್ದೆಗಳಿವೆ)
ಇ-ವೆಲ್ತ್‌ ರಿಲೇಶನ್‌ಶೀಪ್‌ ಮ್ಯಾನೇಜರ್ : 24
ಗ್ರೂಪ್‌ ಸೇಲ್ಸ್‌ ಹೆಡ್‌ : 1
ಆಪರೇಷನ್ಸ್‌ ಹೆಡ್‌-ವೆಲ್ತ್‌ : 1

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 30-09-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-10-2022

ವಿದ್ಯಾರ್ಹತೆ/ ಅನುಭವ : ಈ ಮೇಲಿನ ಹುದ್ದೆಗಳಿಗೆ ಪದವಿ ವಿದ್ಯಾರ್ಹತೆ ಜೊತೆಗೆ ಹುದ್ದೆಗಳಿಗೆ ಅನುಗುಣವಾಗಿ 2 / 1.5 / 10 / 10 ವರ್ಷಗಳ ಕಾರ್ಯಾನುಭವವನ್ನು ಹೊಂದಿರಬೇಕು.

ವಯೋಮಿತಿ : ಸೀನಿಯರ್ ರಿಲೇಶನ್‌ಶಿಪ್‌ ಮ್ಯಾನೇಜರ್ : ಕನಿಷ್ಠ 24 ವರ್ಷ ಆಗಿರಬೇಕು.
ಗರಿಷ್ಠ 40 ವರ್ಷ ಮೀರಿರಬಾರದು.
ಇ-ವೆಲ್ತ್‌ ರಿಲೇಶನ್‌ಶೀಪ್‌ ಮ್ಯಾನೇಜರ್ : ಕನಿಷ್ಠ 23 ವರ್ಷ ಆಗಿರಬೇಕು.
ಗರಿಷ್ಠ 35 ವರ್ಷ ಮೀರಿರಬಾರದು.
ಗ್ರೂಪ್‌ ಸೇಲ್ಸ್‌ ಹೆಡ್‌ : ಕನಿಷ್ಠ 31 ವರ್ಷ ಆಗಿರಬೇಕು. ಗರಿಷ್ಠ 45 ವರ್ಷ ಮೀರಿರಬಾರದು.
ಆಪರೇಷನ್ಸ್‌ ಹೆಡ್‌-ವೆಲ್ತ್‌ : ಕನಿಷ್ಠ 35 ವರ್ಷ ಆಗಿರಬೇಕು. ಗರಿಷ್ಠ 50 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ‌: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಂದರ್ಶನ / ಗುಂಪು ಚರ್ಚೆ / ಇತರೆ ಯಾವುದೇ ರೀತಿಯ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳು / ಒಬಿಸಿ / ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂ.600, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.100 ಶುಲ್ಕ ನಿಗದಿ ಮಾಡಿದೆ. ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

1 Comment
  1. najlepszy sklep says

    Wow, marvelous weblog layout! How long have you been running a blog for?
    you made blogging glance easy. The total look
    of your site is magnificent, as well as the content! You can see similar here ecommerce

Leave A Reply

Your email address will not be published.