PETC ಉಚಿತ ತರಬೇತಿ ಅರ್ಹತಾ ಪರೀಕ್ಷೆ ಅರ್ಜಿಗೆ
ಅವಧಿ ವಿಸ್ತರಣೆ |

2022-23ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ / ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಅಭ್ಯರ್ಥಿಗಳಿಗೆ ಯುಪಿಎಸ್‌ಸಿ, ಕೆಎಎಸ್, ಗ್ರೂಪ್ ಸಿ ಪರೀಕ್ಷೆ, ಬ್ಯಾಂಕಿಂಗ್ ಪರೀಕ್ಷೆ, ಎಸ್‌ಎಸ್‌ಸಿ, RRB ಪರೀಕ್ಷೆ, ನ್ಯಾಯಾಂಗ ಸೇವೆ ಪರೀಕ್ಷೆಗಳಿಗೆ ಪೂರ್ವ ತರಬೇತಿ ನೀಡಲಾಗುತ್ತದೆ. ಆಸಕ್ತರು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.

 

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ವತಿಯಿಂದ ನೀಡಲಾಗುವ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಸೆಪ್ಟೆಂಬರ್ 20 ರವರೆಗೆ ಮಾತ್ರ ಅವಕಾಶ ನೀಡಿ ಅಧಿಸೂಚಿಸಲಾಗಿತ್ತು. ಇದೀಗ ಅರ್ಜಿಗೆ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27-09-2022
ರಾತ್ರಿ 08 ಗಂಟೆವರೆಗೆ

ವಿದ್ಯಾರ್ಹತೆ : ಪದವಿ ವ್ಯಾಸಂಗ ಮಾಡುತ್ತಿರುವ |
ಯಾವುದೇ ಪದವಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಸದರಿ ಅಭ್ಯರ್ಥಿಗಳಿಗೆ ಶಿಷ್ಯವೇತನವನ್ನು ಸರ್ಕಾರದಿಂದ ಮಂಜೂರಾದ ದರದಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಮತ್ತು ತರಬೇತಿ ವೆಚ್ಚವನ್ನು ಸಂಸ್ಥೆಗಳಿಗೆ ಪಾವತಿಸಲಾಗುವುದು.

ವಯಸ್ಸಿನ ಅರ್ಹತೆ: ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ ಮೀರಿರಬಾರದು.

ಆದಾಯಮಿತಿ : ಎಲ್ಲಾ ಮೂಲಗಳಿಂದ ರೂ.5.00 ಲಕ್ಷ ಮೀರಿರಬಾರದು.

ಯಾವ ಪರೀಕ್ಷೆಗೆ ಎಷ್ಟು ತಿಂಗಳು ತರಬೇತಿ :
ಯುಪಿಎಸ್‌ಸಿ : 7 ತಿಂಗಳು
ಕೆಎಎಸ್ 7 ತಿಂಗಳು
ಗ್ರೂಪ್ ಸಿ ಪರೀಕ್ಷೆ : 3 ತಿಂಗಳು
ಬ್ಯಾಂಕಿಂಗ್ ಪರೀಕ್ಷೆ : 3 ತಿಂಗಳು
ಸಿಬ್ಬಂದಿ ನೇಮಕಾತಿ ಆಯೋಗದ ಪರೀಕ್ಷೆ : 3 ತಿಂಗಳು
ಆರ್‌ಆರ್‌ಬಿ  ಪರೀಕ್ಷೆ : 3 ತಿಂಗಳು

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಗೆ ಅನುಗುಣವಾಗಿ ಸೀಟು ಲಭ್ಯ ಸಂಖ್ಯೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಶಿಷ್ಯವೇತನ ಯಾವ ಪರೀಕ್ಷೆ ತರಬೇತಿಗೆ ಎಷ್ಟು?
ಯುಪಿಎಸ್‌ಸಿ ಪರೀಕ್ಷೆ ತರಬೇತಿಗೆ ದೆಹಲಿ’ಗೆ ರೂ.10,000
ಹೈದರಾಬಾದ್ – ರೂ.8000,
ಬೆಂಗಳೂರು – ರೂ.6000,
ರಾಜ್ಯದ ಇತರೆ ಸ್ಥಳಗಳಿಗೆ ರೂ.5000.
ಕೆಎಎಸ್ ಪರೀಕ್ಷೆಗೆ ರೂ.4000.
ಇತರೆ ಎಲ್ಲ ಪರೀಕ್ಷೆಗಳ ತರಬೇತಿಗೆ ರೂ.3000.

ಯಾವ ಪರೀಕ್ಷೆಗೆ ಎಷ್ಟು ಅಭ್ಯರ್ಥಿಗಳ ಆಯ್ಕೆ?
ಯುಪಿಎಸ್‌ಸಿ ಪರೀಕ್ಷೆಗಳು : 577
ಕೆಎಎಸ್ ಪರೀಕ್ಷೆ : 695
ಸರ್ಕಾರಿ ಗ್ರೂಪ್ ಸಿ ಪರೀಕ್ಷೆ 1900
ಬ್ಯಾಂಕಿಂಗ್ ಪರೀಕ್ಷೆ : 1900
ಸಿಬ್ಬಂದಿ ನೇಮಕಾತಿ ಆಯೋಗದ ಪರೀಕ್ಷೆ : 1755
ಆರ್‌ಆರ್‌ಬಿ ಪರೀಕ್ಷೆ : 1755
ನ್ಯಾಯಾಂಗ ಸೇವಾ ಪರೀಕ್ಷೆಗಳು : 270

ಒಟ್ಟು :  8852

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.