ವಕೀಲೆಯೋರ್ವಳ ಮೇಲೆ ಹಾಡಹಗಲೇ ಕುಡುಗೋಲಿನಿಂದ ವಕೀಲರ ಕಚೇರಿಯಲ್ಲೇ ಡೆಡ್ಲಿ ಅಟ್ಯಾಕ್ | ಕಾರಣ…

ಮಹಿಳಾ ವಕೀಲೆಯೋರ್ವರ ಮೇಲೆ ಹಾಡಹಗಲಿನಲ್ಲಿಯೇ ಅಟ್ಯಾಕ್ ಮಾಡಿದ ಘಟನೆಯೊಂದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಹೌದು, ದುಷ್ಕರ್ಮಿಯೋರ್ವ ಕುಡುಗೋಲಿನಿಂದ ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದು, ಇದರಿಂದಾಗಿ, ಮಹಿಳೆಯ ಮುಖ ಹಾಗೂ ಕೈಗಳಿಗೆ ಗಂಭೀರವಾಗಿ ಗಾಯವಾಗಿ ರಕ್ತಸ್ರಾವವಾಗಿದೆ.

 

ಈ ಘಟನೆ ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಮಹಿಳಾ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಜಮೀಲಾ ಬಾನು ಕುಮಾರನ್ ಎಂದು ಗುರುತಿಸಲಾಗಿದೆ.

ತಾವು ನಿರ್ವಹಿಸುತ್ತಿರುವ ಹಿಂದಿನ ಪ್ರಕರಣಗಳ ಬಗ್ಗೆ ಕೆಲವು ಫೈಲ್‍ಗಳನ್ನು ತೆಗೆದುಕೊಳ್ಳಲು ವಕೀಲೆ ತಮ್ಮ ಮಗಳೊಂದಿಗೆ ವಕೀಲರ ಕಚೇರಿಗೆ ಬಂದಾಗ ಈ ಘಟನೆ ಏಕಾಏಕಿಯಾಗಿ ನಡೆದಿದೆ. ಕಚೇರಿಗೆ ನುಗ್ಗಿದ ವ್ಯಕ್ತಿಯೋರ್ವ ಜಮೀಲಾ ಬಾನು ಅವರ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ತಾಯಿಯನ್ನು ರಕ್ಷಿಸಲು ಬಂದ ಮಗಳು ಕೂಡ ಗಾಯಗೊಂಡಿದ್ದಾರೆ.

ತಲೆ ಮತ್ತು ಕೈಗಳಿಗೆ ತೀವ್ರಗಾಯಗೊಂಡ ಜಮೀಲಾ ಬಾನು ಅವರು ಅಳುತ್ತಿರುವ ಶಬ್ಧ ಕೇಳಿಸಿಕೊಂಡು ಸ್ಥಳೀಯರು ಆಗಮಿಸಿದಾಗ, ಆರೋಪಿ ತನ್ನ ಕುಡುಗೋಲನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಕೂಡಲೇ ಆಕೆಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave A Reply

Your email address will not be published.