ಪ್ರೀತಿಸಿ ಮದುವೆಯಾದ ಟೆಕ್ಕಿ ಫಸ್ಟ್ ನೈಟ್ ದಿನವೇ ಪ್ರಸ್ತದ ಕೋಣೆಯಲ್ಲೇ ದಾರುಣ ಸಾವು | ಕೇಸು ದಾಖಲು

ಸಾಫ್ಟ್ ವೇರ್ ಇಂಜಿನಿಯರ್ ಓರ್ವ ಮದುವೆಯಾದ ಎರಡೇ ದಿನಕ್ಕೆ ಸಾವಿಗೀಡಾದ ದಾರುಣ ಘಟನೆಯೊಂದು ನಡೆದಿದೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿಯಲ್ಲಿ (Madanapalli) ದಾರುಣ
ಘಟನೆ ನಡೆದಿದೆ

 

ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ, ಅದೇ ಊರಿನ ಸಾಫ್ಟ್‌ವೇರ್ ಇಂಜಿನಿಯರ್ ಸಿರಿಶಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೀತಿಗೆ ಕುಟುಂಬದವರ ಒಪ್ಪಿಗೆ ಕೂಡಾ ದೊರಕಿತ್ತು. ಹಾಗಾಗಿ ಎರಡು ದಿನಗಳ ಹಿಂದೆ ಸಿರಿಶಾ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.

ಆದರೆ, ಮದುವೆಯಾದ ಎರಡೇ ದಿನದಲ್ಲಿ ವರಮಹಾಶಯ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮೃತನನ್ನು ತುಳಸಿ ಪ್ರಸಾದ್ ಎಂದು ಗುರುತಿಸಲಾಗಿದ್ದು, ಪಾಕಾಲ ಮಂಡಲದ ಪತ್ತಿಪತಿವಾರಿ ಪಲ್ಲಿ ನಿವಾಸಿ ಎಂದು ಗುರುತಿಸಲಾಗಿದೆ.

ಮದುವೆಯಾದ ಮೊದಲ ರಾತ್ರಿಯೇ (first night) ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.