Home latest Viral Video | ರಾಹುಲ್ ಗಾಂಧಿಯನ್ನು ಭೇಟಿಯಾಗಿ ಕಣ್ಣೀರು ಹಾಕಿದ ಹುಡುಗಿ, ಭಾರತ್ ಜೋಡೋ ಯಾತ್ರೆ...

Viral Video | ರಾಹುಲ್ ಗಾಂಧಿಯನ್ನು ಭೇಟಿಯಾಗಿ ಕಣ್ಣೀರು ಹಾಕಿದ ಹುಡುಗಿ, ಭಾರತ್ ಜೋಡೋ ಯಾತ್ರೆ ಸಂದರ್ಭ !

Hindu neighbor gifts plot of land

Hindu neighbour gifts land to Muslim journalist

ಕಾಂಗ್ರೆಸ್ ನ ‘ಭಾರತ್ ಜೋಡೋ ಯಾತ್ರೆ’ಯ ಸಂದರ್ಭ ರಾಹುಲ್ ಗಾಂಧಿಯನ್ನು ಭೇಟಿಯಾದ ನಂತರ ಹುಡುಗಿಯೊಬ್ಬಳು ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಕುಣಿದು ಕುಪ್ಪಳಿಸಿ ಕಣ್ಣೀರು ಹಾಕಿದ ವೀಡಿಯೋ ವೈರಲ್ ಆಗಿದೆ.

ಕಾಂಗ್ರೆಸ್ ಪಕ್ಷದ ನಾಯಕ ಶ್ರೀನಿವಾಸ್ ಬಿವಿ ಅವರು ಹಂಚಿಕೊಂಡ ಈ ವೀಡಿಯೊದಲ್ಲಿ, ಮೆರವಣಿಗೆಯ ಸಮಯದಲ್ಲಿ ಕಾಂಗ್ರೆಸ್ ನಾಯಕನನ್ನು ಈ ಹುಡುಗಿ ಸಂತೋಷದಿಂದ ಜಿಗಿಯುವುದು, ನಗುವುದು ಮತ್ತು ಅಳುವುದು ಕಂಡುಬಂದಿದೆ. ನಂತರ ಪ್ರಯಾಣದ ಹಾದಿಯಲ್ಲಿ ತನ್ನೊಂದಿಗೆ ಸೇರಿಕೊಳ್ಳುವಂತೆ ರಾಹುಲ್ ಗಾಂಧಿ ಆ ಹುಡುಗಿಯನ್ನು ಕೇಳಿಕೊಂಡರು. ಈ ವೇಳೆ ಅವರ ಜೊತೆಯಲ್ಲಿ ನಡೆಯುತ್ತಿದ್ದ ಇತರರು ಅವಳ ಉತ್ಸಾಹವನ್ನು ನೋಡಿ ಮುಗುಳ್ನಕ್ಕರು. ರಾಹುಲ್ ಗಾಂಧಿ ಅವಳನ್ನು ತಬ್ಬಿ ಸಮಾಧಾನಪಡಿಸಲು ಪ್ರಯತ್ನಿಸಿದರು.

ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ್‌ ಜೋಡೋ ಹ್ಯಾಂಡಲ್ ಕೂಡ ‘ಶೀರ್ಷಿಕೆ ಅಗತ್ಯವಿಲ್ಲ. ಪ್ರೀತಿ ಮಾತ್ರ’ ಎಂದು ವೀಡಿಯೊವನ್ನು ಟ್ವೀಟ್ ಮಾಡಿದೆ.

ಇಡೀ ದೇಶ ಸುತ್ತುವ 3,570 ಕಿಮೀ ವ್ಯಾಪ್ತಿಯ ಮತ್ತು 150 ದಿನಗಳ ಸುದೀರ್ಘ ಪಾದಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿದ್ದು, ಇದು ಅಂತಿಮವಾಗಿ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.
ಸೆಪ್ಟೆಂಬರ್ 10 ರಂದು ಕೇರಳ ಪ್ರವೇಶಿಸಿದ ಯಾತ್ರೆ ಅಕ್ಟೋಬರ್ 1 ರಂದು ಕರ್ನಾಟಕವನ್ನು ಪ್ರವೇಶಿಸಲಿದೆ. ಕರ್ನಾಟಕದಲ್ಲಿ ಏಳು ಜಿಲ್ಲೆಗಳನ್ನು ಮುಟ್ಟಿ ಒಟ್ಟು 450 ಕಿಲೋಮೀಟರ್ ಪಾದಯಾತ್ರೆಯ ಮೂಲಕ ಚಲಿಸಿ ಕರ್ನಾಟಕದ ಮೂಲಕ ಸಂಚರಿಸಲಿದೆ.