Mazagon Dock 2022: ಬರೋಬ್ಬರಿ 1041 ಹುದ್ದೆಗಳಿಗೆ ಅರ್ಜಿ ಆಹ್ವಾನ |  ಐಟಿಐ, ಡಿಪ್ಲೊಮಾ  ಆದವರಿಗೆ ಆದ್ಯತೆ

ಮಝಗಾನ್ ಡಾಕ್ ಶಿಪ್‌ಬಿಲ್ಡರ್ಸ್‌ನಲ್ಲಿ (Mazagon Dock Shipbuilders Limited)  ಭರ್ಜರಿ ಉದ್ಯೋಗವಕಾಶ ಅವಕಾಶ ನೀಡಿದೆ. ಹುದ್ದೆಯ ವಿವರ, ಭರ್ತಿ, ಅರ್ಜಿ ಶುಲ್ಕ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅಭ್ಯರ್ಥಿಗಳು ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

 

ಒಟ್ಟು ಹುದ್ದೆ : 1041 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನಾನ್ ಎಕ್ಸಿಕ್ಯುಟಿವ್ (Non Executive) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಡಿಪ್ಲೊಮಾ, ಐಟಿಐ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆಯ ಹೆಸರು: ಮಝಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್
ಹುದ್ದೆಯ ಹೆಸರು: ನಾನ್ ಎಕ್ಸಿಕ್ಯೂಟಿವ್
ಹುದ್ದೆಗಳ ಸಂಖ್ಯೆ: 1041
ಉದ್ಯೋಗ ಸ್ಥಳ: ಮುಂಬೈ – ಮಹಾರಾಷ್ಟ್ರ
ವೇತನ: 13200-83180 ರೂ. ಪ್ರತಿ ತಿಂಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12 ಸೆಪ್ಟೆಂಬರ್ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಸೆಪ್ಟೆಂಬರ್ 2022

ವಯೋಮಿತಿ:ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 38 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು ಪ.ಜಾ, ಪ.ಪಂ ಅಭ್ಯರ್ಥಿಗಳು: 5 ವರ್ಷಗಳು ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ: ಪ.ಜಾ, ಪ.ಪಂ, ವಿಕಲಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು: 100 ರೂ.

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:  ಪರೀಕ್ಷೆ, ಕೌಶಲ್ಯ ಪರೀಕ್ಷೆ ಅನುಭವ, ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.