Home latest Viral video : ಏನೆಲ್ಲಾ ಕೆಲಸ ಮಾಡಬೇಕು ಹುಡ್ಗೀರ್ನಾ ಇಂಪ್ರೆಸ್ ಮಾಡೋಕೆ!!! ಈ ಸ್ಕೂಲ್ ಹುಡುಗ...

Viral video : ಏನೆಲ್ಲಾ ಕೆಲಸ ಮಾಡಬೇಕು ಹುಡ್ಗೀರ್ನಾ ಇಂಪ್ರೆಸ್ ಮಾಡೋಕೆ!!! ಈ ಸ್ಕೂಲ್ ಹುಡುಗ ಹುಡುಗೀನಾ ಮೆಚ್ಚಿಸೋಕೆ ಏನು ಮಾಡಿದ ನೋಡಿ!!!

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ
ರೀತಿಯ ವಿಡಿಯೋಗಳು ಹರಿದಾಡುತ್ತಿರುತ್ತದೆ. ಅವುಗಳಲ್ಲಿ ಕೆಲವೊಂದು ಭಯಾನಕವಾಗಿದ್ದರೆ, ಇನ್ನೂ ಕೆಲವು ವಿಡಿಯೋಗಳನ್ನು ನೋಡಿದರೆ ನಗು ತಡೆಯಲಿಕ್ಕಾಗುವುದಿಲ್ಲ. ಇಲ್ಲೊಂದು ವೀಡಿಯೋ ಈಗ ಭಾರೀ ವೈರಲ್ ಆಗಿದೆ. ಇದು ಸ್ಕೂಲ್ ಸ್ಟುಡೆಂಟ್ಸ್ ಗೆ ಸಂಬಂಧಪಟ್ಟದ್ದು. ಹಾಗಾಗಿ ಇದು ಸಖತ್ ವೈರಲಾಗಿದೆ ಎಂದೇ ಹೇಳಬಹುದು.

ಕೆಲವು ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಒಬ್ಬ ಹುಡುಗ ಶಾಲೆಯ ಜಗಲಿ ಮೇಲೆ ಕುಳಿತಿದ್ದಾನೆ. ಸುಮ್ಮನೆ ಕುಳಿತಿಲ್ಲ. ಕೈಯಲ್ಲಿ ಒಂದು ಚಪ್ಪಲಿ ಇದೆ. ಆ ಚಪ್ಪಲಿಯನ್ನು ರಿಪೇರಿ ಮಾಡುವುದರಲ್ಲಿ ಹುಡುಗ ಮಗ್ನನಾಗಿ ಬಿಟ್ಟಿದ್ದಾನೆ. ಪಕ್ಕದಲ್ಲಿ ನಿಂತಿರುವ ಹುಡುಗಿ ಹುಡುಗನ ಹೆಗಲ ಮೇಲೆ ಕೈ ಇಟ್ಟುಕೊಂಡು, ನಿಂತಿದ್ದಾಳೆ. ಆ ಹುಡುಗಿ ನಿಂತಿರುವ ಭಂಗಿ ನೋಡಿದರೆ ಹುಡುಗ ರಿಪೇರಿ ಮಾಡುತ್ತಿರುವುದು ಅದೇ ಹುಡುಗಿಯ ಚಪ್ಪಲಿ ಎನ್ನುವುದು ತಿಳಿಯುತ್ತದೆ. ಆ ಹುಡುಗಿ ತನ್ನ ಸ್ನೇಹಿತರೊಂದಿಗೆ ಮಾತಿನಲ್ಲಿಯೇ ಮುಳುಗಿ ಹೋಗಿದ್ದಾಳೆ. ಆದರೆ ಹುಡುಗ ಮಾತ್ರ ಚಪ್ಪಲಿ ಹಿಡಿದು ರಿಪೇರಿ ಮಾಡುತ್ತಿರುವುದು ಕಾಣುತ್ತದೆ.

ಈ ವೀಡಿಯೋವನ್ನು ಅನೇಕರು ವೀಕ್ಷಿಸಿದ್ದಾರೆ. ಮಾತ್ರವಲ್ಲ ವಿಡಿಯೋ ನೋಡಿದ ನೆಟಿಜನ್‌ಗಳು ಇದರ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹುಡುಗಿಗಾಗಿ ಏನೆಲ್ಲಾ ಕೆಲಸ ಮಾಡಬೇಕಾಗುತ್ತದೆ ಎಂದು ನೆಟ್ಟಿಗರು ಕಾಮಿಡಿಯಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ಇದನ್ನು ಮಾನವೀಯತೆಯ ಕೆಲಸ ಎಂದು ಕೂಡಾ ಹೇಳಿ, ಹುಡುಗನ ಕೆಲಸವನ್ನು ಮೆಚ್ಚಿದ್ದಾರೆ.

https://www.instagram.com/reel/Ciet4bGoo2I/?utm_source=ig_web_copy_link