Home Entertainment Bigg boss kannada season 9 : ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ನಟ ಅನಿರುದ್ಧ್...

Bigg boss kannada season 9 : ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ನಟ ಅನಿರುದ್ಧ್ !!!

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಕನ್ನಡ ಓಟಿಟಿ ( Bigg Boss Kannada OTT) ಮೊದಲ ಸೀಸನ್ ಕೊನೆಯ ಹಂತಕ್ಕೆ ಬಂದಿದೆ. ಇನ್ನು ಮುಂದೆ ಟಿವಿ ಪರದೆಯಲ್ಲಿ ನಾವು ಬಿಗ್ ಬಾಸ್ ಕಾಣಬಹುದು. ಇದರ ಬಗ್ಗೆ ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಟಿವಿಯಲ್ಲಿ ಪ್ರಸಾರವಾಗಲಿರುವ ಬಿಗ್‌ಬಾಸ್ ಸೀನಸ್ 9ರ ಪ್ರೋಮೋವನ್ನು ಕೂಡಾ ರಿಲೀಸ್ ಮಾಡಿದೆ.

ಓಟಿಟಿಯಿಂದ ಕೆಲವು ಸ್ಪರ್ಧಿಗಳು ಬಿಗ್ ಬಾಸ್ ಟಿವಿ ಸೀಸನ್ ಗೆ ಹೋಗಲಿದ್ದಾರೆ. ಈಗಾಗಲೇ ಯಾರೆಲ್ಲ ದೊಡ್ಮನೆಗೆ ಹೋಗಬಹುದೆಂಬ ಚರ್ಚೆ ಜೋರಾಗಿದೆ. ಪ್ರತಿಬಾರಿಯಂತೆಯೇ ಈ ಸಲವೂ ಕೆಲವು ಊಹಾಪೋಹಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಹೆಸರುಗಳಲ್ಲಿ ಅತಿ ಹೆಚ್ಚಾಗಿ ಕೇಳಿ ಬರುತ್ತಿರುವುದು ನಟ ಅನಿರುದ್ಧ.

ಮೂಲಗಳ ಪ್ರಕಾರ, ಜೊತೆ ಜೊತೆಯಲಿ ಧಾರಾವಾಹಿಯಿಂದ ಕಾಂಟ್ರವರ್ಸಿ ಆಗಿ ಹೊರ ಬಂದಿರುವ ಅನಿರುದ್ಧ ಅವರು ಇದೀಗ ಟಿವಿ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆಂಬ ಚರ್ಚೆ ಜೋರಾಗಿ ಕೇಳಿಬರುತ್ತಿದೆ. ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಂದ ಬಳಿಕ ಅನಿರುದ್ಧ ಬಿಗ್ ಬಾಸ್ ಹೋಗಬಹುದೆಂದು ಅನೇಕರು ಭಾವಿಸುತ್ತಿದ್ದಾರೆ. ಆದರೆ ಧಾರಾವಾಹಿ ಮತ್ತು ಯಾವುದೇ ರಿಯಾಲಿಟಿ ಶೋಗಳಲ್ಲಿ ಅನಿರುದ್ಧ ಅವರನ್ನು ಬಳಸಿಕೊಳ್ಳಬಾದರು ಎಂದು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಂಗ ಸಂಸ್ಥೆಯಾದ ಟೆಲಿವಿಷನ್ ನಿರ್ದೇಶಕರ ಸಂಘ ಮನವಿ ಮಾಡಿರುವ ಕಾರಣ ಇದು ಸಾಧ್ಯವೇ ಎಂಬುದು ಇಲ್ಲಿ ಪ್ರಶ್ನೆಯಾಗಿದೆ.

ಅಂದ ಹಾಗೇ, ಬಿಗ್‌ಬಾಸ್ ತಂಡ ಕೂಡ ಅನಿರುದ್ಧ ಅವರನ್ನು ಸಂಪರ್ಕಿಸಿದೆಯಂತೆ.‌ ಹಾಗೆನೇ ಈ ಆಫರ್ ಗೆ ಅನಿರುದ್ಧ ಕೂಡಾ ಒಪ್ಪಿದ್ದಾರಂತೆ ಎನ್ನಲಾಗುತ್ತಿದೆ. ಈ ಕುರಿತು ವಾಹಿನಿಯಾಗಲಿ ಅಥವಾ ಅನಿರುದ್ಧ ಆಗಲಿ ಖಚಿತ ಪಡಿಸಿಲ್ಲ. ಈ ಎಲ್ಲ ಊಹಾಪೋಹಗಳಿಗೂ ಇನ್ನೇನೂ ಕೆಲವು ದಿನಗಳಲ್ಲಿ ಇದೆಲ್ಲದಕ್ಕೂ ಉತ್ತರ ಸಿಗಲಿದೆ.