Good News : ರೈತರೇ ನಿಮಗೆ ಗುಡ್ ನ್ಯೂಸ್ : ಮೀನುಗಾರರಂತೆ ರೈತರಿಗೂ ಡೀಸೆಲ್ ರಿಯಾಯ್ತಿ

ರೈತರಿಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದೆ. ಇದೊಂದು ಭರ್ಜರಿ ಸಿಹಿ ಸುದ್ದಿ ಎಂದೇ ಹೇಳಬಹುದು. ಇಲ್ಲಿಯವರೆಗೆ ಮೀನುಗಾರರಿಗೆ ನೀಡಲಾಗುತ್ತಿರುವ ಡೀಸೆಲ್ ಸಬ್ಸಿಡಿ ಮಾದರಿಯಲ್ಲಿಯೇ ರೈತರಿಗೂ “ರೈತ ಶಕ್ತಿ ಯೋಜನೆ” ಮೂಲಕ ಡೀಸೆಲ್ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಇದೊಂದು ರೈತರಿಗೆ ಖುಷಿಯ ವಿಚಾರ ಎಂದೇ ಹೇಳಬಹುದು.

 

” ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ರೈತ ಶಕ್ತಿ ಯೋಜನೆ ಜಾರಿಗೊಳಿಸಿದೆ. ಸಾಮಾನ್ಯವಾಗಿ ರೈತರು ಬಿತ್ತನೆ ಸೇರಿ ಕೃಷಿ ಚಟುವಟಿಕೆಗಳಿಗೆ ಪ್ರತಿ ಎಕರೆಗೆ 25 ಲೀಟರ್ ಡೀಸೆಲ್ ಖರ್ಚು ಮಾಡುತ್ತಾರೆ. ಎಕರೆಗೆ 20 ಲೀಟರ್ ಗೆ ತಲಾ 25 ರೂ.ರಂತೆ ರಿಯಾಯ್ತಿಗೆ ಆಗ್ರಹಿಸಿದ್ದೆ, ಆದರೆ ಸಿಎಂ ಬೊಮ್ಮಾಯಿ ಎಕರೆಗೆ 10 ಲೀಟರ್ ಗೆ 25 ರೂ.ನಂತೆ ಐದು ಎಕೆರೆಗೆ 1,250 ರೂ. ರಿಯಾಯ್ತಿ ನೀಡಲು ಒಪ್ಪಿಗೆ ನೀಡಿದ್ದಾರೆ ” ಎಂದು ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡುತ್ತಾ ತಿಳಿಸಿದ್ದಾರೆ.

Leave A Reply

Your email address will not be published.