Home News ಮಗಳು ನಟಿಯಾಗಲು ಇಚ್ಚಿಸಿದ್ರೆ ಆಕೆಯನ್ನೂ ಬಿಡೋದಿಲ್ಲ, ಆಗ ಮಗಳೊಂದಿಗೂ ಮಲಗುತ್ತಿದ್ದೆ ಎಂದ 60 ವರ್ಷದ ನಿರ್ಮಾಪಕ...

ಮಗಳು ನಟಿಯಾಗಲು ಇಚ್ಚಿಸಿದ್ರೆ ಆಕೆಯನ್ನೂ ಬಿಡೋದಿಲ್ಲ, ಆಗ ಮಗಳೊಂದಿಗೂ ಮಲಗುತ್ತಿದ್ದೆ ಎಂದ 60 ವರ್ಷದ ನಿರ್ಮಾಪಕ – ಈ ನಟಿ ಆರೋಪ!

Hindu neighbor gifts plot of land

Hindu neighbour gifts land to Muslim journalist

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಆಗಾಗೇ ಕಾಸ್ಟಿಂಗ್ ಕೌಚ್ ಸದ್ದು ಮಾಡುತ್ತಿರುತ್ತದೆ. ಅದಕ್ಕೆ ಹೊಸ ಸೇರ್ಪಡೆ ನಟಿ ರತನ್ ರಜಪೂತ್. ಆಕೆ ತನಗಾದ ಒಂದು ಅನುಭವವನ್ನು ಹೇಳಿಕೊಂಡಿದ್ದಾಳೆ

ಹಿಂದಿ ಕಿರುತೆರೆಯಲ್ಲಿ ಜನಂ ಮೋಹೇ ಬಿತಿಯ ಹಿ ಕಿಚೋ ಧಾರವಾಹಿ ಮೂಲಕ ಜನಮನ್ನಣೆ ಪಡೆದ ಈ ರತನ್ ರಜಪೂತ್ ತಮ್ಮ ವೃತ್ತಿ ಬದುಕಿನಲ್ಲಿ ಆಗಿದ್ದ ಕರಾಳ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

ಮಾಧ್ಯಮವೊಂದರಲ್ಲಿ ಮಾತನಾಡಿದ್ದ ರತನ್ ಅವರು, 14 ವರ್ಷಗಳ ಹಿಂದೆ ಸಿನಿಮಾಕ್ಕಾಗಿ ಮುಂಬೈಗೆ ಹೋಗಿದ್ದೆ. ಅಲ್ಲಿ 60 ವರ್ಷದ ನಿರ್ಮಾಪಕರೊಬ್ಬರನ್ನು ಭೇಟಿಯಾಗಿದ್ದೆ. ಅವರು ನನ್ನನ್ನು ನೋಡಿ ನಿನ್ನ ಸಂಪೂರ್ಣ ಲುಕ್ ಬದಲಾಯಿಸಬೇಕು. ಆಗ ದೊಡ್ಡ ನಟಿ ಆಗ್ತಿಯಾ ಅದಕ್ಕೆ ಆಗುವ ವೆಚ್ಚವನ್ನು ನಾನು ಭರಿಸುತ್ತೇನೆ. ಅದಕ್ಕೆ ನೀನು ನನ್ನೊಂದಿಗೆ ಸ್ನೇಹಿತೆ ಆಗಿರಬೇಕು ಎಂದು ಕೇಳಿದರು.

ಆಗ ನಾನು ನಿಮ್ಮ ಮಗಳಿನ ವಯಸ್ಸಿನವಳು ಸರ್ ಅಂದೆ. ಅದಕ್ಕೆ ಅವರು ನನ್ನ ಮಗಳು ನಟಿಯಾಗಲು ಬಯಸಿದರೆ ಅವಳನ್ನೂ ಬಿಡಲ್ಲ.ಆಗ ಅವಳೊಂದಿಗೂ ನಾನು ಮಲಗುತ್ತಿದ್ದೆ ಎಂದು ಹೇಳಿದ್ದರು. ನಾನು ಬೆಚ್ಚಿ ಬಿದ್ದು ತಡ ಮಾಡದೆ ಅಲ್ಲಿಂದ ಹೊರಟು ಬಂದುಬಿಟ್ಟಿದ್ದೆ ಎಂದರು. ಈ ಘಟನೆ ನಂತರ ನಾನು ಮತ್ತೆ ಸಿನಿಮಾ ಇಂಡಸ್ಟ್ರಿಗೆ ಹೋಗಿ ನಟಿಯಾಗುವ ಪ್ರಯತ್ನವನ್ನು ಮಾಡಿಲ್ಲ ಎಂದು ರತನ್ ರಜಪೂತ್ ಹೇಳಿದ್ದಾರೆ.