ಇನ್ಮುಂದೆ ಮೊಬೈಲ್ ಕಳ್ಳತನವಾದ್ರೆ ನೋ ಟೆನ್ಶನ್ | ಇದಕ್ಕಾಗಿಯೇ ಬಂದಿದೆ ಹೊಸ ಅಸ್ತ್ರ!
ಕಳ್ಳತನ ಎಂಬುದು ಇತ್ತೀಚೆಗೆ ಉದ್ಯೋಗವಾಗಿ ಹೋಗಿದೆ. ಯಾಕೆಂದರೆ, ಪ್ರತೀ ದಿನವೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಅದರಲ್ಲೂ ಈಗಿನ ಕಳ್ಳರು ಕಣ್ಣು ಹಾಕುತ್ತಿರುವುದು ಚಿನ್ನ, ಹಣಕ್ಕಲ್ಲಾ. ಬದಲಾಗಿ, ಮೊಬೈಲ್ ಫೋನ್ ಗೆ. ಹೌದು. ಅದೆಷ್ಟೋ ಜನರ ಮೊಬೈಲ್ ಕಳ್ಳತನವಾಗಿದ್ದು, ಜನರು ರೋಸಿ ಹೋಗಿದ್ದಾರೆ.
ಆದ್ರೆ, ಇದೀಗ ಇದಕ್ಕೆಲ್ಲ ಫುಲ್ ಸ್ಟಾಪ್ ಎಂಬಂತೆ ಬೆಂಗಳೂರು ಪೊಲೀಸರು ಒಂದು ಅಸ್ತ್ರವನ್ನೇ ಹುಡುಕಿದ್ದಾರೆ. ಹೀಗಾಗಿ, ಇನ್ಮುಂದೆ ಮೊಬೈಲ್ ಕಳವಾದ್ರೂ ನೋ ಟೆನ್ಶನ್. ಯಾಕೆಂದರೆ ಅವರಿಗೂ ಕಳ್ಳತನ ಮಾಡಿ ಉಪಯೋಗವೇ ಇರೋದಿಲ್ಲ. ಹೌದು. ಮೊಬೈಲ್ ಕದ್ದರೂ ಕೂಡ ಅದನ್ನು ಬಳಸುವುದು ಅಸಾಧ್ಯವಾಗಿದೆ.
ಬೆಂಗಳೂರು ಮಹಾನಗರದಲ್ಲಿ ಸಿಇಐಆರ್ ಅಪ್ಲಿಕೇಶನ್ ಮೂಲಕ ಮೊಬೈಲ್ ಫೋನ್ ಕಳ್ಳತನ ತಡೆಗೆ ಪೊಲೀಸರು ಯೋಜನೆ ರೂಪಿಸಿದ್ದಾರೆ. ಅಪ್ಲಿಕೇಶನ್ ಮೂಲಕ ಮೊಬೈಲ್ ಫೋನ್ ಕಳ್ಳರಿಗೆ ಶಾಕ್ ನೀಡಲು ಪೊಲೀಸರು ಮುಂದಾಗಿದ್ದು, ಇನ್ನು ಮುಂದೆ ಮೊಬೈಲ್ ಕದ್ದರೂ ಬಳಸುವಂತಿಲ್ಲ.
ಕೇಂದ್ರ ಸರ್ಕಾರ ರಚಿಸಿದ್ದ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಆಪ್ ಬಳಕೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಮೊಬೈಲ್ ಕಳೆದುಕೊಂಡವರು ಬೆಂಗಳೂರು ಪೊಲೀಸರ ಇ- ಲಾಸ್ಟ್ ನಲ್ಲಿ ಮೊಬೈಲ್ ಐಎಂಇಐ ಸಂಖ್ಯೆಯೊಂದಿಗೆ ದೂರು ದಾಖಲಿಸಬೇಕು. ನಂತರ ಸಿಇಐಆರ್ ಅಪ್ಲಿಕೇಶನ್ ಗೆ ಮಾಹಿತಿ ರವಾನೆಯಾಗಲಿದ್ದು, ಮೊಬೈಲ್ ಅಕ್ಟಿವೇಶನ್ ಸಂಪೂರ್ಣ ಬ್ಲಾಕ್ ಆಗುತ್ತದೆ.
ನೋಂದಾಯಿತ ಸಂಖ್ಯೆಯ ಮೊಬೈಲ್ ಅನ್ನು ಬ್ಲಾಕ್ ಮಾಡಲಿದ್ದು, ಯಾವುದೇ ರೀತಿಯಲ್ಲಿ ಅದು ಕಾರ್ಯನಿರ್ವಹಿಸುವುದಿಲ್ಲ. ಮೊಬೈಲ್ ಕಳವು ಮಾಡಿದರೂ ಅದು ಬಳಸಲು ಬರುವುದಿಲ್ಲ. ಈ ಮೂಲಕ ಮೊಬೈಲ್ ಕಳವು ತಡೆಗೆ ಪೊಲೀಸರು ಯೋಜನೆ ರೂಪಿಸಿದ್ದಾರೆ. ಅಷ್ಟೇ ಅಲ್ಲದೆ, ಕಳವು ಮಾಡಿದ ಫೋನ್ ಆನ್ ಆದ ಕೂಡಲೇ ಲೊಕೇಶನ್ ಪತ್ತೆಯಾಗುತ್ತದೆ. ಈ ಮೂಲಕ ಬೆಂಗಳೂರು ಜನತೆಗೆ ಮೊಬೈಲ್ ಕಳ್ಳರಿಂದ ರಿಲೀಫ್ ಸಿಕ್ಕಿದೆ.