Home Entertainment ನಟಿ ರೆಜಿನಾ ‘ಪುರುಷರ ಲೈಂಗಿಕ ಸಾಮರ್ಥ್ಯ ‘ 2 ನಿಮಿಷ’ ದ ಮ್ಯಾಗಿಗೆ ಸಮ ಜೋಕ್...

ನಟಿ ರೆಜಿನಾ ‘ಪುರುಷರ ಲೈಂಗಿಕ ಸಾಮರ್ಥ್ಯ ‘ 2 ನಿಮಿಷ’ ದ ಮ್ಯಾಗಿಗೆ ಸಮ ಜೋಕ್ – ತುಂಬಿದ ಸಭೆಯಲ್ಲಿ “ನನಗೆ ಸ್ಟಾಮಿನಾ” ಜಾಸ್ತಿ ಎಂದ ನಟ !!! ಕಕ್ಕಾಬಿಕ್ಕಿಯಾದ ನಟಿ

Hindu neighbor gifts plot of land

Hindu neighbour gifts land to Muslim journalist

ನಟಿ ರೆಜಿನಾ ಅವರು ಹೇಳಿದ ಒಂದು ಹಸಿ ಬಿಸಿ ಮಾತು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದುವೇ, “ಪುರುಷರ ಲೈಂಗಿಕ ಸಾಮರ್ಥ್ಯ ‘ಮ್ಯಾಗಿ’ ತರ ಎರಡು ನಿಮಿಷ ಅಷ್ಟೇ” ಎಂದು ರೆಜಿನಾ ಹೇಳಿದ್ದು. ಇದು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಹಾಗೂ ಇದರ ಬಗ್ಗೆ ತರಹೇವಾರಿ ಕಮೆಂಟ್ ಕೂಡಾ ಬಂದಿತ್ತು. ಆದರೆ ಈ ವಿಷಯದ ಬಗ್ಗೆ ತೆಲುಗು ನಟ ಅಡಿವಿ ಶೇಷ್ ಪ್ರತಿಕ್ರಿಯಿಸಿದ್ದು, ‘ನನಗೆ ಸ್ಟಾಮಿನಾ ಜಾಸ್ತಿ’ ಎಂಬ ಹೇಳಿಕೆ ಹೇಳಿ ಮತ್ತಷ್ಟು ಎಣ್ಣೆ ಹಾಕಿದ್ದಾರೆ.

ಸುಧೀರ್ ವರ್ಮಾ ನಿರ್ದೇಶನದ ‘ಶಾಕಿನಿ ಡಾಕಿನಿ’ ಚಿತ್ರದಲ್ಲಿ ರೆಜಿನಾ ಕಸಂದ್ರ ಹಾಗೂ ನಿವೇತಾ ಥಾಮಸ್ ಒಟ್ಟಿಗೆ ನಟಿಸಿದ್ದಾರೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಸೆಪ್ಟೆಂಬರ್ 16ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಸುರೇಶ್ ಬಾಬು ಡಿ, ಸುನಿತಾ ಮತ್ತು ಥಾಮಸ್ ಕಿನ್ ಚಿತ್ರವನ್ನು ನಿರ್ಮಿಸಿದ್ದಾರೆ. ಮಿಕ್ಕಿ ಜೆ. ಮೇಯರ್ ಸಂಗೀತ ಸಂಯೋಜಿಸಿದ್ದಾರೆ. ಆದರೆ ಓ ಸಿನಿಮಾಗಿಂತಲೂ ಈಗ ರೆಜಿನಾ ಹೇಳಿದ ಜೋಕ್ ಇತ್ತೀಚೆಗೆ ಸಖತ್ ಸದ್ದು ಮಾಡಿತ್ತು.

ಫುಡ್ ಯೂಟ್ಯೂಬ್ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೆಜಿನಾ ಹಾಗೂ ನಿವೇತಾ ಥಾಮಸ್ ಮಾತನಾಡಿದ್ದರು. ಈ ಸಂದರ್ಭದಲ್ಲಿ ಆ್ಯಂಕರ್, “ಮ್ಯಾಗಿ ಬಗ್ಗೆ ಒಂದು ಜೋಕ್ ಇದೆ ಏನಂದ್ರೆ, ಮ್ಯಾಗಿ 2 ನಿಮಿಷದಲ್ಲಿ ರೆಡಿ ಆಗುತ್ತೆ. ಆದರೆ ಹುಡುಗಿಯರು 2 ನಿಮಿಷಕ್ಕೆ ಮೇಕಪ್ ಹಾಕಿಕೊಂಡು ರೆಡಿ ಆಗುವುದಿಲ್ಲ” ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ರೆಜಿನಾ “ಹುಡುಗರು, ಮ್ಯಾಗಿ ಎರಡೂ ಒಂದೇ..2 ನಿಮಿಷದಲ್ಲಿ ಮುಗಿದು ಹೋಗುತ್ತೆ’ ಎಂಬ ಹಾಟ್ ಮಾತು ಹೇಳಿದ್ದರು.

ಆದರೆ ನಿನ್ನೆ ಸೆ.12 ರಂದು ರಾತ್ರಿ ‘ಶಾಕಿನಿ ಡಾಕಿನಿ’ ಸಿನಿಮಾ ಪ್ರೀರಿಲೀಸ್ ಈವೆಂಟ್ ನಡೀತು. ‘ಮೇಜರ್’ ಸಿನಿಮಾ ಖ್ಯಾತಿಯ ಅಡಿವಿ ಶೇಷ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ರೆಜಿನಾ ಜೊತೆ ಅಡಿವಿ ಶೇಷ್ ವೇದಿಕೆ ಏರಿದ್ದರು. “ಏನು ಇತ್ತೀಚೆಗೆ ಏನೋ ಹೇಳಿದ್ದೆ. ಹುಡುಗರು 2 ನಿಮಿಷದ ಮ್ಯಾಗಿ ಅಂತ ಏನೋ ಹೇಳಿದಂತೆ ಇತ್ತು. ನನಗೂ ಹೇಳು. ನಾನು ಬಹಳ ದಿನ ಸಿನಿಮಾ ಮಾಡ್ತೀನಿ, ನನಗೆ ಸ್ಟಾಮಿನಾ ಜಾಸ್ತಿ ಎಂದು ಕೆಲವರು ಹೇಳುತ್ತಿರುತ್ತಾರೆ” ಎಂದಿದ್ದಾರೆ.

ಆದರೆ ತುಂಬಿದ ಸಭೆಯಲ್ಲಿ, ಅಷ್ಟು ದೊಡ್ಡ ವೇದಿಕೆಯಲ್ಲಿ ಅಡಿವಿ ಶೇಷ್ ಈ ರೀತಿ ಕೇಳುತ್ತಾರೆ ಎಂದು ನಟಿ ರೆಜಿನಾ ಊಹಿಸಿರಲಿಲ್ಲ. ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ರೆಜಿನಾ “2 ನಿಮಿಷದಲ್ಲಿ ಹೇಳ್ತೀನಿ” ಎಂದು ಹೇಳ ಎಸ್ಕೇಪ್ ಆಗಿದ್ದಾರೆ.