SBI PO Recruitment 2022 : 1673 PO ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ , ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

Share the Article

ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ( SBI) 1673 ಪ್ರೊಬೇಷನರಿ ಆಫೀಸರ್ / ಪಿಒ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 1673 ಪಿಒ ಹುದ್ದೆಗಳ ಪೈಕಿ ಹೊಸ ಹುದ್ದೆಗಳು ಮತ್ತು ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಎಸ್‌ಸಿ -270, ಎಸ್‌ಟಿ – 131, ಒಬಿಸಿ-464, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ – 160, ಜೆನೆರಲ್ ಅಭ್ಯರ್ಥಿಗಳಿಗೆ 648 ಹುದ್ದೆಗಳಿವೆ.

ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅಕ್ಟೋಬರ್ 12, 2022 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ : ಯಾವುದೇ ಪದವಿ ಪಾಸ್
ವಯೋಮಿತಿ : ಕನಿಷ್ಠ 21 ವರ್ಷ ಆಗಿರಬೇಕು.
ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ,ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ವಿಶೇಷ ಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಿದ್ದು, ಇದಕ್ಕೆ ಪ್ರವೇಶ ಪತ್ರವನ್ನು ನವೆಂಬರ್ ಮೊದಲವಾರ ಅಥವಾ ಎರಡನೇ ವಾರ ಬಿಡುಗಡೆ ಮಾಡಲಾಗುತ್ತದೆ. ತರಬೇತಿಯನ್ನು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆಸಲಾಗುತ್ತದೆ.

ಎಸ್‌ಬಿಐ ಪ್ರೊಬೇಷನರಿ ಆಫೀಸರ್ ನೇಮಕ ಪ್ರಕ್ರಿಯೆಯ ಕಂಪ್ಲೀಟ್ ವೇಳಾಪಟ್ಟಿ

ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22-09-2022
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 12-10-2022
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 12-10-2022
ಪ್ರಿಲಿಮ್ಸ್ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್ ಆರಂಭ
: 2022 ಡಿಸೆಂಬರ್ 1 ಅಥವಾ 2ನೇ ವಾರ.
ಫೇಸ್ 1 ಆನ್‌ಲೈನ್ ಪ್ರಿಲಿಮ್ಸ್ ಪರೀಕ್ಷೆ ದಿನಾಂಕ : 17,18, 19, 20 ಡಿಸೆಂಬರ್ 2022.
ಪ್ರಿಲಿಮ್ಸ್ ಪರೀಕ್ಷೆ ಫಲಿತಾಂಶ : ಡಿಸೆಂಬರ್ 2022/ಜನವರಿ 2023
ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಡೌನ್‌ಲೋಡ್ ಆರಂಭ
ದಿನಾಂಕ : ಡಿಸೆಂಬರ್ 2022 / ಜನವರಿ 2023 ಆನ್‌ಲೈನ್ ಮುಖ್ಯ ಪರೀಕ್ಷೆ ದಿನಾಂಕ : ಡಿಸೆಂಬರ್ 2022
/ ಜನವರಿ 2023
ಮುಖ್ಯ ಪರೀಕ್ಷೆ ಫಲಿತಾಂಶ ದಿನಾಂಕ : ಫೆಬ್ರುವರಿ 2023 ಫೇಸ್-3 ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್ ಆರಂಭ
ದಿನಾಂಕ ಫೆಬ್ರವರಿ 2023
ಫೇಸ್-3 ಸೈಕೋಮೆಟ್ರಿಕ್ ಟೆಸ್ಟ್ ದಿನಾಂಕ : ಫೆಬ್ರುವರಿ/
ಮಾರ್ಚ್ 2023
ಸಂದರ್ಶನ ಮತ್ತು ಗುಂಪು ಚರ್ಚೆ ದಿನಾಂಕ ಫೆಬ್ರುವರಿ /
ಮಾರ್ಚ್ 2023
ಅಂತಿಮ ಫಲಿತಾಂಶ ಬಿಡುಗಡೆ ದಿನಾಂಕ : ಮಾರ್ಚ್ 2023

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply