Home Education KCET Result 2022 : ‘ಸಿಇಟಿ’ ಪರಿಷ್ಕೃತ ರ‌್ಯಾಂಕ್ ಪಟ್ಟಿಯ ದಿನಾಂಕ ಪ್ರಕಟ |

KCET Result 2022 : ‘ಸಿಇಟಿ’ ಪರಿಷ್ಕೃತ ರ‌್ಯಾಂಕ್ ಪಟ್ಟಿಯ ದಿನಾಂಕ ಪ್ರಕಟ |

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ 2022 (CET 2022) ಪರಿಷ್ಕೃತ ರ‌್ಯಾಂಕ್ ಪಟ್ಟಿಯ ಫಲಿತಾಂಶವನ್ನು ಕರ್ನಾಟಕ ಪ್ರಾಧಿಕಾರ ಅ.1 ಕ್ಕೆ ಮುಂದೂಡಿದೆ.

ಸೆ. 29 ರಂದು ಪಟ್ಟಿ ಪ್ರಕಟವಾಗಲಿದೆ ಎಂದು ಕರ್ನಾಟಕ ಪ್ರಾಧಿಕಾರ ಪ್ರಕಟಣೆ ಹೊರಡಿಸಿತಾದರೂ ತಾಂತ್ರಿಕ ಕೆಲಸಗಳು ನಡೆಯಬೇಕಿರುವ ಹಿನ್ನೆಲೆ ಕಾರಣಾಂತರಗಳಿಂದ ಸಿಇಟಿ 2022 ಪರಿಷ್ಕೃತ ರ್ಯಾಂಕ್ ಪಟ್ಟಿಯ ಫಲಿತಾಂಶವನ್ನು ಕರ್ನಾಟಕ ಪ್ರಾಧಿಕಾರ ಅ.1 ಕ್ಕೆ ಮುಂದೂಡಿದೆ.

ಪರಿಷ್ಕೃತ ರ್ಯಾಂಕ್ ಪಟ್ಟಿ ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಮಾತ್ರ ಅನ್ವಯವಾಗಲಿದೆ. ಬೇರೆ ಯಾವುದೇ ಬಿ.ಎಸ್ಸಿ, ಕೃಷಿ, ಪಶುಸಂಗೋಪನೆ, ಯೋಗ ಕೋರ್ಸ್ ಗಳಿಗೆ ಅನ್ವಯವಾಗುವುದಿಲ್ಲ ಎನ್ನಲಾಗಿದೆ.

ಪರಿಷ್ಕೃತ ರ್ಯಾಂಕ್ ಪಟ್ಟಿಗಾಗಿ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಕಾಯುತ್ತಿದ್ದು, ಸೆ. 29 ರಂದು ಪಟ್ಟಿ ಪ್ರಕಟವಾಗಲಿದೆ ಎಂದು ಈ ಮೊದಲು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದರು