ಮದುವೆಯಾದ ಮೂರೇ ತಿಂಗಳಿಗೆ ಗೊತ್ತಾಯಿತು ಕಹಿ ಸತ್ಯ | ಭಯಗೊಂಡ 52 ವರ್ಷದ ವರ ಆತ್ಮಹತ್ಯೆಗೆ ಯತ್ನಿಸಿದ…

ಅಪ್ರಾಪ್ತರ ಮದುವೆ ಕಾನೂನು ಬಾಹಿರ. ಇದು ಭಾರತದ ನಿಯಮ. ಆಗಿದ್ದೂ ಕೆಲವೊಂದು ಕಡೆ ಈ ವಿವಾಹ ನಡೆಯುತ್ತದೆ. ಸರಕಾರ ಎಷ್ಟೇ ಕಠಿಣ ಕಾನೂನು ತಂದರೂ ಕೂಡಾ, ಜನ ಅರ್ಥ ಮಾಡಿಕೊಳ್ಳುವುದಿಲ್ಲ. ಆದರೂ ಸಿಕ್ಕಿಬಿದ್ದ ನಂತರ ಆಗುವ ಅವಾಂತರ ಒಂದಾ ಎರಡಾ?

 

14 ವರ್ಷದ ಬಾಲಕಿಯನ್ನು 45 ವರ್ಷದ ವಿವಾಹಿತ ವ್ಯಕ್ತಿ ಮದುವೆಯಾಗಿರುವ ಘಟನೆ ಇತ್ತೀಚೆಗಷ್ಟೇ ನಡೆದಿತ್ತು. ಮದುವೆಯಾದ ಮೂರೇ ದಿನದಲ್ಲಿ
ವಿಷಯ ಬಹಿರಂಗವಾಗಿ ವರ, ಬಂಧನಕ್ಕೆ ಒಳಗಾಗಿದ್ದ. ಅದರ ಬೆನ್ನಿಗೇ ಇದೀಗ 52ರ ವಯಸ್ಸಿನವನೊಬ್ಬ ಮದುವೆಯ ವಿಚಾರಕ್ಕೆ ಸಂಬಂಧಿಸಿ ಎಡವಟ್ಟು ಮಾಡಿಕೊಂಡಿದ್ದಾನೆ. ಅನಂತರ ಭಯಗೊಂಡು, ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ಪ್ರಕರಣವೂ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಈ ಪ್ರಕರಣ ನಡೆದಿದೆ. 52 ವರ್ಷದ ಅನಿಲ್ ಎಂಬ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಮದುವೆಯಾಗಿದ್ದಾನೆ. ವಧು-ವರರಿಬ್ಬರೂ ಕಾರವಾರದ ನಿವಾಸಿಗಳಾಗಿದ್ದು, ಮದುವೆಯಾದ ಮೂರು ತಿಂಗಳ ಬಳಿಕ ವಧು ಅಪ್ರಾಪ್ತ ವಯಸ್ಸಿನವಳು ಎಂಬ ವಿಷಯ ಬಹಿರಂಗಗೊಂಡಿದೆ.

ಆದರೆ ಯಾವಾಗ ಈ ವಿಷಯ ಬಹಿರಂಗವಾಗವಾಯಿತೋ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅನಿಲ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ ಬಂಧನದ ಭೀತಿಯಿಂದ ಅನಿಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಜುಲೈ 19ರಂದು ಕಾರವಾರದ ದೇವಾಲಯೊಂದರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದ ಈತನಿಗೆ ಹಾಗೂ, ಮದುವೆಗೆ ಹೋದ ಸಂಬಂಧಿಕರು ಸೇರಿ ಒಟ್ಟು 60 ಜನರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ನೀಡಿದೆ. ವರ ಅನಿಲ್‌ನನ್ನು ಬಂಧಿಸಲಾಗಿದೆ. ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.